ಬೆಂಗಳೂರು : ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ (Samantha) ತಮಗೆ ಇರುವ ಕಾಯಿಲೆ ಬಗ್ಗೆ ನೋವನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಗಾಸಿಪ್‌ಗಳು ಹರಿದಾಡುತ್ತಿವೆ. ಸಮಂತಾ ಅವರ ಮಾಜಿ ಮಾವ, ಖ್ಯಾತ ನಟ ನಾಗಾರ್ಜುನ್ ಅವರು ಸಮಂತಾ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಮಾಜಿ ಪತಿ ನಾಗ ಚೈತನ್ಯ ಕೂಡ ಭೇಟಿ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ವರದಿ ಪ್ರಕಾರ ಸಮಂತಾ ಅನಾರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ ನಂತರ ನಾಗಾರ್ಜುನ್ ಅವರು ಭೇಟಿಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಸಮಂತಾ ಜತೆ ನಾಗಾರ್ಜುನ ಉತ್ತಮ ಸ್ನೇಹ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಮಾಜಿ ಸೊಸೆಯ ಆರೋಗ್ಯ ವಿಚಾರಿಸಲು ತೆರಳಿದ್ದಾರೆ ಎನ್ನಲಾಗಿದೆ. ನಾಗಾರ್ಜುನ್ ಜತೆ ನಾಗ ಚೈತನ್ಯ ಕೂಡ ತೆರಲುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೆ ಸಮಂತಾ ತಮ್ಮ ಆರೋಗ್ಯದ ಸಮಸ್ಯೆ ಕುರಿತು ಹೇಳಿಕೊಂಡಿದ್ದರು. ತಮ್ಮ ಕಾಯಿಲೆ ಕುರಿತು ಪತ್ರವೊಂದನ್ನು ಬರೆದು ನೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಅಭಿಮಾನಿಗಳೂ ಸ್ಪಂದಿಸಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು. ಈಗಾಗಲೇ ೮ ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿದ್ದು, ಬೇಗ ಗುಣಮುಖರಾಗಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಿ ಎಂದೂ ಪ್ರಾರ್ಥಿಸಿದ್ದರು.
ಇದನ್ನೂ ಓದಿ | Samantha | ಸಮಂತಾ ನಟನೆಯ ʻಯಶೋದಾʼ ಟ್ರೈಲರ್ ಬಿಡುಗಡೆಗೊಳಿಸಿದ ನಟ ರಕ್ಷಿತ್ ಶೆಟ್ಟಿ!
ಪತ್ರದಲ್ಲೇನಿದೆ?
ನನ್ನ ನಟನೆಯ ʻʻಯಶೋಧಾ” ಟ್ರೈಲರ್ ಬಗ್ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ನನ್ನ ಮತ್ತು ನಿಮ್ಮ ನಡುವಿನ ಪ್ರೀತಿ, ಹಂಚಿಕೊಳ್ಳುವ ಭಾವನೆಗಳು ಹಾಗೂ ನೀವು ನನಗೆ ಕೊಡುವ ವಿಶ್ವಾಸವು ನನ್ನ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ನನಗೆ ಮೈಯೋಸೈಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆ ಇದೆ ಎಂಬುದು ಕೆಲವು ತಿಂಗಳ ಹಿಂದಷ್ಟೇ ನನಗೆ ತಿಳಿಯಿತು. ಇದರಿಂದ ಹೊರಬಂದ ಬಳಿಕ ನಿಮ್ಮೊಂದಿಗೆ ವಿಷಯ ಹಂಚಿಕೊಳ್ಳೋಣ ಅಂದುಕೊಂಡಿದ್ದೆ. ಆದರೆ, ನಾನು ಅಂದುಕೊಂಡಷ್ಟು ಸುಲಭವಾಗಿ ಈ ಕಾಯಿಲೆ ಗುಣವಾಗುತ್ತಿಲ್ಲ. ಆರೋಗ್ಯ ಸರಿಹೊಂದುವುದು ವಿಳಂಬವಾಗುತ್ತಿದೆ. ಈ ಕಾಯಿಲೆ ವಿರುದ್ಧ ನಾನು ಇನ್ನೂ ಹೋರಾಡುತ್ತಿದ್ದೇನೆ. ಆದರೆ, ಶೀಘ್ರದಲ್ಲೇ ನಾನು ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಾನು ಒಳ್ಳೆಯ ಹಾಗೂ ಕೆಟ್ಟ ದಿನಗಳನ್ನು ಕಂಡಿದ್ದೇನೆ. ನನಗೆ ಆ ಒಂದು ಸಮಯ ತುಂಬಾ ಕಾಡಿದ್ದು ಸುಳ್ಳಲ್ಲ. ಇದನ್ನು ನನ್ನಿಂದ ಇನ್ನೊಂದು ಕ್ಷಣವೂ ಸಹಿಸಲು ಆಗದು ಎಂದೂ ಅನ್ನಿಸಿತ್ತು. ಆದರೆ ಆ ಕೆಟ್ಟ ಘಳಿಗೆ ಈಗಿಲ್ಲ. ನಾನು ಸುಧಾರಿಸಿಕೊಳ್ಳುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದರು.
ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಸಮಂತಾ
ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಚಿತ್ರೀಕರಣ ಮುಗಿದಿದೆ. ನಟ ವಿಜಯ್ ದೇವರಕೊಂಡ ಜತೆಗೆ ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅರೇಂಜ್‌ಮೆಂಟ್ಸ್ ಆಫ್ ಲವ್’ ಹಾಲಿವುಡ್ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ.
ಇದನ್ನೂ ಓದಿ | Samantha | ಮೈಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ; ನಟಿಯ ಪತ್ರದಲ್ಲೇನಿದೆ?