Site icon Vistara News

Upcoming Movies: ಕನ್ನಡದಲ್ಲಿ ಈ ವಾರ 5 ಸಿನಿಮಾ ಬಿಡುಗಡೆ; ತಾರೆಗಳ ನಡುವೆ ಭರ್ಜರಿ ಪೈಪೋಟಿ!

bad manners, sugar afctory

ಬೆಂಗಳೂರು: ಈ ಶುಕ್ರವಾರ ಕನ್ನಡದಲ್ಲಿ ಐದು ಸಿನಿಮಾಗಳು (Upcoming Movies) ರಿಲೀಸ್ ಆಗುತ್ತಿವೆ. ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಹೆಚ್ಚು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ – ರಚಿತಾ ರಾಮ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’, ರಾಜ್‌ ಬಿ. ಶೆಟ್ಟಿ ಸಾರಥ್ಯದ ‘ಸ್ವಾತಿಮುತ್ತಿನ ಮಳೆ ಹನಿಯೇ’ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಈ ಮೂರು ಸಿನಿಮಾಗಳ ಜೊತೆಗೆ ‘ಎಲೆಕ್ಟ್ರಾನಿಕ್ ಸಿಟಿ’ ಹಾಗೂ ‘ಸ್ಕೂಲ್ ಡೇಸ್’ ಎನ್ನುವ ಮತ್ತೆರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ.

ಬ್ಯಾಡ್ ಮ್ಯಾನರ್ಸ್

ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ (Abhishek Ambareesh) ಅಭಿನಯದ ʻಬ್ಯಾಡ್‌ ಮ್ಯಾನರ್ಸ್ʼ ನವೆಂಬರ್‌ 24ಕ್ಕೆ ಸಿನಿಮಾ ರಿಲೀಸ್‌ ಆಗುತ್ತಿದೆ.ದುನಿಯಾ ಸೂರಿ- ಹಾಗೂ ಅಭಿಷೇಕ್‌ ಕಾಂಬಿನೇಶನ್‌ ಈ ಸಿನಿಮಾ ನಿರೀಕ್ಷೆ ಹೆಚ್ಚಿದೆ. ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಅಭಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಮಿಂಚಿದ್ದಾರೆ. ರಚಿತಾ ರಾಮ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌, ಸಾಂಗ್ಸ್‌. ರಿಲೀಸ್‌ ಆಗಿ ಗಮನ ಸೆಳೆದಿದೆ. ‘ಪಾಪ್‌ಕಾರ್ನ್‌ ಮಂಕಿಟೈಗರ್‌’ ಬಳಿಕ ಸೂರಿ ಈ ಚಿತ್ರಕ್ಕೆ ಕೈಗೆತ್ತಿಕೊಂಡಿದ್ದರು. ಪೊಲೀಸ್‌ ಆಫೀಸರ್‌ ರುದ್ರ ಪಾತ್ರದಲ್ಲಿ ಅಭಿಷೇಕ್‌ ನಟಿಸಿದ್ದಾರೆ. ಈಗಾಗಲೇ ಸಿನಿಮಾಗೆ ಯು/ಎ ಸರ್ಟಿಫಿಕೇಟ್‌ ನೀಡಿದೆ. ಜಯಣ್ಣ ಕಂಬೈನ್ಸ್‌ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದೆ. ಬ್ಯಾಡ್ ಮ್ಯಾನರ್ಸ್‌ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದರು. ಸಿನಿಮಾಟೋಗ್ರಾಫರ್ ಶೇಖರ್ ಅದನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದರು.

ಇದನ್ನೂ ಓದಿ: Abhishek Ambareesh: ʻಬ್ಯಾಡ್‌ ಮ್ಯಾನರ್ಸ್‌ʼ ಸಿನಿಮಾ ಟ್ರೈಲರ್‌ಗೆ ʻಡಿ ಬಾಸ್‌ʼ ಸಾಥ್‌ !

ಶುಗರ್ ಫ್ಯಾಕ್ಟರಿ

ಆರಂಭದಿಂದಲೂ ಸಾಕಷ್ಟು (Kannada New Movie) ನಿರೀಕ್ಷೆ ಹುಟ್ಟಿಸಿರುವ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಹಾಗೂ ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ನವೆಂಬರ್ 24ರಂದು ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೈಲರ್‌ ಕೂಡ ಎಲ್ಲರ ಮನ ಗೆದ್ದಿದೆ.ಡಾರ್ಲಿಂಗ್ ಕೃಷ್ಣ ಈವರೆಗೂ ಅಭಿನಯಿಸಿರುವ ಎಲ್ಲ ಚಿತ್ರಗಳಿಗಿಂತ “ಶುಗರ್ ಫ್ಯಾಕ್ಟರಿ” ಅಪಾರವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ಎನ್ನಲಾಗುತ್ತಿದೆ. ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ‌.ಆರ್ ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು ಕೂಡ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.

ಎರಡು ನಿಮಿಷಗಳ ಟ್ರೈಲರ್‌ನಲ್ಲಿ ಸಖತ್‌ ಕಿಕ್‌ ಹಾಗೂ ಮನರಂಜನೆ ಕೋಡುವ ಸಂಭಾಷಣೆ ಇದೆ. ಡಾರ್ಲಿಂಗ್‌ ಕೃಷ್ಣ ಅವರ ನಾನ್ ಸ್ಟಾಪ್ ಡೈಲಾಗ್‌ ಎಂತವರನ್ನೂ ನಗಿಸುವಂತೆ ಮಾಡಿದೆ.

ʼಸ್ವಾತಿ ಮುತ್ತಿನ ಮಳೆ ಹನಿಯೇ’

ನಟ ರಾಜ್ ಬಿ ಶೆಟ್ಟಿ (Raj B Shetty) ಹಾಗೂ ಆರ್‌.ಜೆ. ಸಿರಿ ರವಿಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಅವರ ಆ್ಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬಂದ ಈ ಸಿನಿಮಾ, ನವೆಂಬರ್ 24ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.ʼಸ್ವಾತಿ ಮುತ್ತಿನ ಮಳೆ ಹನಿಯೇ’ ಸ್ಯಾಂಡಲ್‌ವುಡ್‌ ನಟಿ ರಮ್ಯಾ (Actress Ramya) ನಿರ್ಮಾಣದ ಚೊಚ್ಚಲ ಸಿನಿಮಾ ಆಗಿದ್ದು, ಇದನ್ನು ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದಾರೆ. ಬಾಲಾಜಿ ಮನೋಹರ್‌, ಸೂರ್ಯ ವಶಿಷ್ಟ, ರೇಖಾ ಕುಡ್ಲಿಗಿ, ಸ್ನೇಹಾ ಶರ್ಮಾ, ಜೆ.ಪಿ.ತುಮ್ಮಿನಾಡು, ಗೋಪಾಲಕೃಷ್ಣ ದೇಶ್‌ಪಾಂಡೆ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: Raj B Shetty: ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಟ್ರೇಲರ್ ರಿಲೀಸ್

ಒಂದು ಮೊಟ್ಟೆಯ ಕಥೆʼ, ʻಗರುಡ ಗಮನ ವೃಷಭ ವಾಹನʼ ಚಿತ್ರಗಳ ನಂತರ ರಾಜ್‌ ಬಿ. ಶೆಟ್ಟಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಆರಂಭದಲ್ಲಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ನಟನೆಯಿಂದ ಹಿಂದೆ ಸರಿದು ಕೇವಲ ನಿರ್ಮಾಪಕಿಯಾಗಿ ಮುಂದುವರಿದಿದ್ದರು. ಅವರ ಜಾಗಕ್ಕೆ ಸಿರಿ ರವಿಕುಮಾರ್‌ ಎಂಟ್ರಿಯಾಗಿತ್ತು.

ಎಲೆಕ್ಟ್ರಾನಿಕ್ ಸಿಟಿ

ಐಟಿ ಉದ್ಯೋಗಿಗಳ ಕಥೆಯನ್ನೇ ಇಟ್ಟುಕೊಂಡು ‘ಎಲೆಕ್ಟ್ರಾನಿಕ್​ ಸಿಟಿ’ ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾವನ್ನು ಆರ್. ಚಿಕ್ಕಣ್ಣ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ.ಈ ಸಿನಿಮಾದಲ್ಲಿ ಆರ್ಯನ್ ಶೆಟ್ಟಿ ಅವರು ಹೀರೋ ಆಗಿ ನಟಿಸಿದ್ದಾರೆ. ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ, ರಶ್ಮಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೌಂದರ್ ರಾಜ್ ಸಂಕಲನ ಹಾಗೂ ಹಂಪಿ ಸುಂದರ್ ಕಲಾ ನಿರ್ದೇಶನ ಮಾಡಿದ್ದಾರೆ.

ಸ್ಕೂಲ್ ಡೇಸ್

ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿಕೊಂಡು ಒಂದು ಕಮರ್ಷಿಯಲ್‌ ಚಿತ್ರವನ್ನು ತಮ್ಮ ಭಾಷೆಯ ಸೊಗಡಿನಲ್ಲಿ ಬೆಳ್ಳಿ ಪರದೆಯ ಮೇಲೆ ಇದೆ. 24ರಂದು ರಾಜ್ಯಾದ್ಯಂತ ರಾರಾಜಿಸಲಿದ್ದಾರೆ. ಇತ್ತೀಚಿಗಷ್ಟೆ ಉಮೇಶ್‌. ಎಸ್‌. ಹಿರೇಮಠ ನಿರ್ಮಾಣದಲ್ಲಿ ಸಂಜಯ್‌ ಹೆಚ್‌ ನಿರ್ದೇಶಿಸಿರುವ “ಸ್ಕೂಲ್‌. ಡೇಸ್‌” ಚಿತ್ರದ ಹಾಡು ಹಾಗೂ ಟ್ರೈಲರ್‌ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.

Exit mobile version