Site icon Vistara News

Renjusha Menon: ಮಲಯಾಳಂ ಖ್ಯಾತ ನಟಿ ರೆಂಜೂಷಾ ಮೆನನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

Film-serial actor Renjusha Menon

ಬೆಂಗಳೂರು: ಜನಪ್ರಿಯ ಮಲಯಾಳಂ ಚಲನಚಿತ್ರ (Renjusha Menon) ಮತ್ತು ಟಿವಿ ಧಾರಾವಾಹಿ ನಟಿ ರೆಂಜೂಷಾ ಮೆನನ್ ಸೋಮವಾರ (ಅ.30) ಅವರ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ನಟಿ ತನ್ನ ಕುಟುಂಬದೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ಶ್ರೀಕರಿಯಂ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಸೋಮವಾರ ಬೆಳಗ್ಗೆ ಅವರ ಕೋಣೆಗೆ ಬೀಗ ಹಾಕಿದ್ದರಿಂದ ಮನೆಯವರಿಗೆ ಅನುಮಾನ ಬಂದಿತ್ತು. ಬಳಿಕ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ವಿಚಾರಣೆ ನಡೆಯುತ್ತಿದ್ದು, ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗುವುದು ಎಂದು ಮಾಹಿತಿ ಹಂಚಿಕೊಂಡಿದೆ.

ರೆಂಜೂಷಾ ಮೆನನ್ ಜನಪ್ರಿಯ ನಟಿ ಮತ್ತು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಲವು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾಳೆ. ಆತ್ಮಹತ್ಯೆಗೆ ಬಲವಾದ ಕಾರಣ ಇನ್ನು ತಿಳಿದು ಬಂದಿಲ್ಲ.

ಇದನ್ನೂ ಓದಿ: Li Keqiang: ಚೀನಾ ಮಾಜಿ ಪ್ರಧಾನಿ ಲೀ ಕೆಕಿಯಾಂಗ್‌ ಹೃದಯಾಘಾತದಿಂದ ನಿಧನ

ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಮೊದಲು ಟಿವಿ ಕಾರ್ಯಕ್ರಮದ ನಿರೂಪಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಲಯಾಳಂನ ಪ್ರಮುಖ ಚಾನೆಲ್‌ನಲ್ಲಿ ಸೆಲೆಬ್ರಿಟಿ ಟಿವಿ ಶೋನಲ್ಲಿ ಸ್ಪರ್ಧಿಯಾಗಿ ಅವರು ಮೊದಲು ಗುರುತಿಸಿಕೊಂಡರು.

ಸ್ತ್ರೀ’, ‘ನಿಜಾಲಟ್ಟಂ’, ‘ಮಗಳುದೆ ಅಮ್ಮ’, ‘ಬಾಲಾಮಣಿ’ ಧಾರಾವಾಹಿಗಳಲ್ಲಿ ರೆಂಜೂಷಾ ಅವರ ಅಭಿನಯ ಮನೆಮಾತಾಗುವಂತೆ ಮಾಡಿತು. ನಂತರ ಅವರು ‘ಸಿಟಿ ಆಫ್ ಗಾಡ್’, ‘ಮರಿಕ್ಕುಂಡೋರು ಕುಂಜಾಡು’, ‘ಬಾಂಬೆ ಮಾರ್ಚ್ 12’, ‘ಲಿಸಮ್ಮಾಯುದೇ ವೀಡು’, ‘ಕಾರ್ಯಸ್ಥಾನ’, ‘ಅದ್ಭುತ ದ್ವೀಪ’ ಮುಂತಾದ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು.

ಧಾರಾವಾಹಿಗಳಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದ ನಟ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂಬ ವರದಿಗಳಿವೆ. ರಂಜುಷಾ ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದರು.

Exit mobile version