Site icon Vistara News

Kichcha Sudeep: ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ, ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ: ಪ್ರಕಾಶ್‌ ರಾಜ್‌

Fake news spread by corrupt BJP Prakash Raj about sudeep

ಬೆಂಗಳೂರು: ಕಿಚ್ಚ ಸುದೀಪ್ (Kichcha Sudeep) ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬಿತ್ಯಾದಿ ಸುದ್ದಿ ಹರಿದಾಡುತ್ತಿದೆ. ಏಪ್ರಿಲ್‌ 5ರಂದು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಸುದ್ದಿಗೋಷ್ಠಿ ನಡೆಸಲಿದ್ದು ಸುದೀಪ್ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈ ಬಗ್ಗೆ ನಟ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದು, ಟ್ವೀಟ್‌ನಲ್ಲಿ ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿ ʻʻಇದು ಕರ್ನಾಟಕದಲ್ಲಿ ಹತಾಶ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಎಂದು ನಾನು ಬಲವಾಗಿ ನಂಬುತ್ತೇನೆ. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲʼʼ ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್‌ ರಾಜ್‌ ಟ್ವೀಟ್‌

ಸುದೀಪ್ ಬಂದರೆ ಬಿಜೆಪಿಗೆ ಎಷ್ಟು ಲಾಭ?

ಸುದೀಪ್‌ ರಾಜ್ಯದಲ್ಲಿ ಬಲಿಷ್ಠವಾಗಿರುವ ನಾಯಕ ಸಮುದಾಯಕ್ಕೆ ಸೇರಿದ್ದಾರೆ. ಇದು ಪರಿಶಿಷ್ಟ ಬುಡಕಟ್ಟು ಸಮುದಾಯವಾಗಿದ್ದು, ಲೋಕಸಭೆಯಲ್ಲಿ ಎರಡು ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ನಾಯಕ ಸಮುದಾಯದ ಪ್ರಾಬಲ್ಯವಿದೆ. ಹಾಗೆಯೇ ರಾಜ್ಯದಲ್ಲಿ 15 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಇದಲ್ಲದೇ ರಾಜ್ಯಾದ್ಯಂತ 224 ಕ್ಷೇತ್ರಗಳಲ್ಲೂ ನಾಯಕ ಸಮುದಾಯದ ಮತಗಳಿವೆ.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್‌ ಬಿಜೆಪಿ ಸೇರ್ಪಡೆಯಿಂದ ಲಾಭವೇನು?

ಆದರೆ ಬಿಜೆಪಿಗೆ ಆ ಸಮುದಾಯದಲ್ಲಿ ವರ್ಚಸ್ವಿ ನಾಯಕನ ಕೊರತೆ ಇದೆ. ಶ್ರೀರಾಮುಲು ಅವರು ಇದ್ದರೂ ಭಾಷೆಯ ಸಮಸ್ಯೆ ಇದೆ. ಅವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಜಾರಕಿಹೊಳಿ ಬ್ರದರ್ಸ್ ಬೆಳಗಾವಿಗೆ ಸೀಮಿತರಾಗಿದ್ದಾರೆ. ಸುದೀಪ್ ಒಂದು ವೇಳೆ ಬಿಜೆಪಿಗೆ ಸೇರ್ಪಡೆಯಾದರೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಾಯಕ ಸಮುದಾಯದ ಮತಗಳನ್ನು ಹೆಚ್ಚು ಸೆಳೆಯಬಹುದು, ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರ. ಬಿಜೆಪಿ ಬಲೆಗೆ ಸುದೀಪ್‌ ಬೀಳುತ್ತಾರಾ ನೋಡಬೇಕಿದೆ.

Exit mobile version