Site icon Vistara News

Kabza Movie | ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಕಬ್ಜ ಚಿತ್ರದ ರಿಲೀಸ್‌ ಡೇಟ್‌ಗಾಗಿ ಹೆಚ್ಚಾಗಿದೆ ಕಾತರ!

Kabza Movie

ಬೆಂಗಳೂರು : ‘ಕೆಜಿಎಫ್​ ಚಾಪ್ಟರ್​ 2’, ‘777 ಚಾರ್ಲಿ’, ‘ಕಾಂತಾರ’ ಮುಂತಾದ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕಿಚ್ಚ ಸುದೀಪ್‌ ನಟನೆಯ ಕಬ್ಜ ಸಿನಿಮಾ (Kabza Movie) ಬಿಡುಗಡೆಯ ದಿನಾಂಕ ಇನ್ನೂ ರಿವೀಲ್‌ ಆಗಿಲ್ಲ. ಉತ್ತರ ಭಾರತದ ಮಂದಿ ಈ ಸಿನಿಮಾದ ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಕಾಯುತ್ತಿದ್ದಾರೆ. ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಅವರು ‘ಕಬ್ಜ’ ಚಿತ್ರದ ಹೊಸ ಪೋಸ್ಟರ್​ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರ ಭಾರತದ ಸಿನಿಪ್ರಿಯರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಈ ಚಿತ್ರ ಹಿಂದಿಯಲ್ಲೂ ಬಿಡುಗಡೆ ಆಗಲಿದೆ. ಹಾಗಾಗಿ ಉತ್ತರ ಭಾರತದಲ್ಲಿ ಪ್ರೇಕ್ಷಕರು ‘ಕಬ್ಜ’ ಬಗ್ಗೆ ಕಾತರರಾಗಿದ್ದಾರೆ. ʻಕಬ್ಜ’ ಟೀಸರ್​ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಜನಮೆಚ್ಚುಗೆ ಗಳಿಸಿದೆ. ಈಗಾಗಲೇ 2.8 ಕೋಟಿಗೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ.

ಇದನ್ನೂ ಓದಿ | Snehith Jagadeesh | ಸ್ನೇಹಿತ್ ಬೆನ್ನಿಗೆ ನಿಂತ ನಟಿ ಪ್ರಿಯಾಂಕಾ, ನಟ ಉಪೇಂದ್ರ

ಈ ಚಿತ್ರದಲ್ಲಿ ಬಹುಭಾಷಾ ನಟಿ ಶ್ರೀಯಾ ಶರಣ್‌ ಸಹ ನಟಿಸಿದ್ದು, ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಚಿತ್ರ ಮೊದಲ ಹಂತದಲ್ಲಿಯೇ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದ ಟೆಕ್ನಿಕಲ್‌ ಹೆಡ್‌ ಸಿ.ವಿ.ರಾವ್‌ ಹಾಗೂ ನಿರ್ದೇಶಕ ರಾಜಮೌಳಿ ಅವರ ಗಮನ ಸೆಳೆದಿತ್ತು. ಚಿತ್ರದ ವಿಷ್ಯುವಲ್‌ ನೋಡಿ ಈ ಇಬ್ಬರು ಘಟಾನುಘಟಿಗಳು ಮೆಚ್ಚಿಕೊಂಡಿದ್ದರು. ಇದು ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಪ್ಯಾನ್‌ ಇಂಡಿಯಾ ಸಿನಿಮಾವಾದ ಈ ಸಿನಿಮಾ ಕನ್ನಡದ ಜತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಏಕಕಾಲದಲ್ಲಿ ಏಳು ಬಾಷೆಗಳಲ್ಲಿ ಡಬ್ಬಿಂಗ್‌ ಆಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Kabzaa : ಕಬ್ಜದಲ್ಲಿ ನಮ್ಮ ಆತ್ಮ, ಪರಿಶ್ರಮ ಇದೆ

Exit mobile version