Site icon Vistara News

Esha Gupta: ಬಟ್ಟೆಯಿಂದ ಮುಜುಗರಕ್ಕೆ ಒಳಗಾದ ಇಶಾ ಗುಪ್ತಾ; ಟ್ರೋಲ್‌ಗೆ ಗುರಿಯಾದ ನಟಿ!

Esha Gupta bold photos

#image_title

ಅಬುಧಾಬಿಯಲ್ಲಿ ನಡೆದ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (IIFA 2023) ಇಶಾ ಗುಪ್ತಾ (Esha Gupta) ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಎಲ್ಲರ ಗಮನ ಸೆಳೆದಿದೆ. ಅಷ್ಟೇ ಅಲ್ಲದೇ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ನಟಿ  ಇಶಾ ತಮ್ಮ ಬಟ್ಟೆಯಿಂದಾಗಿ ಮುಜುಗರಕ್ಕೆ ಗುರಿಯಾಗಿದ್ದಾರೆ. ಕಷ್ಟಪಟ್ಟು ನಡೆದಾಡಿದಂತೆ ಕಂಡಿದೆ. ಇದೀಗ ಈ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ.

ಕೆಲವರು ನಟಿಯ ಫ್ಯಾಷನ್‌ ಬಗ್ಗೆ ಮೆಚ್ಚಿಕೊಂಡರೆ, ಇನ್ನೂ ಅನೇಕರು ಟ್ರೋಲ್​ ಮಾಡಿದ್ದಾರೆ. ಕಷ್ಟ ಆಗುತ್ತದೆ ಎಂದರೆ ಇಂಥ ಬಟ್ಟೆ ಯಾಕೆ ಧರಿಸಬೇಕು ಅಂತ ಕೆಲವರು ಕಮೆಂಟ್​ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಅಷ್ಟೇ ನಟಿ ಇಶಾ ಕಾನ್‌ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹಾಟ್‌ ಆಗಿ ಕಾಣಿಸಿಕೊಂಡಿದ್ದರು. ತೆಳು ಗುಲಾಬಿ ಬಣ್ಣದ ಗೌನ್‌ನಲ್ಲಿ ನೋಡುಗರನ್ನು ಬೆರಗುಗೊಳಿಸಿದ್ದರು.

ಇಶಾ ಗುಪ್ತಾ ಕೊನೆಯದಾಗಿ ಪ್ರಕಾಶ್ ಝಾ ಅವರ ಆಶ್ರಮ್‌ 3ರಲ್ಲಿ ಕಾಣಿಸಿಕೊಂಡರು. ‘ಜನ್ನತ್ 2’ ಚಿತ್ರದೊಂದಿಗೆ 2012 ರಲ್ಲಿ ಇಶಾ ಗುಪ್ತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

Exit mobile version