ಮುಂಬಯಿ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರ ಮೇಲೆ ಆಸ್ತಿ ವಂಚನೆ ಪ್ರಕರಣದ ಎಫ್‌ಐಆರ್ ದಾಖಲಾಗಿದೆ.
ಮುಂಬಯಿಯ ನಿವಾಸಿ ಜಸ್ವಂತ್ ಶಾ ಎಂಬವರು ದೂರು ದಾಖಲಿಸಿದ್ದಾರೆ. ಗೌರಿ ಖಾನ್ ಅವರು ಬ್ರಾಂಡ್ ಅಂಬಾಸಿಡರ್ ಆಗಿರುವ ಕಂಪನಿ 86 ಲಕ್ಷ ರೂಪಾಯಿಗಳನ್ನು ತನ್ನಿಂದ ಪಡೆದುಕೊಂಡು ಅಪಾರ್ಟ್‌ಮೆಂಟ್ ನೀಡದೆ ವಂಚಿಸಿದೆ ಎಂದು ಅವರು ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 409ರಡಿ ದೂರು ದಾಖಲಿಸಲಾಗಿದೆ.
ತನಗೆ ಸೇರಬೇಕಿದ್ದ ಲಖನೌದ ಸುಶಾಂತ್ ಗಾಲ್ಫ್ ಸಿಟಿಯ ತುಲಸಿಯಾನಿ ಗಾಲ್ಫ್ ವ್ಯೂ ಕಟ್ಟಡದ ಫ್ಲ್ಯಾಟ್ ಅನ್ಯರಿಗೆ ನೀಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಗೌರಿ ಅವರ ಜತೆಗೆ ತಲಸಿಯಾನಿ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮಾಲಿಕರ ಮೇಲೂ ದೂರು ದಾಖಲಿಸಿದ್ದಾರೆ. ತಾನು ಗೌರಿ ಖಾನ್ ಅವರ ಪ್ರಭಾವದಿಂದ ಈ ಫ್ಲ್ಯಾಟ್ ಖರೀದಿಸಿದ್ದಾಗಿ ಅವರು ಹೇಳಿದ್ದಾರೆ.
ಗೌರಿ ಖಾನ್ ಅವರು ಚಿತ್ರ ನಿರ್ಮಾಪಕಿ, ಇಂಟೀರಿಯರ್ ಡಿಸೈನರ್ ಕೂಡ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಕಂಡ ಶಾರುಖ್ ಖಾನ್ ನಟನೆಯ ʼಪಠಾಣ್ʼ ಗಳಿಕೆಯಲ್ಲಿ ದಾಖಲೆ ಬರೆದಿದೆ.
ಇದನ್ನೂ ಓದಿ: Shahrukh Khan: ಟಾಪ್ 10 ಶಾರುಖ್ ಖಾನ್ ಹಿಟ್ ಸಿನಿಮಾ, ಗಳಿಕೆ ಎಷ್ಟು?