ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ವಿವಾದದ ಸುಳಿಗೆ ಸಿಲುಕಿದ್ದಾರೆ. ಗಣರಾಜ್ಯೋತ್ಸವದ ಕುರಿತು ಅವರು ನೀಡಿದ ಒಂದು ಹೇಳಿಕೆಗಾಗಿ ಇದೀಗ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಕೂಗು ಕೇಳಿಬಂದಿದೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಮದ್ದೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕ್ರಾಂತಿ ಸಿನಿಮಾದಲ್ಲಿ ನಟಿಸುತ್ತಿರುವ ರಚಿತಾ ರಾಮ್ ಅದನ್ನು ಪ್ರಮೋಟ್ ಮಾಡುವ ಭರದಲ್ಲಿ ನೀಡಿದ ವಿವಾದಿತ ಹೇಳಿಕೆ ನೀಡಿದ್ದು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ʻʻಇಷ್ಟು ವರ್ಷ ಜನವರಿ 26ಕ್ಕೆ ಗಣರಾಜ್ಯೋತ್ಸವ ಮಾಡುತ್ತ ಇದ್ದೆವು. ಆದರೆ ಈ ವರ್ಷ ಕ್ರಾಂತಿ ಉತ್ಸವ ಮಾತ್ರʼʼ ಎಂದು ಅವರು ಹೇಳಿದ್ದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಈ ಬಗ್ಗೆ ಮಾತನಾಡಿ ʻʻರಚಿರಾ ರಾಮ್ ನೀಡಿರುವ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ, ಇದರ ವಿರುದ್ಧ ಕ್ರಮ ಕೈಗೊಂಡು ಅವರನ್ನು ದೇಶದಿಂದ ಗಡಿಪಾರು ಮಾಡಬೇಕುʼʼ ಎಂದು ಮಂಡ್ಯ ಜಿಲ್ಲೆಯ ಮದ್ದೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | Kangana Ranaut | ಎಮರ್ಜೆನ್ಸಿ ಸಿನಿಮಾಗಾಗಿ ನನ್ನೆಲ್ಲ ಆಸ್ತಿ ಅಡವಿಟ್ಟಿದ್ದೇನೆ, ಇದು ನನಗೆ ಪುನರ್ಜನ್ಮ: ಕಂಗನಾ ರಣಾವತ್
ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಚಿತಾ ರಾಮ್ ಅವರನ್ನು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರಚಿತಾ ರಾಮ್ ಯುಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿ “ಎಕ್ಸೈಟ್‌ಮೆಂಟ್‌ನಲ್ಲಿ ಮಾತನಾಡುವಾಗ ವಾಕ್ಯ ಮರೆತುಬಿಡುತ್ತೇವೆ. ಸುಮ್ಮನೆ ಕೆಲಸ ಮಾಡಿಕೊಂಡು, ಸಂದರ್ಶನ ಕೊಟ್ಟು ನಾನು ಸುಮ್ಮನಾಗುತ್ತಿಲ್ಲ. ನಾನು ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಇದು ನನಗೆ ಬಹಳ ದೊಡ್ಡ ಸಿನಿಮಾʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | National Hugging Day 2023 | ಇಲ್ಲಿವೆ ಸ್ಯಾಂಡಲ್‌ವುಡ್ ರಿಯಲ್ ಕಪಲ್ಸ್ ಬೆಸ್ಟ್ ಹಗ್ಗಿಂಗ್ ಫೋಟೊಗಳು