-ಶಿವರಾಜ್ ಡಿ ಎನ್, ಬೆಂಗಳೂರು
ಫ್ಯಾಮಿಲಿ ಸಮೇತ ಕೂತು ನೋಡಬಹುದಾದಂತ ಡಾರ್ಕ್ ಕಾಮಿಡಿ ಸಿನಿಮಾ ‘ಫ್ಯಾಮಿಲಿ ಡ್ರಾಮಾ’. ದಿ ಯಂಗ್ ಮೈಂಡ್ ಮೂವಿ.. ಸಿನಿಮಾ ಅಂದ್ರೆ ಅಲ್ಲೊಂದು ದೊಡ್ಡ ಸ್ಟಾರ್ ಕಾಸ್ಟ್, ಮಾಸ್ ಡೈಲಾಗ್, ರಗಡ್ ಫೈಟ್, ಮೆಲೋಡಿಯಸ್ ಸಾಂಗ್, ಮಿನಿಮಮ್ ಅಂದ್ರೂ ಒಂದ್ ಇಪ್ಪತ್ತೈದ್ ಮೂವತ್ ಕೋಟಿ ಖರ್ಚಾಗಿರ್ಬೇಕು.. ಸಿನಿಮಾ ಅಂದ್ರೇ ಹಾಗಿರ್ಬೇಕು ಹೀಗಿರ್ಬೇಕು ಎನ್ನುವ ಚೌಕಟ್ಟಿನೊಳಗಿನ ಪ್ರೇಕ್ಷಕರಿಗೆ ಈ ಸಿನಿಮಾ ಕಷ್ಟ ಆಗಬಹುದು.! ಇದೆಲ್ಲದರಾಚೆ ನಿಂತು ನೋಡುವ, ನಮ್ಮ ಕನ್ನಡ ಸಿನಿಮಾಗಳಲ್ಲೀ ಇನ್ನೂ ಏನೋ ಬೇಕು ಎಂದು ಹಾತೊರೆಯುವ ಪ್ರೇಕ್ಷಕರಿಗೆ ಇದೊಂದು ಉತ್ತಮ ಸಿನಿಮಾ (Family Drama Film Review) ಅನ್ನಿಸ ಬಹುದು.
ಅಬ್ಬಬ್ಬಬಬ್ಬಾ.. ಇಂತಹ ಗ್ಯಾಂಗ್ ವಾರ್ ಸಿನಿಮಾ.! ಕನ್ನಡ ಸಿನಿಮಾದಲ್ಲಿ ನಾ ಹಿಂದೆಂದೂ ಕಂಡಿಲ್ಲ, ಗುಂಡಿನ ಚಕಮಕಿಯಲ್ಲಿ ಕಾಣುವ ಗನ್ನುಗಳೇ ಪ್ರೇಕ್ಷಕರನ್ನ ದಂಗಾಗಿಸಬಹುದು.! ಸೀದಾ ವಿಷಯಕ್ಕೆ ಬರೋಣ ಎನ್ನುವುದಾದರೇ ಇದೊಂದು ಗ್ಯಾಂಗ್ ವಾರ್ ಕಥೆಯ ಸಿನಿಮಾ ಅಲ್ಲ. ಗ್ಯಾಂಗ್ ವಾರ್ ಒಂದು ಫ್ಯಾಮಿಲಿಯೊಳಗೆ ಹೇಗೆ ನುಸುಳುತ್ತದೆ, ಆ ಮಿಡಲ್ ಕ್ಲಾಸ್ ಫ್ಯಾಮಿಲಿಯೊಳಗೆ ಏನೆಲ್ಲ ಡ್ರಾಮಾ ನೆಡೆಯುತ್ತದೆ ಎನ್ನುವ ಚಿತ್ರಕಥೆಯ ಡಾರ್ಕ್ ಕಾಮಿಡಿ ಸಿನಿಮಾ.
ಯುವ ಪ್ರೇಮಿಗಳ ರೀತಿ ನೀತಿ, ತಂದೆ ತಾಯಿಯ ಕಾಣದ ಕಾಳಜಿ ಜೊತೆಗೆ ಮಿಡಲ್ ಕ್ಲಾಸ್ ಫ್ಯಾಮಿಲಿಯೊಳಗಿನ ಡ್ರಾಮಾ ಇಷ್ಟವಾಗುತ್ತದೆ. ಈ ಕಾಮಿಡಿಯೊಳಗೂ ಸೀರಿಯಸ್ ವಿಷಯ ಏನಿದೆ ಅಂತ ನೋಡೋದಾದ್ರೆ ಹೊಸಬರಾದರೂ ಕಥಾಹಂದರಕ್ಕೆ ಎಳೆತಂದಿರುವ ವಿಷಯ ಹಾಗೂ ಪ್ರಾಮುಖ್ಯತೆಯನ್ನೆ ಕೊಡದೆ ಅದೂ ಕಾಮನ್ ಗುರು ಎನ್ನುವಂತೆ ತೇಲಿಸಿ ಬಿಟ್ಟಿರುವ ಸೂಕ್ಷ್ಮತೆಯೂ ಶಭಾಸ್ ಎನ್ನಿಸಬಹುದು. ಅದು ಹೇಗೆ ಎಂದರೇ ಹೆಣ್ಣೊಂದು ಧಮ್ ಹೊಡೆಯೋದನ್ನ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವ ಸಮಾಜದಲ್ಲಿ ಇಲ್ಲೊಂದು ಮಿಡಲ್ ಕ್ಲಾಸ್ ಹುಡುಗಿಯರೂ ಉಫ್ ಅಂತಾ ಹೊಗೆ ಬಿಡುವುದನ್ನ ಸಾಮನ್ಯವೆಂಬಂತೆ ಬಿಟ್ಟಿರುವುದು. ಇಂದಿನ ಹುಡುಗರ ಬಾಯಲ್ಲಿ ಸರ್ವೇ ಸಾಮಾನ್ಯವಾಗಿ ಬರುವ ದುಡ್ಡಿದ್ದರೇ ಮಾತ್ರ ಹುಡುಗಿಯ ನಮ್ಮ ಜೊತೆಗಿರ್ತಾರೆ ಎನ್ನುವ ಲಾಜಿಕ್ ಸ್ಕ್ರಾಚ್ ಮಾಡಿರೋದು ಕೂಡ ಒಳ್ಳೆಯ ವಿಷಯವೆ. ಚಿತ್ರ ಎಲ್ಲವರ್ಗದಲ್ಲೂ ಅಚ್ಚುಕಟ್ಟಾಗಿ ರೂಪುಗೊಂಡಿದೆ, ಪ್ರೇಕ್ಷಕರನ್ನ ಮನರಂಜಿಸುತ್ತದೆ, ವೇಗ ಹೆಚ್ಚಿಸಿ ಮೊದಲಾರ್ದದ ಡ್ರಾಮಾಗೆ ಕೊಂಚ ಕತ್ತರಿ ಹಾಕ ಬಹುದಿತ್ತು ಅನಿಸುತ್ತದೆ. ಸೆಮಿ ಸೆಮಿ ಹಾಡು ಸಿಕ್ಕಾಬಟ್ಟೆ ಇಷ್ಟ ಆಗತ್ತೆ.
ಕೆಲ ದೃಶ್ಯದ ಕಲರ್ ಗ್ರೇಡಿಂಗ್ ವಿಶೇಷವಾಗಿದೆ. ಸಿಂಧೂ ಶ್ರೀನಿವಾಸ ಮೂರ್ತಿ, ಪೂರ್ಣಚಂದ್ರ ಮೈಸೂರು, ಅಭಯ್, ಅನನ್ಯಾ ಅಮರ್, ರೇಖಾ ಕೂಡ್ಲಿಗಿ, ವಿರೀಶ್ ಕೆ ಮಂಜುನಾಥ್, ಮಹದೇವ್ ಹಡಪದ್,ಆಶಿತ್, ಸಿರಿ ರವಿಕುಮಾರ್ ಸೇರಿದಂತೆ ಎಲ್ಲ ಕಲಾವಿದರ ಅಭಿನವೂ ಅತ್ಯುತ್ತಮವಾಗಿದೆ. ಅಭಯ ಹಾಗು ಅಮ್ಮನ ಪಾತ್ರ ,ಡಾನ್ ಪ್ರಕಾಶ, ವಿಷ್ಣು ಸೇರಿದಂತೆ ಟೋಬಿ, ಸಿಗರೇಟ್ ಹುಡುಗಿಯರು, ಅನಾಲಿಸಿಸ್ ಮಾಡಿ ಐಡಿಯಾ ಕೊಡುವ ಚೋಟು ಸೇರಿಂದಂತೆ ಚೇತನ್ ಅಮಯ್ಯ್ ಅವರ ವಿಶಿಷ್ಟ ಸಂಗೀತವೂ ಗಮನ ಸೆಳೆಯುತ್ತದೆ. ದಬ್ಬುಗುಡಿ ಮುರಳಿಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು. ಆಕರ್ಶ್ ಹೆಚ್ ಪಿ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಶ್ ಹುಳಕೊಂಡ್ ಸಂಕಲನ ಹಾಗೂ ಸಿದ್ದಾರ್ಥ್ ಸುನೀಲ್ ಛಾಯಾಗ್ರಹಣವಿದೆ.
ಇದನ್ನೂ ಓದಿ: Family Drama Trailer: ʻಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ವಿಭಿನ್ನ ಸಿನಿಮಾ!
ಕನ್ನಡಕ್ಕೆ ಇದೊಂದು ವಿಶಿಷ್ಟ ರೀತಿಯಾ ಸಿನಿಮಾ, ಚಿತ್ರದಲ್ಲಿ ಕಾಮಿಡಿ ಇದೆ, ಸಸ್ಪೆನ್ಸ್ ಇದೆ, ಹೊಸತಂಡದ ಹೊಸತನ ಹೊಸದಾಗೆ ಇದೆ, ಅದೇನಿದಿಯಪ್ಪಅಂತ ಹೊಸತು ಅನ್ನೋದನ್ನ ತಪ್ಪದೇ ಚಿತ್ರಮಂದಿರಕ್ಕೆ ಬೇಟಿಕೊಟ್ಟು ನೋಡಿ ಚಿತ್ರ ನಿಮ್ಮನು ರಂಜಿಸೋದು ಖಂಡಿತ.