Site icon Vistara News

Esha Gupta: ಬ್ರಾ ಧರಿಸದೆ ಕಾಣಿಸಿಕೊಂಡ ಇಶಾ ಗುಪ್ತಾ: ಟ್ರೋಲ್‌ಗೆ ಗುರಿಯಾದ ನಟಿ

Esha Gupta goes braless gets brutally trolled

ಬೆಂಗಳೂರು: ಇಶಾ ಗುಪ್ತಾ (Esha Gupta) ಅವರ ಹಾಟ್‌ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆಗಾಗ ಇಶಾ ಗುಪ್ತಾ ತಮ್ಮ ಹಾಟ್‌ ಫೋಟೊಗಳು, ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ನಿಜವಾದ ಫ್ಯಾಷನಿಸ್ಟ್ ಎಂದು ಇಶಾ ಗುಪ್ತಾ ಅವರನ್ನು ಪ್ರಶಂಸಿಸಲಾಗುತ್ತದೆ. ಆದರೆ ಈ ಬಾರಿ ನೆಟ್ಟಿಗರು ನಟಿಯ ಹೊಸ ವಿಡಿಯೊಗೆ ಅಸಮಾಧಾನ ಹೊರಹಾಕಿದ್ದಾರೆ. ಮನಬಂದಂತೆ ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗಷ್ಟೇ ಇಶಾ ಗುಪ್ತಾ ಅವರು ಮುಂಬೈನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಪಾಪರಾಜಿಗಳ (ಫೋಟೊಗ್ರಾಫರ್‌ಗಳು) ಕ್ಯಾಮೆರಾದಲ್ಲಿ ಸಖತ್‌ ಹಾಟ್‌ ಆಗಿ ಸೆರೆಯಾಗಿದ್ದಾರೆ. ಬ್ರಾ ಧರಿಸದೆ ಬಿಳಿ ಬಾಡಿಕಾನ್ ಉಡುಪನ್ನು ಧರಿಸಿದ್ದರು. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಮನಬಂದಂತೆ ಕಾಮೆಂಟ್‌ ಮಾಡಿದ್ದಾರೆ. ʻʻಮನೆಯಿಂದ ಹೊರಡುವ ಮುನ್ನ ಕನ್ನಡಿಯಲ್ಲಿ ನಿಮ್ಮನ್ನು ನೋಡಿಕೊಂಡಿಲ್ಲವೇ?ʼʼಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ‘ನಾಚಿಕೆಗೇಡು’ ಎಂದು ಬರೆದಿದ್ದಾರೆ.

ಮತ್ತೊಬ್ಬರು ಇಶಾ ಅವರನ್ನು ಉರ್ಫಿ ಜಾವೇದ್‌ಗೆ ಹೋಲಿಸಿದ್ದಾರೆ. ಉರ್ಫಿ ಜಾವೇದ್‌ ನಿಮಗಿಂತ ತುಂಬ ಡೀಸೆಂಟ್‌ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನಟಿಯನ್ನು ಸಮರ್ಥಿಸಿಕೊಂಡು ʻʻಮಹಿಳೆಯರ ಉಡುಪಿನ ಬಗ್ಗೆ ಯಾಕಿಷ್ಟು ತರ್ಕʼʼಎಂದರೆ, ಮತ್ತೊಬ್ಬರು ʻʻಒಳ ಉಡಪನ್ನು ಧರಸದೇ ಇರುವುದು ಈಗಿನ ಟ್ರೆಂಡ್‌ ಇರಬೇಕುʼʼಎಂದು ಕಾಮೆಂಟ್‌ ಮಾಡಿದ್ದಾರೆ.

ಇಶಾ ಗುಪ್ತಾ ಕೊನೆಯದಾಗಿ ಪ್ರಕಾಶ್ ಝಾ ಅವರ ಆಶ್ರಮ್‌ 3ರಲ್ಲಿ ಕಾಣಿಸಿಕೊಂಡರು. ‘ಜನ್ನತ್ 2’ ಚಿತ್ರದೊಂದಿಗೆ 2012 ರಲ್ಲಿ ಇಶಾ ಗುಪ್ತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

Exit mobile version