Site icon Vistara News

Filmfare Awards 2023: ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ: 68ನೇ ಫಿಲ್ಮ್​ಫೇರ್ ಪ್ರಶಸ್ತಿಗಳ ವಿವರ ಇಲ್ಲಿದೆ

Filmfare Awards 2023 Full List Of Winners

ಬೆಂಗಳೂರು: ಏಪ್ರಿಲ್‌ 27ರಂದು 68ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ (Filmfare Awards 2023) ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಸಂಜಯ್ ಲೀಲಾ ಬನ್ಸಾಲಿಯವರ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಮತ್ತು ಹರ್ಷವರ್ಧನ್ ಕುಲಕರ್ಣಿ ಅವರ ಬಧಾಯಿ ದೋ (Badhaai Do) ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ಗಂಗೂಬಾಯಿ ಕಾಠಿಯಾವಾಡಿ’ಗೆ ಸಿಕ್ಕಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ನಟನೆಗೆ ಅತ್ಯುತ್ತಮ ನಟಿ ಅವಾರ್ಡ್​ ದೊರೆತಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂಜಯ್ ಲೀಲಾ ಬನ್ಸಾಲಿ ಪಾಲಾಗಿದೆ. ಬಧಾಯಿ ದೋ ಚಿತ್ರದ ಅಭಿನಯಕ್ಕಾಗಿ ರಾಜ್‌ಕುಮಾರ್ ರಾವ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

ಟಬು ಮತ್ತು ಭೂಮಿ ಪೆಡ್ನೇಕರ್ ಅವರು ಭೂಲ್ ಭುಲೈಯಾ 2 ಮತ್ತು ಬಧಾಯಿ ದೋಗಾಗಿ ಅತ್ಯುತ್ತಮ ನಟಿ ಕ್ರಿಟಕ್ಸ್‌ ಅವಾರ್ಡ್‌ ಪಡೆದರು. ಸಂಜಯ್ ಮಿಶ್ರಾ ಅವರು ʻವಧ್ʼ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಕ್ರಿಟಿಕ್ಸ್‌ ಅವಾರ್ಡ್‌ ಗೆದ್ದರು. ಹಿರಿಯ ನಟ ಪ್ರೇಮ್ ಚೋಪ್ರಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ 10 ಪ್ರಶಸ್ತಿಗಳು

ಫೆಬ್ರವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ 10 ಪ್ರಶಸ್ತಿಗಳು ಸಿಕ್ಕಿವೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ ಸಂಚಿತ್ ಬಲ್ಹಾರಾ, ಅಂಕಿತ್ ಬಲ್ಹಾರಾ​ಗೆ ‘ಅತ್ಯುತ್ತಮ ಹಿನ್ನೆಲೆ ಸಂಗೀತ’ ಪ್ರಶಸ್ತಿ ಸಿಕ್ಕಿದೆ. ಬೆಸ್ಟ್ ಪ್ರೊಡಕ್ಷನ್ ಡಿಸೈನ್(ಸುಬ್ರತಾ, ಅಮಿತ್​), ಅತ್ಯುತ್ತಮ ವಸ್ತ್ರವಿನ್ಯಾಸ (ಶೀಥಲ್ ಇಕ್ಬಾಲ್ ಶರ್ಮಾ), ಅತ್ಯುತ್ತಮ ಕೊರಿಯೋಗ್ರಫಿ (ಕೃತಿ ಮಹೇಶ್), ಅತ್ಯುತ್ತಮ ಸಿನಿಮಾಟೊಗ್ರಫಿ (ಸುದೀಪ್ ಚಟರ್ಜಿ), ಅಪ್​ಕಮಿಂಗ್ ಮ್ಯೂಸಿಕ್ ಟ್ಯಾಲೆಂಟ್​ (ಗಾಯಕಿ ಶ್ರೀಮಂಕರ್​) ಅವಾರ್ಡ್ ಕೂಡ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಸಿಕ್ಕಿದೆ.

ಇದನ್ನೂ ಓದಿ: Filmfare Awards 2022 | ಈ ಬಾರಿ ಫಿಲ್ಮ್‌ಫೇರ್‌ ಅವಾರ್ಡ್‌ ಬೆಂಗಳೂರಿನಲ್ಲಿ: ಅಡ್ವಾನ್ಸ್‌ ಬುಕ್ಕಿಂಗ್‌ ಓಪನ್‌!

68ನೇ ಫಿಲ್ಮ್​ಫೇರ್ ಪ್ರಶಸ್ತಿ ಗೆದ್ದವರ ಪಟ್ಟಿ

Exit mobile version