ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೋಟ್ಯಂತರ ಫ್ಯಾನ್ ಹೊಂದಿರುವ ನಟಿ. ಮೋಹಕ ನಗು, ಸೌಂದರ್ಯ, ನಟನೆ ಮೂಲಕ ಪರದೆ ಮೇಲೆ ಛಾಪು ಮೂಡಿಸಿರುವ ಇವರ ಕೆರಿಯರ್ ಗ್ರಾಫ್ ಏರುತ್ತಲೇ ಇದೆ. ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ , ʼಪುಷ್ಪʼ ರಿಲೀಸ್ ಆದ ಬಳಿಕ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.
ಈಗಾಗಲೇ ಬಾಲಿವುಡ್‌ಗೂ ಎಂಟ್ರಿ ಕೊಟ್ಟ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ , ದೇಶಾದ್ಯಂತ ಗುರುತಿಸಿಕೊಂಡಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿಯೂ ಖ್ಯಾತಿ ಪಡೆದ ರಶ್ಮಿಕಾ ಹೊಸ ಸುದ್ದಿಯನ್ನು ಅಭಿಮಾನಿಗಳಿಗೆ ಆಗಾಗ ನೀಡುತ್ತಾ ಇರುತ್ತಾರೆ. ರಶ್ಮಿಕಾ ಮಂದಣ್ಣ ಇದೀಗ ಪ್ರತಿಷ್ಠಿತ ʼಫಿಲ್ಮ್ ಫೇರ್ʼ ಮ್ಯಾಗ್‌ಜಿನ್ ಅಲ್ಲಿ ಕವರ್ ಫೋಟೋದಲ್ಲಿ ಮಿಂಚಿದ್ದಾರೆ ಎಂದರೆ ನೀವು ನಂಬಲೇ ಬೇಕು. ‘ರೈಸ್ ಆ್ಯಂಡ್ ರೈಸ್ ಆಫ್ ರಶ್ಮಿಕಾ ಮಂದಣ್ಣ ‘ ಎಂಬ ಶೀರ್ಷಿಕೆಯೇ ಆಕರ್ಷಕವಾಗಿದೆ. ʼಪುಷ್ಪಾ ದಿ ರೈಸಿಂಗ್ʼ ಎಂಬ ಶೀರ್ಷಿಕೆಯನ್ನೇ ಮುಂದುವರಿಸಿ ‘ರೈಸ್ ಆ್ಯಂಡ್ ರೈಸ್ ಆಫ್ ರಶ್ಮಿಕಾ ಮಂದಣ್ಣ ‘ ಎಂದು ಹೇಳಲಾಗಿದೆ.
ಇದನ್ನೂ ಓದಿ | ರಶ್ಮಿಕಾ ಹಾದಿಯಲ್ಲಿ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ; ಸಂಭಾವನೆ ಮೊತ್ತದಲ್ಲಿ ಭರ್ಜರಿ ಏರಿಕೆ !
ಸಕತ್ ಹಾಟ್ ಲುಕ್‌ನಲ್ಲಿ, ಫ್ರೀ ಹೇರ್ ನೊಂದಿಗೆ ಆರೆಂಜ್ ಟಾಪ್ ಮತ್ತು ವೈಟ್ ಪ್ಯಾಂಟ್ ಮೂಲಕ ಕಾಣಿಸಿಕೊಂಡಿದ್ದಾರೆ. ʼಫಿಲ್ಮ್‌ಫೇರ್ʼ ಪೇಜಿನಲ್ಲಿ ಪೋಸ್ಟ್ ಹಾಕಿ ʼಅಭಿಮಾನಿಗಳಿಂದ ಪ್ರೀತಿಯಿಂದ ‘ಕ್ರಶ್ಮಿಕಾ ಎಂದು ಕರೆಯಲ್ಪಡುವ #ರಶ್ಮಿಕಾಮಂದಣ್ಣ ಅವರು ಭಾರತದ ಅನೇಕ ಚಲನಚಿತ್ರೋದ್ಯಮಗಳಲ್ಲಿ ಟಾಪ್ ನಟಿಯಾಗಿ ದೃಢವಾಗಿ ಗುರುತಿಸಿಕೊಂಡವರು. ನಮ್ಮ ಜೂನ್ ಡಿಜಿಟಲ್ ಕವರ್‌ನಲ್ಲಿ ದಿವಾ ಪ್ರಸುತ್ತಪಡಿಸುತ್ತಿದ್ದೇವೆʼ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ
ಕಳೆದೆರಡು ವಾರಗಳಿಂದ ರಶ್ಮಿಕಾ ಮಂದಣ್ಣ ತಮ್ಮ ಸ್ಟೈಲಿಶ್ ಬಟ್ಟೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕರಣ್ ಜೋಹರ್ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಅವರ ಬಟ್ಟೆಯನ್ನು ಅಭಿಮಾನಿಗಳು ತುಂಬಾ ಇಷ್ಟ ಪಟ್ಟಿದ್ದರು.
ಹೆಚ್ಚಾಗಿ ಕ್ಲಾಸಿ ಬಟ್ಟೆಗಳನ್ನೇ ಧರಿಸುವ ರಶ್ಮಿಕಾ, ಫಿಲ್ಮ್‌ಫೇರ್ ಮ್ಯಾಗ್‌ಜಿನ್‌ನಲ್ಲೂ ಕ್ಲಾಸಿ ಲುಕ್‌ನೊಂದಿಗೆ ಪೋಸ್ ನೀಡಿದ್ದಾರೆ. ಇನ್ನೂ ವಿಶೇಷತೆ ಎಂದರೆ ಹೆಚ್ಚಾಗಿ ಆಭರಣ( Accessories) ತೊಡದೇ ಕೇವಲ ರಿಂಗ್ ತೊಡುವುದರ ಮೂಲಕ ಸಿಂಪಲ್ ಬ್ಯೂಟಿ ಎಂತಲೂ ಜನರು ಕಮೆಂಟ್ ಮೂಲಕ ವ್ಯಕ್ತ ಪಡಿಸುತ್ತಿದ್ದಾರೆ.
ತಮ್ಮ ಇನ್‌ಸ್ಟಾ ಪೋಸ್ಟ್ ಮೂಲಕ “You can’t see it but I was really nervous about this one” ಎಂದು ಫಿಲ್ಮ್ ಫೇರ್ ಮ್ಯಾಗಜಿನ್ ಪೋಸ್ಟ್‌ಅನ್ನು ಇನ್ಸ್ಟಾ ಮೂಲಕ ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಮಿತಾಬ್ ಜೊತೆ ಸಹ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಣಬೀರ್ ಕಪೂರ್ ನಟನೆಯ ಅನಿಮಲ್ ಚಿತ್ರಕ್ಕೆ ನಟಿಯಾಗಿ ಆಯ್ಕೆಯಾಗಿದ್ದಾರೆ.
ಮೊನ್ನೆಯಷ್ಟೇ ರಶ್ಮಿಕಾ ಹೊಸ ಫೋಟೋಗಳನ್ನು ಹಾಕಿದ್ದು, ಬ್ಲಾಕ್ ಡ್ರೆಸ್ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ಉದ್ದನೆಯ ಬ್ಲಾಕ್ ಡ್ರೆಸ್ನಲ್ಲಿ ರಶ್ಮಿಕಾ ಅವರನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನೂ ಓದಿ | ಶೋ ಮ್ಯಾನ್ ಪ್ರಶಾಂತ್ ನೀಲ್ Birthday: ಪ್ಯಾನ್ ಇಂಡಿಯಾ ಸ್ಟಾರ್‌ಗಳ ಸಮಾಗಮ