Site icon Vistara News

Animal Twitter Review: ರಣಬೀರ್ ಕಪೂರ್ ನಟನೆ ‘ಖತರ್ನಾಕ್’; ಅನಿಮಲ್‌ ʻಬ್ಲಾಕ್‌ಬಸ್ಟರ್ʼ ಗ್ಯಾರಂಟಿ!

Fans call Ranbir animal film blockbuster

ಬೆಂಗಳೂರು: ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರದ ಮೊದಲ (Animal Twitter Review) ವಿಮರ್ಶೆಗಳು ಹೊರಬಂದಿವೆ. ಅನೇಕ ಅಭಿಮಾನಿಗಳು ‘ಅನಿಮಲ್’ ಸಿನಿಮಾ ನೋಡಲು ಫಸ್ಟ್‌ ಡೇ, ಫಸ್ಟ್‌ ಶೋಗೆ ಹೋಗಿದ್ದಾರೆ. ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಅನೇಕರು ಸಂದೀಪ್ ರೆಡ್ಡಿ ವಂಗಾ-ನಿರ್ದೇಶನವನ್ನು ‘ಬ್ಲಾಕ್‌ಬಸ್ಟರ್’ ಎಂದು ಕರೆದಿದ್ದಾರೆ. ಅಭಿಮಾನಿಗಳ ರಣಬೀರ್ ಕಪೂರ್ ಅವರ ನಟನೆಗೆ ‘ಖತರ್ನಾಕ್’ ಎಂದು ಹಾಡಿ ಹೊಗಳಿದ್ದಾರೆ.

ಅನೇಕರು ‘ಅನಿಮಲ್’ ಸಿನಿಮಾವನ್ನು “ಮೆಗಾ ಬ್ಲಾಕ್ಬಸ್ಟರ್” ಎಂದು ಘೋಷಿಸಿದ್ದಾರೆ. ʻʻಇದು ಒಂದು ಬ್ಲಾಕ್‌ಬಸ್ಟರ್ ಸಿನಿಮಾ ರಣಬೀರ್‌ ಜತೆಗೆ ಒಂದು ಐಕಾನಿಕ್ ಬ್ಲಡ್ ಶೆಡ್ ಹಿಂಸಾಚಾರದ ಚಲನಚಿತ್ರವನ್ನು ಮಾಡಿದ್ದಾರೆ. ರಣಬೀರ್ ಮತ್ತು ರಶ್ಮಿಕಾ ಚುಂಬನದ ದೃಶ್ಯ ಸೂಪರ್‌ʼʼಎಂದು ಒಬ್ಬರು ಬರೆದಿದ್ದಾರೆ.

ಗ್ಯಾಂಗ್ಸ್ ಆಫ್ ವಾಸೇಪುರ್ ನಂತರದ ಶ್ರೇಷ್ಠ ಭಾರತೀಯ ಚಲನಚಿತ್ರವಾಗಿದೆ ಅನಿಮಲ್‌. ರಣಬೀರ್ ಕಪೂರ್, ಅನಿಲ್ ಕಪೂರ್ ನಟನೆ ಉತ್ತಮ. ವಿಶೇಷವಾಗಿ ಬಾಬಿ ಡಿಯೋಲ್ ಸಾಹಸ ದೃಶ್ಯಗಳು. ಕ್ಲೈಮ್ಯಾಕ್ಸ್ ದೃಶ್ಯವು ಮನಸ್ಸಿಗೆ ಮುದ ನೀಡುತ್ತದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Animal Trailer: ರಕ್ತಸಿಕ್ತ ಅವತಾರದಲ್ಲಿ ರಣಬೀರ್; `ಅನಿಮಲ್‌’ ಟ್ರೈಲರ್‌ ಔಟ್‌!

ರಣಬೀರ್ ಕಪೂರ್ ಅವರು ಬಾಲಿವುಡ್‌ನಲ್ಲಿ ಏಕೆ ಅತ್ಯುತ್ತಮ ನಟ ಎಂದು ಈ ಸಿನಿಮಾ ಮೂಲಕ ಸಾಬೀತುಪಡಿಸಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರದ ಅತ್ಯುತ್ತಮ ಭಾಗವಾಗಿದೆ. ಕೆಟ್ಟ ವಿಷಯವೆಂದರೆ ರಶ್ಮಿಕಾ ಮಂದಣ್ಣ ಅವರ ನಟನೆ ಮತ್ತು ಚಿತ್ರ ತುಂಬಾ ಲ್ಯಾಗ್‌ ಇತ್ತು ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಮೊದಲಾರ್ಧ ತುಂಬಾ ಚೆನ್ನಾಗಿದೆ. ಸಂದೀಪ್ ಅವರಿಂದ ನಾವು ಏನನ್ನು ನಿರೀಕ್ಷಿಸಿದ್ದೇವೆ ಅದು ಎಲ್ಲವೂ ಇತ್ತು. . ಇಂಟರ್ವಲ್ ತುಂಬಾ ಚೆನ್ನಾಗಿ ಇತ್ತು. ದ್ವಿತೀಯಾರ್ಧದಿಂದ ಸಮಸ್ಯೆ ಪ್ರಾರಂಭವಾಯಿತು, ಕೆಲವು ದೃಶ್ಯಗಳ ಅನಗತ್ಯ ಎನಿಸಿತು ಎಂದು ಟ್ವೀಟ್‌ ಮಾಡಿದ್ದರೆ.

ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌ ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ನಿರ್ದೇಶನವಿದೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.

Exit mobile version