ಬೆಂಗಳೂರು: ‘ಬಿಗ್ ಬಾಸ್ ಹಿಂದಿ ಒಟಿಟಿ 2’ (Bigg Boss OTT) ಮೂಲಕ ಖ್ಯಾತಿ ಪಡೆದಿದ್ದ ಎಲ್ವಿಶ್ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದಾರೆ. ಇತ್ತೀಚೆಗೆ ಎಲ್ವಿಶ್ ರೆಸ್ಟೋರೆಂಟ್ ಒಂದರಲ್ಲಿ ಒಬ್ಬರಿಗೆ ಹೊಡೆದ ವಿಡಿಯೊ ವೈರಲ್ ಆಗಿತ್ತು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಾಗರ್ ಠಾಕೂರ್ ಅವರು ವಿಡಿಯೊ ಪ್ಲಾಟ್‌ಫಾರ್ಮ್‌ನಲ್ಲಿ ʻಮ್ಯಾಕ್ಸ್‌ಟರ್ನ್ʼ ಎಂಬ ಹೆಸರಿನಿಂದ ಖ್ಯಾತಿ ಪಡೆದವರು. ಸಾಗರ್ ಅವರು ಇತ್ತೀಚೆಗೆ ಎಲ್ವಿಶ್ ಯಾದವ್ ಮೇಲೆ ಆರೋಪ ಒಂದನ್ನು ಮಾಡಿದ್ದರು. ಎಲ್ವಿಶ್ ಯಾದವ್ ಅವರು ಬರುತ್ತಿದ್ದಂತೆ ಹ್ಯಾಂಡ್ಶೇಕ್ ಮಾಡಲು ಹೋಗಿದ್ದಾರೆ ಸಾಗರ್. ಈ ವೇಳೆ ಎಲ್ವಿಶ್ ಅವರು ಸಾಗರ್ ಮೇಲೆ ಹಲ್ಲೆ ಮಾಡಿದ್ದಾರೆ. ʻʻಎಲ್ವಿಶ್ ನನಗೆ ಬೆದರಿಕೆ ಹಾಕಿದ್ದಾರೆ. ಅವರು ಜನರನ್ನು ಕರೆ ತಂದು ಚೆನ್ನಾಗಿ ನನ್ನನ್ನು ಥಳಿಸಿದ್ದಾರೆ. ನನ್ನ ಬಳಿಯೂ ರೆಕಾರ್ಡಿಂಗ್ ಇದೆ. ನನ್ನ ತುಟಿ ಬಳಿ ಗಾಯವಾಗಿದೆ’ ಎಂದು ಸಾಗರ್ ಆರೋಪ ಮಾಡಿದ್ದರು. ಇದಾದ ಬೆನ್ನಲ್ಲೇ ಅವರು ವಿಡಿಯೊ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: Elvish Yadav: ಹಲ್ಲೆ ನಡೆಯುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಬಾಸ್ ಒಟಿಟಿ 2 ವಿನ್ನರ್!
#ElvishYadav and #Maxtern fight full video pic.twitter.com/X5Fn9Ejjgs
— Filmy_world (@filmy_world7) March 9, 2024
ಇದೀಗ ಎಲ್ವಿಶ್ ಯಾದವ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ‘ನನ್ನನ್ನು ಭೇಟಿ ಮಾಡಬೇಕು ಎಂದು ಎಲ್ವಿಶ್ ಯಾದವ್ ಹೇಳಿದ್ದರು. ಆದರೆ, ಅವರು ನನಗೆ ಹೊಡೆದರು’ ಎಂದು ಸಾಗರ್ ದೂರಿನಲ್ಲಿ ತಿಳಿಸಿದ್ದಾರೆ.
ಎಲ್ವಿಶ್ ಯಾದವ್ ವಿವಾದಗಳು ಹೊಸದೇನಲ್ಲ. ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಕೇಸ್ ದಾಖಲಾಗಿದೆ. ಅವರು ಈಗಾಗಲೇ ಕಾನೂನು ಸಂಕಷ್ಟದಲ್ಲಿದ್ದಾರೆ.