Site icon Vistara News

Fact Check: ರಾಕಿ ಬಾಯ್‌ ಯಶ್‌ರಿಂದ ಸೆಟ್‌ನಲ್ಲಿ ಮುಜುಗರಕ್ಕೆ ಒಳಗಾದ್ರಾ ಶ್ರೀನಿಧಿ ಶೆಟ್ಟಿ?

Was Srinidhi Shetty embarrassed on the set by Rocky Boy Yash What did the actress say in the tweet

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಜತೆ ಶ್ರೀನಿಧಿ ಶೆಟ್ಟಿ ಕೆಜಿಎಫ್‌ ಸಿನಿಮಾದಲ್ಲಿ ಮಿಂಚಿದ್ದರು. ಈ ಸಿನಿಮಾ ದೇಶಾದ್ಯಂತ ಮನ್ನಣೆ ಗಳಿಸಿದೆ. ಇದೀಗ ರಾಕಿಂಗ್‌ ಸ್ಟಾರ್‌ ಯಶ್‌ ಬಗ್ಗೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಶ್ರೀನಿಧಿ ಟ್ವೀಟ್‌ ಮಾಡಿದ್ದಾರೆ. ಕೆಜಿಎಫ್‌ ಸಿನಿಮಾದ ಶೂಟಿಂಗ್‌ ಸೆಟ್‌ನಲ್ಲಿ ನಟ ಯಶ್‌ ಅವರಿಂದ ಶ್ರೀನಿಧಿ ಶೆಟ್ಟಿ ಕಿರುಕುಳ ಅನುಭವಿಸಿದ್ದಾರೆ ಗಾಳಿಸುದ್ದಿ ವೈರಲ್‌ ಆಗಿದೆ(Fact Check).

ಉಮೈರ್‌ ಸಂಧು ಈ ವಿಚಾರವನ್ನು ಟ್ವಿಟ್‌ ಮಾಡಿದ್ದಾರೆ. ಟ್ವೀಟ್‌ನಲ್ಲಿ “ಕೆಜಿಎಫ್‌ ಚಾಪ್ಟರ್‌ 2 ಶೂಟಿಂಗ್‌ ಸೆಟ್‌ನಲ್ಲಿ ಯಶ್‌ ಅವರಿಂದ ನಾನು ಸಾಕಷ್ಟು ಮುಜುಗರಕ್ಕೆ ಒಳಗಾಗಬೇಕಾಯಿತು. ಇನ್ಮುಂದೆ ನಾನು ಯಶ್‌ ಜತೆ ಯಾವತ್ತೂ ಕೆಲಸ ಮಾಡಲ್ಲ. ವಿಷಕಾರಿ, ಕಿರುಕುಳ ನೀಡುವ ವ್ಯಕ್ತಿತ್ವ ಇರುರ ವ್ಯಕ್ತಿ ಅವರು” ಎಂದು ಉಮೈರ್‌ ಸಂಧು ಶ್ರೀನಿಧಿ ಹೇಳಿದ್ದಾರೆಂದು ಹೇಳಿಕೊಂಡು ಟ್ಟಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor Yash : ಮುಂಬೈನಲ್ಲಿ ಕಾಣಿಸಿಕೊಂಡ ರಾಕಿ ಭಾಯ್‌; ಬಾಲಿವುಡ್‌ಗೆ ಹೆಜ್ಜೆ ಇಟ್ಟರಾ ಯಶ್‌?

ಈ ಬಗ್ಗೆ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ ಶ್ರೀನಿಧಿ. ಟ್ವೀಟ್‌ ಮಾಡಿ “ಕೆಲವರು ಸಾಮಾಜಿಕ ಮಾಧ್ಯಮದ ಮೂಲಕ ಅಪಪ್ರಚಾರ ಮಾಡಲು ಮತ್ತು ಗಾಸಿಪ್‌ ಹರಡಲು ಪ್ರಯತ್ನಿಸಬಹುದು. ಆದರೆ, ನಾನು ಪ್ರೀತಿ, ಸಂತೋಷವನ್ನು ಹರಡಲು ಬಯಸುತ್ತೇನೆ. ನನ್ನ ಜೀವನದಲ್ಲಿ ಮಹತ್ವದ ವ್ಯಕ್ತಿಗಳಿಗೆ ನನ್ನ ಆಳವಾದ ಮೆಚ್ಚುಗೆಯನ್ನು ತೋರಿಸಲು ಬಯಸುತ್ತೇನೆ. ಕೆಜಿಎಫ್‌ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಕೆಲಸ ಮಾಡಿರುವುದು ನಿಜವಾಗಿಯೂ ಒಂದು ಸಂಪೂರ್ಣ ಗೌರವ ನೀಡಿದೆ. ಯಶ್‌ ಜತೆ ಕೆಲಸ ಮಾಡಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ ಎನಿಸುತ್ತದೆ. ಯಶ್‌ ಅವರು ರಿಯಲ್‌ ಜೆಂಟಲ್‌ಮ್ಯಾನ್, ಒಬ್ಬ ಮೆಂಟರ್‌, ಅಷ್ಟೇ ಒಳ್ಳೆಯ ಸ್ನೇಹಿತರಾಗಿದ್ದಾರೆ. ನಾನು ಯಾವಾಗಲೂ ಯಶ್‌ ಅವರ ಅಭಿಮಾನಿ!ʼʼಎಂದು ಬರೆದುಕೊಂಡಿದ್ದಾರೆ.

ಶ್ರೀನಿಧಿ ಶೆಟ್ಟಿ ಟ್ವೀಟ್‌

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ನಟಿಯನ್ನು ಯಶ್‌ ಅಭಿಮಾನಿಗಳು ಹೊಗಳಿದ್ದಾರೆ. ಕೆಜಿಎಫ್‌ 2 ಯಶಸ್ಸಿನ ಬೆನ್ನಲ್ಲೇ ಕೆಜಿಎಫ್‌ 3 ಅನ್ನೂ ನಿರ್ಮಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ 2025ರಲ್ಲಿ ಸೆಟ್‌ ಏರುವ ಸಾಧ್ಯತೆಯಿದೆ. ಚಿತ್ರದ ನಿರ್ಮಾಪಕರಾಗಿರುವ ವಿಜಯ್‌ ಕಿರಗಂದೂರು ಅವರು ಹೇಳಿರುವ ಪ್ರಕಾರ ಸಿನಿಮಾ ಒಟ್ಟು ಐದು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

Exit mobile version