ಮೈಸೂರು: ಮೈಸೂರಿನ ಎಚ್.ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾಹಸ ಸಿಂಹ ವಿಷ್ಣುವರ್ಧನ್ ( Vishnuvardhan ) ಅವರ ಸ್ಮಾರಕ ಭಾನುವಾರ ಜನವರಿ 29ರಂದು ಲೋಕಾರ್ಪಣೆಗೊಂಡಿದೆ. ವಿಷ್ಣು ಸ್ಮಾರಕಕ್ಕೆ ವಿರಳ ಸಂಖ್ಯೆಯಲ್ಲಿ ದಾದಾ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕುಟುಂಬದೊಂದಿಗೆ ಬಂದು ವೀಕ್ಷಣೆ ಮಾಡುತ್ತಿದ್ದಾರೆ. ಜತೆಗೆ ಸ್ಮಾರಕದ ಬಳಿ ಯಾವುದೇ ಮೂಲಭೂತ ಸೌಕರ್ಯ ಇಲ್ಲದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಷ್ಣು ಸ್ಮಾರಕಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ನಿರಾಯಾಸ ಪ್ರವೇಶದ ನಡುವೆ ಭದ್ರತಾ ಸಿಬ್ಬಂದಿ ಕೂಡ ಇಲ್ಲದಂತಾಗಿದೆ. ಅಡೆತಡೆ ಇಲ್ಲದೆ ಸ್ಮಾರಕ ವೀಕ್ಷಣೆ ಮಾಡುತ್ತಿದ್ದಾರೆ ವಿಷ್ಣು ಅಭಿಮಾನಿಗಳು. ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಆಡಂಬರ ಕಾರ್ಯಕ್ರಮ ಆಗಿದ್ದು, ರಾತ್ರಿ ಆಗುತ್ತಿದ್ದಂತೆಯೇ ಕಗ್ಗತ್ತಲು ಆವರಿಸಿದೆ. ಸ್ಮಾರಕಕ್ಕೆ ಬೆಳಕಿನ ವ್ಯವಸ್ಥೆ ಸರ್ಕಾರ ಮಾಡದೇ ಇರುವುದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸಂಜೆ ಬಳಿಕ ವಿಷ್ಣುವರ್ಧನ್ ಸ್ಮಾರಕ ವೀಕ್ಷಣೆಗೆ ಬಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ. ಸ್ಮಾರಕದ ಬಳಿ ಯಾವುದೇ ಮೂಲಭೂತ ಸೌಕರ್ಯ ಇಲ್ಲದಕ್ಕೆ ಕೋಪ ಹೊರಹಾಕುತ್ತಿದ್ದಾರೆ ಸ್ಮಾರಕದ ಸುತ್ತ ಮುಂಜಾನೆಯಿಂದಲೂ ಸ್ವಚ್ಛತಾ ಕಾರ್ಯ ಆರಂಭಗೊಂಡಿದ್ದರೂ, ಕಾಟಾಚಾರದಿಂದ ಕನ್ನಡದ ಮೇರು ನಟನ ಸ್ಮಾರಕ ಉದ್ಘಾಟನೆ ಮಾಡಿದೆ ಎಂದು ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: Vishnuvardhan: ಸ್ಮಾರಕ ಸರ್ಕಾರದ ಯೋಜನೆ, ಲಾಭ, ನಷ್ಟ ಎರಡೂ ಸರ್ಕಾರಕ್ಕೆ ಸೇರಿದ್ದು: ನಟ ಅನಿರುದ್ಧ
ಇದನ್ನೂ ಓದಿ: Vishnuvardhan: ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಯ ಫೋಟೊಗಳು ಇಲ್ಲಿವೆ
ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಆಗ್ರಹ
ವಿಷ್ಣು ಸ್ಮಾರಕ ಉದ್ಘಾಟನೆ ಸಮಯದಲ್ಲಿ ಭಿತ್ತಿಪತ್ರ ಪ್ರದರ್ಶನ ವೇಳೆ ಬೋರ್ಡ್ ಹಿಡಿದು ವಿಷ್ಣು ಅಭಿಮಾನಿಗಳು ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಆಗ್ರಹಿಸಿದ್ದರು . ಅನಿರುದ್ಧ್ ಅವರ ಭಾಷಣಕ್ಕೂ ಅಭಿಮಾನಿಗಳು ಅವಕಾಶ ನೀಡದ ಪರಿಸ್ಥಿತಿ ಉಂಟಾಗಿತ್ತು. ನಿಮ್ಮ ಭಿತ್ತಿಪತ್ರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ ಎಂದು ಅನಿರುದ್ಧ್ ಎಷ್ಟೇ ಕೇಳಿಕೊಂಡರು ಅಭಿಮಾನಿಗಳು ಭಿತ್ತಿಪತ್ರ ಕೆಳಗಿಳಿಸದೆ ಕಿರುಚಾಡಿದ್ದರು. ಕಳೆದ ಹಲವಾರು ವರ್ಷಗಳಿಂದ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ನಾನಾ ಕಾರಣಗಳಿಂದ ನನೆಗುದಿಯಲ್ಲಿತ್ತು. ಕೊನೆಗೂ ಮೈಸೂರಿನಲ್ಲಿ ಅನಾವರಣಗೊಂಡಿದೆ .ಇದೀಗ ದಾದಾ ಅಭಿಮಾನಿಗಳಲ್ಲಿ ಸರ್ಕಾರ ಕಾಟಾಚಾರದಿಂದ ವಿಷ್ಣು ಅವರ ಸ್ಮಾರಕ ಉದ್ಘಾಟನೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.