Site icon Vistara News

Flop Film: ಫ್ಲಾಪ್ ಎಂದು ಕರೆಸಿಕೊಂಡ ಈ ಚಿತ್ರದ 25 ಕೋಟಿ ಟಿಕೆಟ್ ಮಾರಾಟವಾಗಿದ್ದು ಹೇಗೆ; ಇಲ್ಲಿದೆ ರೋಚಕ ಸಿನಿ ಇತಿಹಾಸ

Flop Film

ಬೆಂಗಳೂರು: ಕಳೆದ ವರ್ಷ ‘ಜವಾನ್’ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಕೊನೆಯಲ್ಲಿ ಅದು 4 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು ಮತ್ತು ಇದನ್ನು ದೊಡ್ಡ ದಾಖಲೆ ಎಂಬಂತೆ ಎತ್ತಿ ತೋರಿಸಲಾಗಿತ್ತು. ಆದರೆ ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮತ್ತು ಟಿಕೆಟ್​ಗಳು ಮಾರಾಟವಾದ ಭಾರತೀಯ ಚಲನಚಿತ್ರವೊಂದು ಸಾರ್ವಕಾಲಿಕ ದಾಖಲೆ ಮಾಡಿದೆ. ಅಚ್ಚರಿ ಏನೆಂದರೆ ಈ ಸಿನಿಮಾ ಆರಂಭದಲ್ಲಿ ಇದು ಸೋತ ((Flop Film) ) ಸಿನಿಮಾ ಎಂಬ ವಿಮರ್ಶೆಯನ್ನು ಪಡೆದುಕೊಂಡಿತ್ತು. ಆದರೆ, ಬಳಿಕ ಆದದ್ದೇ ಬೇರೆ.

ಆ ಚಿತ್ರ ಯಾವುದೆಂದರೆ ರಮೇಶ್ ಸಿಪ್ಪಿ ಅವರ, ನಟ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅಭಿನಯದ ಜನಪ್ರಿಯ ‘ಶೋಲೆ’ ಚಿತ್ರ. ಇದನ್ನು ಇತರ ಭಾರತೀಯ ಚಿತ್ರಗಳಿಗಿಂತ ಹೆಚ್ಚು ಜನರು ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರಂತೆ. ಗಲ್ಲಾ ಪೆಟ್ಟಿಗೆ ಸಂಗ್ರಾಹಕರ ಪ್ರಕಾರ, ಶೋಲೆ ಚಿತ್ರ 1975-80ರ ಆರಂಭದಲ್ಲಿ ಭಾರತದಲ್ಲಿ ಮಾತ್ರ 18 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿತು. ಹಾಗೇ ಈ ಚಿತ್ರ 60 ಚಿತ್ರಮಂದಿರಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತ್ತು ಮತ್ತು ಬೆಳ್ಳಿ ಹಬ್ಬವನ್ನು ಆಚರಿಸಿತ್ತು. ಅಲ್ಲದೇ ಈ ಚಿತ್ರ ಬಾಂಬೆಯ ಮಿನರ್ವ ಥಿಯೇಟರ್ ನಲ್ಲಿ ಐದು ವರ್ಷಗಳ ಕಾಲ ಓಡಿದ್ದು, ಅಂದಿನ ದಾಖಲೆ. ಒಟ್ಟಾರೆ ಈ ಚಿತ್ರ ಅಂದಾಜು 2 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಹಾಗೇ ಈ ಚಿತ್ರ ಸೋವಿಯತ್ ರಷ್ಯಾದಲ್ಲಿ ಬಿಡುಗಡೆಯಾಗಿ ಅಲ್ಲಿ 48 ಮಿಲಿಯನ್ (4.8 ಕೋಟಿ) ಗಳಿಕೆ ಮಾಡಿದೆ. ಒಟ್ಟಾರೆ ಸುಮಾರು 25 ಕೋಟಿಯಷ್ಟು ಟಿಕೆಟ್​ ಸೇಲಾಗಿದೆ.

ಕೊನೆಯಲ್ಲಿ ಇದು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಹಾಗೂ ಭಾರತದಲ್ಲಿ ಅತ್ಯಂತ ಯಶಸ್ಸು ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 30ಕೋಟಿ ಗಳಿಸಿತ್ತು. ಆ ಮೂಲಕ ಅದು ಮುಘಲ್-ಎ-ಆಜಮ್ ಮತ್ತು ಮದರ್ ಇಂಡಿಯಾದ ದಾಖಲೆಯನ್ನು ಮುರಿದಿದೆ.

ಆದರೆ ಈ ಚಿತ್ರ ಮೊದಲು ಹಿಟ್ ಆಗಲಿಲ್ಲ, ಸ್ವಾತಂತ್ರ್ಯ ದಿನಾಚರಣೆಯ ಮೊದಲು ಬಿಡುಗಡೆಯಾದ ಈ ಚಿತ್ರ ನಂತರ ಕೆಟ್ಟ ವಿಮರ್ಶೆಗಳು ಮತ್ತು ಟೀಕೆಗಳಿಗೆ ಒಳಗಾಗಿತ್ತು. ಹಾಗಾಗಿ ಮೊದಲ ಎರಡು ವಾರಗಳಲ್ಲಿ ಈ ಚಿತ್ರತಂಡದವರೇ ಅದನ್ನು ಫ್ಲಾಪ್ ಎಂದು ಲೇಬಲ್ ನೀಡಿದ್ದಾರೆ. ಹಾಗಾಗಿ ತಯಾರಕರು ಅದರ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಲು ಹೇಳಿದ್ದರು. ಆದರೆ ಕೊನೆಯಲ್ಲಿ ಹಿಟ್ ಚಿತ್ರವಾಗಿ ಹೊರಮೊಮ್ಮಿತ್ತು., ದಾಖಲೆಯನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

ಕಳೆದ ವರ್ಷಗಳಲ್ಲಿ ಹಲವಾರು ಭಾರತೀಯ ಚಲನಚಿತ್ರಗಳು ವಿಶ್ವದಾದ್ಯಂತ 1000 ಕೋಟಿ ಗಳಿಕೆಯನ್ನು ಪಡೆದುಕೊಂಡಿವೆ. ಬಾಹುಬಲಿ ಚಿತ್ರ ಜಾಗತಿಕ ಮಟ್ಟದಲ್ಲಿ 15-20 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು. ಆರ್ ಆರ್ ಆರ್ ಮತ್ತು ಕೆಜಿಎಫ್ 2 10 ಕೋಟಿ ಗಿಂತ ಕಡಿಮೆ ಪ್ರೇಕ್ಷಕರನ್ನು ಗಳಿಸಿದೆ. ದಂಗಲ್ ಚಿತ್ರ ಕೂಡ 10 ಕೋಟಿ ಪ್ರೇಕ್ಷಕರನ್ನು ಗಳಿಸಿದೆ. ಆದರೂ ಅವುಗಳು ಶೋಲೆಯ ಮಟ್ಟಕ್ಕೆ ಬಂದು ನಿಲ್ಲಲಿಲ್ಲ. ಎನ್ನಲಾಗಿದೆ.

Exit mobile version