ಬೆಂಗಳೂರು: ಏಪ್ರಿಲ್ 5ರಂದು ಇಂದೋರ್‌ನಲ್ಲಿ ಕಾಲೇಜು ಫೆಸ್ಟ್‌ನಲ್ಲಿ ಗಾಯಕ ಫರ್ಹಾನ್ ಅಖ್ತರ್ (Farhan Akhtar) ನೇರ ಪ್ರದರ್ಶನ ನೀಡಬೇಕಿತ್ತು. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಜೋರಾಗಿ ಬೀಸಿದ ಬಿರುಗಾಳಿಯ (Dust Storm) ಕಾರಣದಿಂದ ಬೃಹತ್ ವೇದಿಕೆಯೇ ನೆಲಕ್ಕುರುಳಿದೆ. ಇದೀಗ ಮಾಧ್ಯಮಗಳು ಹಂಚಿಕೊಂಡ ಖಾತೆಯಿಂದ ಹಂಚಿಕೊಂಡ ವಿಡಿಯೊ ವೈರಲ್ ಆಗಿದೆ.
ಪತ್ನಿ ಶಿಬಾನಿ ದಾಂಡೇಕರ್ ಅವರೊಂದಿಗೆ NMACC ಲಾಂಚ್‌ನಲ್ಲಿ ಕಾಣಿಸಿಕೊಂಡಿದ್ದ ಫರ್ಹಾನ್ ಅಖ್ತರ್, ಇಂದೋರ್‌ನಲ್ಲಿ ನಡೆದ ಕಾಲೇಜು ಫೆಸ್ಟ್‌ನಲ್ಲಿ ನೇರ ಪ್ರದರ್ಶನ ನೀಡಲು ಸಿದ್ಧರಾಗಿದ್ದರು. ಆದಾಗ್ಯೂ, ಅವರ ಪ್ರದರ್ಶನಕ್ಕೆ ಮುಂಚಿತವಾಗಿ, ಬಿರುಗಾಳಿಯಿಂದಾಗಿ ಪ್ರದರ್ಶನಕ್ಕಾಗಿ ಸ್ಥಾಪಿಸಲಾದ ವೇದಿಕೆಯು ಕುಸಿಯಿದಿದೆ.
ಇದೀಗ ಈ ವಿಡಿಯೊ ವೈರಲ್ ಆಗಿದ್ದು. ವಿಡಿಯೊದಲ್ಲಿ ವೇದಿಕೆಯುತ್ತ ಜನರ ಗುಂಪು ಧಾವಿಸುತ್ತಿರುವುದು ಸೆರೆಯಾಗಿದೆ. ಏಪ್ರಿಲ್ 7ರಂದು ಬನ್ಸಾಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಸಲುವಾಗಿ ಕಾರ್ಯಕ್ರಮ ಮುಗಿಸಿಕೊಟ್ಟ ನಂತರ ಫರ್ಹಾನ್ ಅಖ್ತರ್ ಅವರು ಹೈದರಾಬಾದ್, ಬೆಂಗಳೂರು, ಕೊಲ್ಕತ್ತಾ, ಜೈಪುರ ಮುಂತಾದೆಡೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರ ‘ಎಕೋಸ್’ ಆಲ್ಬಂನಲ್ಲಿ ಇರುವ ಒರಿಜಿನಲ್ ಹಾಡುಗಳನ್ನು ಈ ವೇದಿಕೆಯಲ್ಲಿ ಫರ್ಹಾನ್ ಅಖ್ತರ್ ಹಾಡಲಿದ್ದಾರೆ.
ಇದನ್ನೂ ಓದಿ: AR Rahman | ಕೆನಡಾ ರಸ್ತೆಗೆ ಎ.ಆರ್.ರೆಹಮಾನ್ ಹೆಸರು, ಇದಕ್ಕೆ ಸಂಗೀತ ನಿರ್ದೇಶಕ ಹೇಳಿದ್ದೇನು?
ವೇದಿಕೆ ಕುಸಿದು ಬಿದ್ದ ದೃಶ್ಯ
ಸಿನಿಮಾ ನಿರ್ದೇಶನದಲ್ಲೂ ಫರ್ಜಾನ್ ಅಖ್ತರ್ ಅವರು ಬ್ಯುಸಿ ಆಗಿದ್ದಾರೆ. ಫರ್ಜಾನ್ ಅಖ್ತರ್ ನಿರ್ದೇಶನದಲ್ಲಿ ‘ಜೀ ಲೇ ಝರಾ’ ಸಿನಿಮಾ ಸಿದ್ಧವಾಗಲಿದೆ. ಈ ಚಿತ್ರದ ಶೂಟಿಂಗ್ಗೆ ಸಿದ್ಧತೆ ನಡೆಯುತ್ತಿದೆ. ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
ದಿಲ್ ಚಾಹ್ತಾ ಹೈ’, ‘ಲಕ್ಷ್ಯ’, ‘ಡಾನ್’, ‘ಡಾನ್ 2’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಜಿಂದಗಿ ನಾ ಮಿಲೇಗಿ ದೋಬಾರಾ’, ‘ಭಾಗ್ ಮಿಲ್ಕಾ ಭಾಗ್’ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.