Site icon Vistara News

96th Academy Awards: ಆಸ್ಕರ್‌ ಪ್ರಶಸ್ತಿ ಭಾಷಣ ವೇಳೆ ಅತ್ಯುತ್ತಮ ನಟಿಯ ಡ್ರೆಸ್‌ ಜಿಪ್‌ ಕಿತ್ತೇ ಹೋಯ್ತು!

Emma Stone

ಬೆಂಗಳೂರು: 96ನೇ ಸಾಲಿನ ಅಕಾಡೆಮಿ ಪ್ರಶಸ್ತಿ (96th Academy Awards) ಪ್ರದಾನ ಮಾರ್ಚ್ 10ರಂದು ನಡೆದಿದೆ. 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಮಾರ್ಚ್ 10ರಂದು ಲಾಸ್ ಏಂಜಲೀಸ್‌ನಲ್ಲಿರುವ (Oscars 2024) ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದ್ದು, ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರ ಕಂಡಿದೆ.  ಪೂರ್ ಥಿಂಗ್ಸ್‌ (Poor Things) ಸಿನಿಮಾದ ಅಭಿನಯಕ್ಕಾಗಿ ಎಮ್ಮಾ ಸ್ಟೋನ್ (Emma Stone) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಆದರೆ ಈ ವೇಳೆ ನಟಿಗೆ ಮುಜುಗರವಾದ ಘಟನೆ ಸಂಭವಿಸಿದೆ. ಪ್ರಶಸ್ತಿಯನ್ನು ಸ್ವೀಕರಿಸುವಾಗ ನಟಿಯ ಗೌನ್‌ ಚೈನ್‌ ಬಿಚ್ಚಿ ಹೋಗಿದೆ. ಮಾರ್ಕ್ ರುಫಲೋ ಮತ್ತು ನಿರ್ದೇಶಕ ಯೊರ್ಗೊಸ್ ಲ್ಯಾಂತಿಮೊಸ್ ಅವರನ್ನು ತಬ್ಬಿಕೊಳ್ಳುವಾಗ ಚೈನ್‌ ಓಪನ್‌ ಆಗಿರುವುದು ಕಂಡು ಬಂದಿದೆ. ಇದೀಗ ಈ ಫೋಟೊಗಳು ವೈರಲ್‌ ಆಗಿವೆ.

ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರುವಾಗಲೇ ನಟಿ ಡ್ರೆಸ್‌ ಬಗ್ಗೆ ಸನ್ನೆ ನೀಡುತ್ತಿದ್ದರು. ಜೆಸ್ಸಿಕಾ ಲ್ಯಾಂಗ್ ಮತ್ತು ಚಾರ್ಲಿಜ್ ಥರಾನ್ ನಟಿಯ ರಕ್ಷಣೆಗೆ ಬಂದರು. ಮಾತ್ರವಲ್ಲ ನಟಿ ಪ್ರಶಸ್ತಿ ಸ್ವೀಕಾರ ಭಾಷಣ ಮಾಡುವಾಗ ಭಾವುಕರಾದರು. ಜತೆಗೆ ಆಗಾಗ ಅವರ ಡ್ರೆಸ್‌ ಜಾರಿಕೊಳ್ಳುತ್ತಿತ್ತು. ಆದರೂ ನಟಿ ಭಾಷಣದ ನಡುವೆ ಡ್ರೆಸ್‌ ಸರಿ ಮಾಡಿಕೊಳ್ಳುತ್ತಲೇ ಇದ್ದರು.

ಇದನ್ನೂ ಓದಿ: Oscars 2024: ಯಾರಿಗೆ, ಯಾವ ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ? ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ!

ಎಮ್ಮಾ ಸ್ಟೋನ್ ಮಾತನಾಡಿ ʻಈ ಸಿನಿಮಾದ ಪ್ರತಿ ಪಾತ್ರದ ಸದಸ್ಯರಿಗೆ, ಹಾಗೆಯೇ ಸಿನಿಮಾದ ನಿರ್ದೇಶಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕುಟುಂಬ, ನನ್ನ ತಾಯಿ, ನನ್ನ ಸಹೋದರ, ಸ್ಪೆನ್ಸರ್, ನನ್ನ ತಂದೆ, ನನ್ನ ಪತಿಗೂ ಧನ್ಯವಾದ ಹೇಳಲು ಬಯಸುತ್ತೇನೆʼʼ ಎಂದು ನಟಿ ಭಾವುಕರಾದರು.

ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌

ಜಾಗತಿಕವಾಗಿ ಖ್ಯಾತಿ ಗಳಿಸಿರುವ ಓಪನ್‌ಹೈಮರ್‌ (Oppenheimer) ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ (Christopher Nolan) ಅವರಿಗೆ 2024ನೇ ಸಾಲಿನ ಆಸ್ಕರ್‌ (Oscars 2024) ಪ್ರಶಸ್ತಿ ದೊರೆತಿದೆ. ಲಾಸ್‌ ಏಂಜಲೀಸ್‌ನಲ್ಲಿ (Los Angeles) ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕ್ರಿಸ್ಟೋಫರ್‌ ನೋಲನ್‌ ಅವರು ಇದೇ ಮೊದಲ ಬಾರಿಗೆ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಡಂಕಿರ್ಕ್‌ (Dunkirk) ಸಿನಿಮಾ ನಿರ್ದೇಶನಕ್ಕಾಗಿ 2018ರಲ್ಲಿ ಕ್ರಿಸ್ಟೋಫರ್‌ ನೋಲನ್‌ ಹೆಸರು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಆದರೆ, ಅವರಿಗೆ ಪ್ರಶಸ್ತಿ ಲಭಿಸಿರಲಿಲ್ಲ. ಆದರೆ, ಈ ಬಾರಿ ಕ್ರಿಸ್ಟೋಫರ್‌ ನೋಲನ್‌ ಅವರು ಆಸ್ಕರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Exit mobile version