Site icon Vistara News

Fighter Twitter Review: ʻಫೈಟರ್‌ʼ ಸಿನಿಮಾ ರಿಲೀಸ್‌; ‘ಮಾಸ್ಟರ್‌ಪೀಸ್, ʻಬ್ಲಾಕ್‌ಬಸ್ಟರ್ʼ ಅಂದ್ರು ನೆಟ್ಟಿಗರು!

Fighter Twitter Review Netizens Call Masterpiece, Blockbuster

ಬೆಂಗಳೂರು: ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ʻಫೈಟರ್ʼ ಸಿನಿಮಾ (Fighter Twitter Review) ವಿಶ್ವಾದ್ಯಂತ ತೆರೆ ಕಂಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅಭಿಮಾನಿಗಳು ಚಿತ್ರವನ್ನು ‘ಮೆಗಾ ಬ್ಲಾಕ್‌ಬಸ್ಟರ್’, ‘ಸೂಪರ್ ಆ್ಯಕ್ಷನ್ ಫಿಲ್ಮ್’, ‘ಅತ್ಯುತ್ತಮ ಛಾಯಾಗ್ರಹಣ, ʻಸಾಹಸ ಮತ್ತು ಅಭಿನಯʼ ʻಮಾಸ್ಟರ್ ಪೀಸ್’ ಎಂದು ಕರೆಯುತ್ತಿದ್ದಾರೆ. ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಕೂಡ ಸಿನಿಮಾವನ್ನು ಹೊಗಳಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಅಭಿಮಾನಿಗಳು ಮತ್ತು ಪ್ರೇಕ್ಷಕರು ಎಕ್ಸ್ ಜಾಲತಾಣದಲ್ಲಿ ವ್ಯಕ್ತಪಡಿಸಿದ ಪ್ರತಿಕ್ರಿಯೆ ಇಲ್ಲಿದೆ.

ಒಬ್ಬರು ʻʻಇದು ಬ್ಲಾಕ್‌ಬಸ್ಟರ್ ಚಲನಚಿತ್ರವಲ್ಲ, ಇದು ʻಮೆಗಾ ಬ್ಲಾಕ್‌ಬಸ್ಟರ್ʼ ಚಲನಚಿತ್ರ, ಆ್ಯಕ್ಷನ್, ನಿರ್ದೇಶನ, ವಿಎಫ್‌ಏಕ್ಸ್‌, ಛಾಯಾಗ್ರಹಣ, ಹಿನ್ನೆಲೆ ಧ್ವನಿ ಎಲ್ಲವೂ ಅದ್ಭುತ. ನೋಡಲೇಬೇಕಾದ ಸಿನಿಮಾʼʼಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, “ವಿಶಿಷ್ಟವಾದ, ನಂಬಲಾಗದ ಅನುಭವವು ಪ್ರೇಕ್ಷಕರಿಗೆ ಕಾದಿದೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಶ್ಲಾಘಿಸುವ ಚಲನಚಿತ್ರ. ಅನಿಲ್ ಕಪೂರ್, ನಟನೆ ಸ್ಪೂರ್ತಿದಾಯಕ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನ, ಸ್ಕ್ರೀನ್ ಪ್ಲೇ, ಆಕ್ಷನ್, ಸಾಹಸಗಳು, ಮ್ಯಾಜಿಕ್ ಮಾಡಿದ್ದೀರಿ. ಚಿತ್ರ ನಿರ್ಮಾಣದ ಗುಣಮಟ್ಟ ಕೂಡ ಚೆನ್ನಾಗಿದೆ. ಸಿದ್ದಾರ್ಥ್ ಆನಂದ್ ನಿಮ್ಮ ಪ್ರತಿಭೆ ಮತ್ತು ಪ್ರಯತ್ನಗಳಿಗೆ ಒಂದು ಸಲಾಂʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Fighter Movie: ʻಫೈಟರ್‌ʼ ಚಿತ್ರದಲ್ಲಿನ ದೀಪಿಕಾ ʻಬಿಕಿನಿʼ ಮೇಲೆ ಸೆನ್ಸಾರ್‌ ಮಂಡಳಿ ಕೆಂಗಣ್ಣು!

ʻʻಪ್ರತಿ ದೃಶ್ಯದಲ್ಲೂ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಹೃತಿಕ್‌. ದೀಪಿಕಾ ಅವರು ಪಠಾಣ್ ನಂತರ ತಮ್ಮ ಅತ್ಯುತ್ತಮ ಅಭಿನಯದೊಂದಿಗೆ ಮರಳಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಪಠಾಣ್‌ ಮೂಲಕ 1000 ಕೋಟಿಯ ಹಿಟ್‌ ಸಿನಿಮಾ ನೀಡಿರುವ ಸಿದ್ಧಾರ್ಥ್‌ ಆನಂದ್‌, ಫೈಟರ್‌ ಮೂಲಕ ಮತ್ತೊಂದು ಹಿಟ್‌ ಸಿನಿಮಾ ನೀಡಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಂದು ನಿಮಿಷ 10 ಸೆಕೆಂಡ್‌ನ ಟೀಸರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್‌ ಸಿನಿಮಾ ನಂತರ ಈ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆಗಿದ್ದಾರೆ.ಹೃತಿಕ್​ ರೋಷನ್​ ಜತೆ ಸಿದ್ಧಾರ್ಥ್‌ ಆನಂದ್‌ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು.

Exit mobile version