ಬೆಂಗಳೂರು: ಉರ್ಫಿ ಜಾವೇದ್ (Urfi Javed) ಮತ್ತೊಮ್ಮೆ ತಮ್ಮ ಬಟ್ಟೆಯ ವಿಚಾರವಾಗಿ ತೊಂದರೆಗೆ ಸಿಲುಕಿದ್ದಾರೆ. ಇದೀಗ ನಟ ಫೈಜಾನ್ ಅನ್ಸಾರಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತನ್ನ ಬಟ್ಟೆಯಿಂದಾಗಿ ಉರ್ಫಿ ಜಾವೇದ್ ಇಲ್ಲಿಯವರೆಗೆ ಅನೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿ ಉರ್ಫಿ ಜಾವೇದ್ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಮೌಲಾನಾಗಳಿಗೆ ದೂರು ನೀಡಲಾಗಿದೆ ಎಂದು ಫೈಜಾನ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಕೆಲ ದಿನಗಳಿಂದ ಉರ್ಫಿ ಜಾವೇದ್ ವಿರುದ್ಧ ಹೋರಾಟ ನಡೆಸುತ್ತಿರುವ ನಟ ಫೈಜಾನ್, “ಧರ್ಮವನ್ನು ಪದೇಪದೆ ಅವಮಾನಿಸಿದ್ದಾರೆ. ಮುಸ್ಲಿಂ ಹುಡುಗಿಯೊಬ್ಬಳು ಬೆತ್ತಲೆಯಾಗಿ ತಿರುಗಾಡುತ್ತಿದ್ದಾಳೆ ಎಂದು ಯಾರಾದರೂ ಹೇಳಿದಾಗ ನನಗೆ ತುಂಬಾ ನಾಚಿಕೆಯಾಗುತ್ತದೆ. ಉರ್ಫಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ, ಆದ್ದರಿಂದ ಅವರನ್ನು ಯಾವುದೇ ಸ್ಮಶಾನದಲ್ಲಿ ಸಮಾಧಿ ಮಾಡಲು ಬಿಡಬಾರದು ಎಂದು ಮನವಿ ಮಾಡಿದ್ದೇನೆʼʼ ಎಂದು ಹೇಳಿಕೆ ನೀಡಿದ್ದಾರೆ.
ಉರ್ಫಿ ಸತ್ತಾಗ ಸ್ಮಶಾನದಲ್ಲಿ ಜಾಗವನ್ನೂ ಕೊಡುವುದಿಲ್ಲ ಎಂದು ನಟ ಹೇಳಿದ್ದಾರೆ. ʻʻಆಕೆ ತೊಟ್ಟಿರುವ ಬಟ್ಟೆಗಳು ಜಗತ್ತಿನಾದ್ಯಂತ ಇರುವ ಮುಸ್ಲಿಮರನ್ನು ಕೆಣಕುತ್ತಿವೆ. ಅವಳು ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರೆ, ಮೊದಲು ಅವಳ ಹೆಸರನ್ನು ಬದಲಿಸಿಕೊಳ್ಳಬೇಕು. ಮುಸ್ಲಿಂ ಹುಡುಗಿ ಇಂತಹ ಬಟ್ಟೆಗಳನ್ನು ಧರಿಸುತ್ತಾಳೆ ಎಂದು ಯಾರಾದರೂ ಹೇಳಿದಾಗ ನಮಗೆ ತುಂಬಾ ಬೇಸರವಾಗುತ್ತದೆ. ಫತ್ವಾ ಹೊರಡಿಸಿದ್ದಕ್ಕಾಗಿ ದೆಹಲಿಯ ಮೌಲಾನಾ ಮತ್ತು ಮುಂಬೈನ ಸಿಟಿ ಖಾಜಿಗೂ ದೂರು ನೀಡಿದ್ದೇನೆ ಎಂದು ಫೈಜಾನ್ ಅನ್ಸಾರಿʼʼ ತಿಳಿಸಿದ್ದಾರೆ.
ಇದನ್ನೂ ಓದಿ: Urfi Javed: ಇಲ್ಲಿದೆ ಉರ್ಫಿ ಜಾವೇದ್ ಜೀವನ ಚಿತ್ರ
‘ಉರ್ಫಿ ತುಂಬಾ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಜನರಿಗೆ ದೇಹ ತೋರಿಸಿ ಹಣ ಗಳಿಸುತ್ತಿರುವುದು ತಪ್ಪು. ಪ್ರಚಾರಕ್ಕೆ ಇದೆಲ್ಲಾ ಮಾಡುತ್ತಿರುವುದು ಎಂದು ಎಲ್ಲರಿಗೂ ಗೊತ್ತಿದೆ. ಈ ಕಾರಣದಿಂದ ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬಂದಿರುವ ಇನ್ನಿತರ ಬಾಲಿವುಡ್ ನಟಿಯರು ಮತ್ತು ಸೂಪರ್ ಸ್ಟಾರ್‌ಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ನಟಿ ಉರ್ಫಿ ಜಾವೇದ್‌ಗೆ ಧೈರ್ಯ ತುಂಬಾನೇ ಕಡಿಮೆ. ಏನೇ ಆದರೂ ಮುಂದೆ ಬಂದು ಮಾತನಾಡುವ ಧೈರ್ಯ ಆಕೆಗೆ ಇಲ್ಲ. ದೆಹಲಿ ಮತ್ತು ಮುಂಬೈನಲ್ಲಿ ಪ್ರಮುಖವಾಗಿ ಪ್ರತ ನೀಡಿರುವೆ. ಇದೀಗ ಉರ್ಫಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವೆ. ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಲಿದ್ದೇನೆ’ ಎಂದು ಫೈಜಾನ್ ಹೇಳಿದ್ದಾರೆ. ಫೈಜಾನ್ ಅನ್ಸಾರಿಯವರ ಈ ಹೇಳಿಕೆಗೆ ಉರ್ಫಿ ಜಾವೇದ್ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕು.