Site icon Vistara News

Filmfare Awards 2022 | ಈ ಬಾರಿ ಫಿಲ್ಮ್‌ಫೇರ್‌ ಅವಾರ್ಡ್‌ ಬೆಂಗಳೂರಿನಲ್ಲಿ: ಅಡ್ವಾನ್ಸ್‌ ಬುಕ್ಕಿಂಗ್‌ ಓಪನ್‌!

Filmfare Awards 2022

ಬೆಂಗಳೂರು : ಸೆ.10 ಹಾಗೂ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೌತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್ಸ್‌ (ಸೈಮಾ -SIIMA) (Filmfare Awards 2022 ) ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಇದರ ಬೆನ್ನಲ್ಲೆ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಫಿಲ್ಮ್‌ಫೇರ್‌ ಅವಾರ್ಡ್‌ ಕಾರ್ಯಕ್ರಮ ಅಕ್ಟೋಬರ್ 9ರಂದು ಜರುಗಲಿದೆ.

ಕಳೆದ ವರ್ಷ ನಿಧನ ಹೊಂದಿದ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶೇಷ ಗೌರವಾರ್ಥಕವಾಗಿ ಈ ಬಾರಿ ಸೈಮಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಇದೀಗ ಸೈಮಾ ಬೆನ್ನಲ್ಲೆ ಫಿಲ್ಮ್‌ಫೇರ್‌ ಸೌತ್‌ ಅವಾರ್ಡ್‌ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ.

2019ರಲ್ಲಿ ಫಿಲ್ಮ್‌ಫೇರ್‌ ಅವಾರ್ಡ್‌ ಕಾರ್ಯಕ್ರಮ ನಡೆದಿತ್ತು. ಇದೀಗ ಮೂರು ವರ್ಷಗಳ ಬಳಿಕ ಫಿಲ್ಮ್ ಫೇರ್ ನಡೆಯಲಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಬೃಹತ್ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮವನ್ನು ಸಾಮಾನ್ಯ ಜನರೂ ಸಹ ವೀಕ್ಷಿಸಬಹುದಾಗಿದೆ. ಬುಕ್‌ ಮೈ ಶೋ ಅಪ್ಲಿಕೇಶನ್‌ನಲ್ಲಿ ಈಗಾಗಲೇ ಮುಂಗಡ ಬುಕಿಂಗ್ ಆರಂಭಗೊಂಡಿದೆ.

ಇದನ್ನೂ ಓದಿ | SIIMA 2022 | ತಮಿಳು-ಮಲಯಾಳಂ ಸೈಮಾ ಪ್ರಶಸ್ತಿಗಳ ಅನಾವರಣ: ಮಿಂಚಿದ ಶಿವಕಾರ್ತಿಕೇಯನ್‌, ಟೊವಿನೊ ಥಾಮಸ್‌!

Exit mobile version