ಬೆಂಗಳೂರು: ಚೆಕ್ ಬೌನ್ಸ್ (Rajkumar Santoshi) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಜಾಮ್‌ನಗರದ ನ್ಯಾಯಾಲಯ ಜನಪ್ರಿಯ ಚಿತ್ರ ನಿರ್ದೇಶಕ ರಾಜ್‌ಕುಮಾರ್ ಸಂತೋಷಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 2 ಕೋಟಿ ರೂ. ದಂಡವನ್ನು ಶನಿವಾರ (ಫೆ.17) ವಿಧಿಸಿದೆ.
ʻಘಾಯಲ್ʼ, ʻಘಟಕ್ʼ, ʻದಾಮಿನಿʼ ಮತ್ತು ಐಕಾನಿಕ್ ಕಾಮಿಡಿ ʻಅಂದಾಜ್ ಅಪ್ನಾ ಅಪ್ನಾ; ಸೇರಿದಂತೆ ಕೆಲವು ಬ್ಲಾಕ್‌ಬಸ್ಟರ್ ಬಾಲಿವುಡ್ ಚಲನಚಿತ್ರಗಳನ್ನು ಸಂತೋಷಿ ನಿರ್ದೇಶಿಸಿದ್ದಾರೆ. ಇದೀಗ ಚೆಕ್ ಬೌಬ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಜ್‌ಕುಮಾರ್ ಅವರಿಗೆ ಹಿರಿಯ ಸಿವಿಲ್ ನ್ಯಾಯಾಧೀಶ ವಿಜೆ ಗಧ್ವಿ ಅವರು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದ್ದಾರೆ. ಅಶೋಕ್ ಲಾಲ್ ಎಂಬ ಕೈಗಾರಿಕೋದ್ಯಮಿ ಈ ಬಗ್ಗೆ ಕೇಸ್ ದಾಖಲಿಸಿದ್ದರು.
ಆಗಿದ್ದೇನು?
ರಾಜ್‌ಕುಮಾರ್ ಸಂತೋಷಿ ವಿರುದ್ಧ ಪ್ರಮುಖ ಕೈಗಾರಿಕೋದ್ಯಮಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಪ್ರಮುಖ ಕೈಗಾರಿಕೋದ್ಯಮಿ ಮತ್ತು ಶಿಪ್ಪಿಂಗ್ ಕಂಪನಿಯ ಮಾಲೀಕರಾಗಿರುವ ವ್ಯಕ್ತಿಗೆ ರಾಜ್‌ಕುಮಾರ್ ಸಂತೋಷಿ 10 ಲಕ್ಷ ರೂಪಾಯಿ ಮೌಲ್ಯದ 10 ಚೆಕ್‌ಗಳನ್ನು ನೀಡಿದ್ದರು. ಆದರೆ, ಎಲ್ಲಾ ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಕಾನೂನು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.ಒಟ್ಟಾರೆಯಾಗಿ 1 ಕೋಟಿ ರೂಪಾಯಿಯ ಪ್ರಕರಣದಲ್ಲಿ ರಾಜ್‌ಕುಮಾರ್ ಸಂತೋಷಿಗೆ ಶಿಕ್ಷೆಯಾಗಿದೆ ಎಂದು ಉದ್ಯಮಿ ಪರ ವಕೀಲ ಪೀಯುಷ್ ಭೋಜಾನ ಶನಿವಾರ ತಿಳಿಸಿದ್ದಾರೆ. ಚಿತ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್‌ಕುಮಾರ್ ಸಂತೋಷಿಗೆ ಅಶೋಕ್ ಲಾಲ್ 1 ಕೋಟಿ ರೂಪಾಯಿ ನೀಡಿದ್ದರು.ಆದರೆ, ಈ ಹಣವನ್ನು ಅವರಿಗೆ ತೀರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ 10 ಲಕ್ಷ ರೂಪಾಯಿಯ ತಲಾ 10 ಚೆಕ್‌ಅನ್ನು ಅಶೋಕ್ ಲಾಲ್‌ಗೆ ನೀಡಿದ್ದರು. ನಿಗದಿತ ಸಮಯಕ್ಕೆ ಈ ಚೆಕ್‌ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿದಾಗ ಎಲ್ಲಾ ಚೆಕ್‌ಗಳೂ ಬೌನ್ಸ್ ಆಗಿದೆ ಎಂದು ಉದ್ಯಮಿ ತಿಳಿಸಿದ್ದಾರೆ.
ರಾಜ್‌ಕುಮಾರ್ ಸಂತೋಷಿ ಪ್ರಸ್ತುತ ʻಲಾಹೋರ್ 1947ʼ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆಮೀರ್ ಖಾನ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೇ ಮೊದಲ ಬಾರಿಗೆ ಸನ್ನಿ ಡಿಯೋಲ್, ರಾಜ್‌ಕುಮಾರ್ ಸಂತೋಷಿ ಹಾಗೂ ಆಮೀರ್ ಖಾನ್ ಸಿನಿಮಾಕ್ಕಾಗಿ ಜತೆಯಾಗಿದ್ದಾರೆ.