Site icon Vistara News

Hrithik Roshan: `ಫೈಟರ್‌’ ಸಿನಿಮಾಗೆ ಹೃತಿಕ್‌ ರೋಷನ್‌ ಸಂಭಾವನೆ 85 ಕೋಟಿ ರೂ; ದೀಪಿಕಾ ಸಂಬಳ?

Fighter's Budget Has Gone Up 350 Crore Reveals Hrithik Roshan's Fee

ಬೆಂಗಳೂರು: `ಫೈಟರ್‌’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ (Hrithik Roshan) ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಅವರ ಪಠಾಣ್‌ ಸಿನಿಮಾವನ್ನು ನಿರ್ದೇಶಿಸಿದ ಸಿದ್ಧಾರ್ಥ್ ಆನಂದ್ ಅವರು ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದೀಗ ವಿಮರ್ಶಕ ಕಮಾಲ್ ಆರ್ ಖಾನ್ ಈ ಸಿನಿಮಾ ಬಜೆಟ್ ಮೀರಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಾರೆಲ್ಲ ಎಷ್ಟೆಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಕೆಆರ್‌ಕೆ ಟ್ವೀಟ್‌ನಲ್ಲಿ ಈ ಸಿನಿಮಾಗೆ ಹೃತಿಕ್‌ ರೋಷನ್‌ 85 ಕೋಟಿ ರೂ. ಸಂಭಾವನೆ ಪಡೆದರೆ, ದೀಪಿಕಾ ಚಿತ್ರಕ್ಕೆ 20 ಕೋಟಿ ರೂ. ಪಡೆಯುತ್ತಿದ್ದಾರೆ. ಸಿದ್ಧಾರ್ಥ್ ಆನಂದ್‌ ಅವರು ದೀಪಿಕಾಗಿಂತ ಹೆಚ್ಚು, ಅಂದರೆ 40 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ದೀಪಿಕಾಗಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ಕೆಆರ್‌ಕೆ ಹೇಳಿಕೊಂಡಿದ್ದಾರೆ. ಉಳಿದ ಸೆಲೆಬ್ರಿಟಿಗಳು 15 ಕೋಟಿ ರೂ. ಪಡೆದುಕೊಳ್ಳುತ್ತಿದ್ದು, ಸಂಭಾವನೆ ಮೊತ್ತವೇ 160 ಕೋಟಿ ರೂ. ತಲುಪಲಿದೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ. 350 ಕೋಟಿ ರೂ. ಬಜೆಟ್‌ ಈಗಾಗಲೆ ಮೀರಿದೆ.

ಹಲವರು ಇಷ್ಟು ಬಜೆಟ್‌ ಸಿನಿಮಾ ಅಲ್ಲ ಎಂದು ಕಾಮೆಂಟ್‌ ಮಾಡಿದ್ದರೂ, ಇದು ಭಾರತದಲ್ಲಿಯೇ ಅತಿ ದೊಡ್ಡ ಆ್ಯಕ್ಷನ್ ಸಿನಿಮಾ ಆಗಿರಲಿದೆ ಎಂದು ವರದಿಯಾಗಿದೆ. ಅನಿಲ್ ಕಪೂರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೃತಿಕ್​ ರೋಷನ್​ ಜತೆ ಸಿದ್ಧಾರ್ಥ್‌ ಆನಂದ್‌ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ ಜತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

ಇದನ್ನೂ ಓದಿ: Liger Trailer | ನೀನು ಫೈಟರ್‌ ಆದರೆ ನಾನು ಯಾರು? ಪ್ರಶ್ನಿಸಿದ ಲೆಜೆಂಡ್ ಮೈಕ್ ಟೈಸನ್, ಅಬ್ಬರಿಸಿದ ಲೈಗರ್‌

ಈ ಸಿನಿಮಾಗಾಗಿ ಹೃತಿಕ್‌ ಭರ್ಜರಿ ವರ್ಕೌಟ್‌ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ಹೃತಿಕ್ ರೋಷನ್‌ ಫೋಟೊ ಕ್ಲಿಕ್ಕಿಸಿಕೊಂಡಿದ್ದು, ಫೋಟೊ ನೋಡಿ ಅವರ ಅಭಿಮಾನಿಗಳು ಸೇರಿದಂತೆ ಹಲವು ಬಾಲಿವುಡ್‌ ತಾರೆಯರು ಕಾಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಕ್ಲೀನ್ ಶೇವ್ ಲುಕ್‌ನಲ್ಲಿ ನಟ ಕಾಣಿಸಿಕೊಂಡಿದ್ದರು.


Exit mobile version