Site icon Vistara News

Kiara Sid Wedding: ಕಿಯಾರಾ-ಸಿದ್ಧಾರ್ಥ ಮದುವೆ ಅಟೆಂಡ್ ಮಾಡಲಿದ್ದಾರೆ ಗೆಳೆಯ ರೋಹಿತ್ ಶೆಟ್ಟಿ

Famous director Rohit Shetty will attend Kiara Sid Wedding

ನವದೆಹಲಿ: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಫೆ.6ರಂದು ಬಾಲಿವುಡ್ ಜೋಡಿ ಸಿದ್ಧಾರ್ಥ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಆಡ್ವಾಣಿ (Kiara Advani) ಮದುವೆಯಾಗಲಿದ್ದಾರೆ(Kiara Sid Wedding). ಈ ಮದುವೆಗೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ಸಿದ್ಧಾರ್ಥ ಅವರ ಗೆಳೆಯ ರೋಹಿತ್ ಶೆಟ್ಟಿ ಅವರೂ ಈ ಮದುವೆಗೆ ಆಗಮಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಿಯಾರಾ ಮತ್ತು ಸಿದ್ದಾರ್ಥ್‌ ಅವರ ವಿವಾಹವು ಕಾರ್ಯಕ್ರಮವು ಫೆ.4ರಿಂದ ಫೆ.6ರವರೆಗೆ ಜರುಗಲಿದೆ. ಕಾರ್ಯಕ್ರಮಕ್ಕೆ ಕರಣ್‌ ಜೋಹರ್‌, ಶಾಹಿದ್‌ ಕಪೂರ್‌, ಮೀರಾ ರಜಪೂತ್‌ ಸೇರಿದಂತೆ ಒಟ್ಟು 100 ಗಣ್ಯರಿಗೆ ಆಹ್ವಾನಿಸಿರುವುದಾಗಿ ವರದಿಯಾಗಿದೆ. ವಿವಾಹವಾದ ನಂತರ ಜೋಡಿಯು ದೆಹಲಿ ಮತ್ತು ಮುಂಬೈನಲ್ಲಿ ಎರಡು ಪ್ರತ್ಯೇಕ ಆರತಕ್ಷತೆ ಕಾರ್ಯಕ್ರಮ ನಡೆಸಲಿವೆ ಎಂದು ವರದಿಯಿದೆ.

ವಿವಾಹ ಪೂರ್ವದ ಕಾರ್ಯಕ್ರಮಗಳು ಫೆಬ್ರವರಿ 5ರಿಂದ ಆರಂಭವಾಗಲಿವೆ. ಫೆ.5ರಂದು ಮೆಹೆಂದಿ ಸಂಗೀತ ರಾತ್ರಿ ಹಾಗೂ 6ರಂದು ಬೆಳಗ್ಗೆ ಅರಿಶಣ ಕಾರ್ಯಕ್ರಮ ನಡೆಯಲಿದೆ. ಇನ್ನೇನು ಶ್ರೀಮತಿಯಾಗಲಿರುವ ಕಿಯಾರಾ ಶನಿವಾರ ಜೈಸಲ್ಮೇರ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸಿದ್ಧಾರ್ಥ್‌ ಮಲ್ಹೋತ್ರಾ ಕೂಡ ಆಗಮಿಸಿದ್ದಾರೆ. ಅದರ ಫೋಟೋಗಳು ಎಲ್ಲೆಡೆ ಹರಿದಾಡಿವೆ.

ಇದನ್ನೂ ಓದಿ: Kiara Sidharth Wedding: ಕಿಯಾರಾ ಸಿದ್ಧಾರ್ಥ್​ ಮದುವೆಗೆ ಬರುವವರಿಗೆ ಸಿಗಲಿದೆ ಐಷಾರಾಮಿ ಸೌಕರ್ಯ

ಬಿಳಿ ಪ್ಯಾಂಟ್‌, ಬಿಳಿ ಟಾಪ್‌ ತೊಟ್ಟಿರುವ ಕಿಯಾರಾ ಕಡು ಗುಲಾಬಿ ಬಣ್ಣದ ಶಾಲನ್ನು ಧರಿಸಿದ್ದಾರೆ. ಬಂಗಾರದ ಬಣ್ಣದ ಸಣ್ಣದೊಂದು ಬ್ಯಾಗ್‌ ಅನ್ನು ಹಿಡಿದು, ವಿಮಾನ ನಿಲ್ದಾಣದಿಂದ ಹೊರಬಂದಿದ್ದಾರೆ. ಅಲ್ಲಿ ಅವರಿಗಾಗಿಯೇ ಕಾಯುತ್ತ ಕುಳಿತಿದ್ದ ಫೋಟೋಗ್ರಾಫರ್‌ಗಳತ್ತ ಕೈ ಬೀಸುತ್ತಾ ನಕ್ಕಿದ್ದಾರೆ. ನಟಿಗೆ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್‌ ಮಲ್ಹೋತ್ರಾ ಕೂಡ ಜೈಸಲ್ಮೇರ್‌ಗೆ ಬಂದಿಳಿದ್ದಾರೆ. ಇಬ್ಬರೂ ಒಂದೇ ಕಾರಿನಲ್ಲಿ ಮದುವೆ ನಡೆಯುವ ಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ.

Exit mobile version