ಬೆಂಗಳೂರು: ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಾಜಿ ಮಿಸ್ ಇಂಡಿಯಾ ತ್ರಿಪುರಾದ ರಿಂಕಿ ಚಕ್ಮಾ (Rinky Chakma) ನಿಧನರಾಗಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿತ್ತು. ಫೆಮಿನಾ ಮಿಸ್ ಇಂಡಿಯಾ ಸೋಶಿಯಲ್ ಮೀಡಿಯಾದಲ್ಲಿ ಚಕ್ಮಾ ಅವರ ನಿಧನದ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಫೆಮಿನಾ ಮಿಸ್ ಇಂಡಿಯಾ ಪೋಸ್ಟ್‌ನಲ್ಲಿ ʻʻಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಸಂತಾಪಗಳು. ರಿಂಕಿ ಚಕ್ಮಾ ಆತ್ಮಕ್ಕೆ ಶಾಂತಿ ಸಿಗಲಿʼʼ ಎಂದು ಬರೆದುಕೊಂಡಿದೆ.
ಕಳೆದ ತಿಂಗಳು, ರಿಂಕಿ ಚಕ್ಮಾ ಅವರು ಕ್ಯಾನ್ಸರ್ ಜರ್ನಿ ಬಗ್ಗೆ ಸುದೀರ್ಘವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ʻʻನಾನು ನನ್ನ ಆರೋಗ್ಯದ ಬಗ್ಗೆ ಎಲ್ಲರಿಗೂ ಹೇಳುವ ಸಮಯ ಬಂದಿದೆ. ಫೈಲೋಡ್ಸ್ ಟ್ಯೂಮರ್ (ಸ್ತನ ಕ್ಯಾನ್ಸರ್) ಕ್ಯಾನ್ಸರ್ (phyllodes tumour (breast cancer) ನನಗೆ ಇದೆʼʼ ಎಂದು ಹೇಳಿಕೊಂಡಿದ್ದರು. “ನನ್ನ ಮೆದುಳಿನ ಶಸ್ತ್ರಚಿಕಿತ್ಸೆಯು ಇನ್ನೂ ಬಾಕಿಯಿದೆ. ಏಕೆಂದರೆ ಅದು ಈಗಾಗಲೇ ನನ್ನ ಶ್ವಾಸಕೋಶದವರೆಗೆ ನನ್ನ ದೇಹದ ಬಲಭಾಗವನ್ನು ವ್ಯಾಪಕವಾಗಿ ಹರಡಿದೆ. ಕೇವಲ 30% ಭರವಸೆಯೊಂದಿಗೆ ಮೊದಲು ಕೀಮೋಥೆರಪಿಯೊಂದಿಗೆ ಗುಣಮುಖರಾಗಿದ್ದರೆ ಮಾತ್ರ ಇದು ಸಾಧ್ಯ” ಎಂದು ಅವರು ಈ ಮುಂಚೆ ಬಹಿರಂಗಪಡಿಸಿದ್ದರು.
ಇದನ್ನೂ ಓದಿ: Gold Rate Today: 22 ಕ್ಯಾರಟ್, 24 ಕ್ಯಾರಟ್ ಬಂಗಾರದ ಧಾರಣೆ ಏರಿಕೆ, ಇಂದು ಹೀಗಿದೆ
ಮಾರಣಾಂತಿಕ ಫಿಲೋಡ್ಸ್ ಟ್ಯೂಮರ್ ಸ್ತನದ ಅಪರೂಪದ ಗೆಡ್ಡೆಯಾಗಿದ್ದು, ಸಾಮಾನ್ಯವಾಗಿ 35ರಿಂದ 55 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಇದು ಪರಿಣಾಮ ಬೀರುತ್ತದೆ. ಇತ್ತೀಚೆಗೆ ಚಕ್ಮಾ ಅವರ ಆಪ್ತ ಸ್ನೇಹಿತೆ ಮತ್ತು ಮಿಸ್ ಇಂಡಿಯಾ 2017ರ ರನ್ನರ್ ಅಪ್ ಪ್ರಿಯಾಂಕಾ ಕುಮಾರಿ ಅವರ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ತಮ್ಮ ವೈದ್ಯಕೀಯ ವರದಿಯನ್ನು ಹಂಚಿಕೊಂಡಿದ್ದರು. ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ‘ಬ್ಯೂಟಿ ವಿತ್ ಎ ಪರ್ಪಸ್’ ಪ್ರಶಸ್ತಿಯನ್ನು ಗೆದ್ದಿದ್ದರು.