ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬಳಿಕ ಕನ್ನಡ ಚಿತ್ರರಂಗದಲ್ಲಿ ಹುಲಿ ಉಗುರಿನ ಪೆಂಡೆಂಟ್ ಸದ್ದು ಮಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಟರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ದರ್ಶನ್, ಜಗ್ಗೇಶ್, ನಿಖಿಲ್, ರಾಕ್ ಲೈನ್ ವೆಂಕಟೇಶ್ ಅವರಿಗೆ ಅರಣ್ಯಾಧಿಕಾರಿಗಳು ನೊಟೀಸ್ ನೀಡಿದ್ದಾರೆ. ಈಗಾಗಲೇ ಅಧಿಕಾರಿಗಳು ದರ್ಶನ್ (Darshan Thoogudeepa) ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದು, 8 ರಿಂದ 10 ಹುಲಿ ಉಗುರಿನ ಮಾದರಿ ಪೆಂಡೆಂಟ್‌ಗಳು ,ಹಸುವಿನ ಕೊಂಬಿನ ಪೆಂಡೆಂಟ್‌ಗಳು ಪ್ರತ್ಯಕ್ಷವಾಗಿದೆ ಎನ್ನಲಾಗುತ್ತಿದೆ.
ದರ್ಶನ್ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದು, ಊಹಿಸಲು ಸಾಧ್ಯವಾಗದಷ್ಟು ಹುಲಿ ಉಗುರುಗಳು ಸಿಕ್ಕಿವೆ ಎನ್ನಲಾಗಿದೆ. ಮನೆಯ ಸರ್ಚ್ಗೆ ಬಂದ ವೇಳೆ ಅಧಿಕಾರಿಗಳಿಗೆ ದರ್ಶನ್ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಬಂದ ತಕ್ಷಣ ಮನೆ ಬಾಗಿಲು ಓಪನ್ ಮಾಡಿ ಅವರನ್ನು ಸ್ವಾಗತಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಒಂದಲ್ಲ ಎರಡಲ್ಲ 8 ರಿಂದ 10 ಹುಲಿ ಉಗುರಿನ ಮಾದರಿ ಪೆಂಡೆಂಟ್‌ಗಳು. ಆದರೆ ಅವೆಲ್ಲ ಒರಿಜಿನಲ್ ಅಲ್ಲ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಅಧಿಕಾರಿಗಳಿಗೆ ಹೇಳಿರುವ ಪ್ರಕಾರ ಶೂಟಿಂಗ್‌ಗಾಗಿ ಲಾಕೆಟ್‌ಗಳನ್ನು ಬಳಸುತ್ತೇವೆ ಎಂದಿದ್ದರಂತೆ. ಅದೇ ರೀತಿ ನನ್ನ ಬಳಿ ಇರುವ ಲಾಕೆಟ್‌ಗಳಿವು ಎಂದು ತೋರಿಸಿದ್ದಾರೆ.
ಇದನ್ನೂ ಓದಿ: Tiger Nail: ಹುಲಿ ಉಗುರು ಡಾಲರ್ ಹಾಕಿದ್ದ ಪ್ರಸಿದ್ಧ ದೇವಾಲಯದ ಇಬ್ಬರು ಅರ್ಚಕರು ವಶಕ್ಕೆ
ದರ್ಶನ್ ಮನೆಯಲ್ಲಿ ಹಸುವಿನ ಕೊಂಬಿನ ಪೆಂಡೆಂಟ್‌ಗಳು ಪ್ರತ್ಯಕ್ಷವಾಗಿದೆ ಎನ್ನಲಾಗುತ್ತಿದೆ. ಅಧಿಕಾರಿಗಳಿಗೆ ಸಿಕ್ಕಿರುವ ಪೆಂಡೆಂಟ್‌ಗಳು ನಕಲಿಯಾ ಎನ್ನುವ ಅನುಮಾನ ಶುರುವಾಗಿದೆ. ಅಸಲಿಯೋ, ನಕಲಿಯೋ ಎನ್ನುವುದು ತನಿಖೆ ನಂತರ ಗೊತ್ತಾಗಲಿದೆ. ದರ್ಶನ್ ಮನೆಯಲ್ಲಿ ಸಿಕ್ಕಿರುವ ಪೆಂಡೆಂಟ್‌ಗಳು ಹಸುವಿನ ಕೊಂಬಿನಿಂದ ಮಾಡಿದ್ದಾರೆ. ಇಂತಹದ್ದೊಂದು ಸುದ್ದಿ ದರ್ಶನ್ ಆಪ್ತ ವಲಯದಲ್ಲಿ ಹಾಗೂ ಅಧಿಕಾರಿಗಳ ಮೂಲಗಳಿಂದ ರಿವೀಲ್ ಆಗಿದೆ. ನೊಟೀಸ್‌ಗೆ ಉತ್ತರ ಕೊಡುವ ವೇಳೆ ದರ್ಶನ್ ಯಾವ ರೀತಿ ಸ್ಪಷ್ಟನೆ ಕೊಡುತ್ತಾರೆ ಎಂಬುದು ನೋಡಬೇಕಿದೆ. ಇಂದು ಮೈಸೂರಿಗೆ ದರ್ಶನ್ ಶೂಟಿಂಗ್‌ಗೆಂದು ತೆರಳಿದ್ದಾರೆ.
ಇನ್ನೊಂದೆಡೆ ಸ್ಟಾರ್‌ಗಳ ವಿರುದ್ಧ ಪರಿಸರವಾದಿಗಳು, ಹೋರಾಟಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ಮಲ್ಲೇಶ್ವರದ ಅರಣ್ಯ ಭವನದ ಮುಂದೆ ವನ್ಯಜೀವಿ ರಕ್ಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.