Site icon Vistara News

Fahadh Faasil: ಹೊಸ ಅಪಡೇಟ್‌ ಹಂಚಿಕೊಂಡ ಪುಷ್ಪ 2!

Fahadh Faasil Pushpa 2 Update

ಬೆಂಗಳೂರು: ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ನಟನೆಯ ಪುಷ್ಪ 2: ದಿ ರೂಲ್‌ (Pushpa 2: The Rule) ಸಿನಿಮಾ ಹೊಸ ಅಪಡೇಟ್‌ ಹಂಚಿಕೊಂಡಿದೆ. ಫಹಾದ್ ಫಾಸಿಲ್ (Fahadh Faasil) ಇದೀಗ ಪುಷ್ಪ-2 ಸಿನಿಮಾದ ʻಭನ್ವರ್ ಸಿಂಗ್ ಶೇಖಾವತ್ʼ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

ಇದೀಗ ನಟ ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆಯಾದ ಮೃತ್ರಿ ಮೂವಿ ಮೇಕರ್ಸ್‌ ಚಿತ್ರದ ಕುರಿತು ಈ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದೆ. ಪುಷ್ಪ 2ರ ಶೂಟಿಂಗ್ ಸ್ಪಾಟ್‌ನಿಂದ ಫಹಾದ್ ಮತ್ತು ನಿರ್ದೇಶಕ ಸುಕುಮಾರ್ ಅವರ ಫೋಟೊವನ್ನು ಶೇರ್‌ ಮಾಡಿಕೊಂಡಿದೆ.

ಪುಷ್ಪ 2 (Pushpa 2) ಸೀಕ್ವೆಲ್‌ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ನಿಂದಾಗಿ ಸಖತ್‌ ಸುದ್ದಿಯಲ್ಲಿತ್ತು. ಫಸ್ಟ್‌ ಲುಕ್‌ನಲ್ಲಿ ಅಲ್ಲು ಅರ್ಜುನ್‌ ಅವರು ಸೀರೆ ಧರಿಸಿದ್ದಾರೆ, ಮೈತುಂಬ ಆಭರಣ ತೊಟ್ಟಿದ್ದಾರೆ. ಹಾಗೆಯೇ, ನಿಂಬೆ ಹಣ್ಣಿನ ಹಾರವನ್ನೂ ಹಾಕಿಕೊಂಡಿದ್ದರು. ಅಲ್ಲು ಅರ್ಜುನ್‌ ಅವರೇ ಪೋಸ್ಟರ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪುಷ್ಪ 2: ದಿ ರೂಲ್‌ ಆರಂಭವಾಗಿದೆ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Pushpa 2 Movie : ಪುಷ್ಪ 2 ಸಿನಿಮಾದಲ್ಲಿ ಸಲ್ಮಾನ್‌, ಶಾರುಖ್‌ ಖಾನ್‌ ನಟನೆ?

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version