ಬೆಂಗಳೂರು: ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರ ಬಹು ನಿರೀಕ್ಷಿತ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ʻತೂ ಜೂಟಿ ಮೈನ್ ಮಕ್ಕಾರ್ʼ (Tu Jhoothi Main Makkaar) ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಅವರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ರಣಬೀರ್ ಜತೆ ಸೆಲ್ಫಿ ಕ್ಲಿಕ್ಕಿಸಲು ಅಭಿಮಾನಿಗಳು ಗುಂಪುಗೂಡಿದ್ದರು. ಹಾಗೆಯೇ ಮಹಿಳಾ ಅಭಿಮಾನಿಯೊಬ್ಬರು ರಣಬೀರ್ ಮುಖ ಮತ್ತು ಕೈಗಳನ್ನು ಸ್ಪರ್ಶಿಸಲು ಬಯಸಿದ್ದಾರೆ. ಇದಕ್ಕಾಇಗ ರಣಬೀರ್ ಅವರನ್ನು ಎಳೆದಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದು, ಇದೊಂದು ʻಕಿರುಕುಳʼ ಎಂದು ಹೇಳಿದ್ದಾರೆ.
ಇದೀಗ ಈ ವಿಡಿಯೊ ವೈರಲ್ ಆಗಿದ್ದು, ವಿಡಿಯೊದಲ್ಲಿ ನಟನ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಕಿರುಕುಳ ನೀಡಿದಂತೆ ಇದೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ನೀಡಿದ್ದಾರೆ.
ವಿಡಿಯೊದಲ್ಲಿ ಮಹಿಳೆ ಮಾಡಿದ್ದೇನು?
ಮಹಿಳಾ ಅಭಿಮಾನಿಯೊಬ್ಬಳು ರಣಬೀರ್ ಅವರ ಮುಖ ಮತ್ತು ಕೈಗಳನ್ನು ಮುಟ್ಟಲು ಮುಂದಾಗಿದ್ದಾಳೆ. ರಣಬೀರ್ ಹೊರಗೆ ಹೊರಟರೂ ಬಿಡದ ಆಕೆ, ಅವರ ಟೀ ಶರ್ಟ್ ಎಳೆಯಲು ಪ್ರಯತ್ನಿಸಿದ್ದಾಳೆ. ಅಷ್ಟೇ ಅಲ್ಲದೇ “ಐ ಲವ್ ಯೂ” ಎಂದು ಕಿರುಚಾಡಿದ್ದಾಳೆ. ಈ ಬಗ್ಗೆ ನೆಟ್ಟಿಗರು ಮಹಿಳೆ ಕುರಿತು ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಶೇರ್ ಆದ ಕೂಡಲೇ ಇದನ್ನು ʻಕಿರುಕುಳʼʼ ಎಂದು ಕರೆದಿದ್ದಾರೆ. ಕೆಲವು ಬಳಕೆದಾರರು ರಣಬೀರ್ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳದಿದ್ದಕ್ಕಾಗಿ ಹೊಗಳಿದ್ದಾರೆ.
ಇದನ್ನೂ ಓಸಿ: Rashmika Mandanna | ರಣಬೀರ್-ರಶ್ಮಿಕಾ ಅಭಿನಯದ ʻಅನಿಮಲ್ʼ ಸಿನಿಮಾ ಫಸ್ಟ್ ಲುಕ್ ಔಟ್: ರಗಡ್ ಲುಕ್ ಅಂದ್ರು ಫ್ಯಾನ್ಸ್!
ಮಹಿಳಾ ಅಭಿಮಾನಿ ವಿಡಿಯೊ ವೈರಲ್
ರಣಬೀರ್ ಕಪೂರ್ ಮುಂಬರುವ ಯೋಜನೆಗಳು
ʻತೂ ಜೂಟಿ ಮೈನ್ ಮಕ್ಕಾರ್ʼ ಚಿತ್ರದಲ್ಲಿ ರಣಬೀರ್ ಮತ್ತು ಶ್ರದ್ಧಾ ಕಪೂರ್ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಮಾರ್ಚ್ 8 ರಂದು ಚಿತ್ರಮಂದಿರಗಳಿಗೆ ಬರಲಿದೆ. ಇದಲ್ಲದೆ, ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.