ವಾಷಿಂಗ್ಟನ್: ಅಮೆರಿಕದ ಜನಪ್ರಿಯ ಟೆಲಿವಿಷನ್ ಸೀರಿಸ್ ‘ಫ್ರೆಂಡ್ಸ್’ (Friends) ಮೂಲಕ ಭಾರಿ ಪ್ರಸಿದ್ಧಿ ಪಡೆದಿದ್ದ ನಟ ಮ್ಯಾಥ್ಯು ಪೆರ್ರಿ (Matthew Perry) ಅಕ್ಟೋಬರ್ 28ರಂದು ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. 1994 ರಿಂದ 2004ರವರೆಗೆ 10 ಸೀಸನ್‌ಗಳಲ್ಲಿ ಪ್ರಸಾರವಾದ “ಫ್ರೆಂಡ್ಸ್” ನಲ್ಲಿ ಚಾಂಡ್ಲರ್ ಬೇಂಗ್ ಪಾತ್ರ ಬಹಳ ಜನಪ್ರಿಯತೆ ಗಳಿಸಿತ್ತು. ಲಾಸ್ ಏಂಜಲೀಸ್ನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಹಾಟ್ ಟಬ್ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರು ಮತ್ತೆ ಏಳಲೇ ಇಲ್ಲ ಎಂದು ವರದಿಯಾಗಿದೆ.
ಹಾಟ್ ಟಬ್ನಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ‘ಫೂಲ್ಸ್ ರಶ್ ಇನ್’, ‘ದಿ ಹೋಲ್ ನೈನ್ ಯಾರ್ಡ್ಸ್’ ಸೇರಿದಂತೆ ಒಂದಷ್ಟು ಹಾಲಿವುಡ್ (Hollywood) ಸಿನಿಮಾಗಳಲ್ಲಿ ಮ್ಯಾಥ್ಯು ಪೆರ್ರಿ ಅವರು ಅಭಿನಯಿಸಿ ಫೇಮಸ್ ಆಗಿದ್ದರು. ಲಾಸ್ ಏಂಜಲೀಸ್ನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಹಾಟ್ ಟಬ್ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿರಬಹುದು ಎಂದು ಹೇಳಲಾಗುತ್ತಿದೆ. ಮದ್ಯ ವ್ಯಸನದೊಂದಿಗೆ ವರ್ಷಗಳ ಕಾಲ ಹೋರಾಡಿದರು ಮತ್ತು ಅನೇಕ ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂತಲೂ ವರದಿಯಾಗಿದೆ.
ಬಾಲ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, “ಚಾರ್ಲ್ಸ್ ಇನ್ ಚಾರ್ಜ್” ಮತ್ತು “ಬೆವರ್ಲಿ ಹಿಲ್ಸ್ 90210” ನಲ್ಲಿ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದರು. ಅದೇ ಸಮಯದಲ್ಲಿ 1980ರ ದಶಕದಲ್ಲಿ “ಎ ನೈಟ್ ಇನ್ ದಿ ಲೈಫ್ ಆಫ್ ಜಿಮ್ಮಿ ರಿಯರ್ಡನ್” ಚಲನಚಿತ್ರದಲ್ಲಿ ರಿವರ್ ಫೀನಿಕ್ಸ್ ಜತೆಗೆ ಸಹ-ನಟಿಸಿದರು.
ಇದನ್ನೂ ಓದಿ: ಉಗ್ರರ ನಿರ್ನಾಮದ ಹೊರತು ಕದನ ವಿರಾಮ ಇಲ್ಲ ಎಂದ ಇಸ್ರೇಲ್; 2ನೇ ಹಂತದ ದಾಳಿ ಶುರು
rest in peace Matthew Perry you will always be remembered pic.twitter.com/EcwOgWkmm7
— Sethy⁷ (@KnjMyLife) October 29, 2023
Rest in peace 🕊️🙏 pic.twitter.com/nzX8I8ZPPH
— Govind Jamre (@jamre08) October 29, 2023
ವರದಿಗಳ ಪ್ರಕಾರ ನಟ ಮದ್ಯಪಾನಕ್ಕೆ ಆಡಿಕ್ಟ್ ಆಗಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೇ ಸಾಕಷ್ಟು ಬಾರಿ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಶಸ್ತ್ರ ಚಿಕಿತ್ಸೆ ಸಲುವಾಗಿ ಹಲವು ತಿಂಗಳ ಕಾಲ ಅವರು ಆಸ್ಪತ್ರೆಯಲ್ಲಿ ಇದ್ದರು. ಮ್ಯಾಥ್ಯು ಪೆರ್ರಿ ನಿಧನಕ್ಕೆ ಅವರ ಫ್ಯಾನ್ಸ್ ಸಂತಾಪ ಸೂಚಿಸಿದ್ದಾರೆ. ಸ್ವರ್ಗದಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಣಿರಿ ಎಂದು ಟ್ವೀಟ್ ಮಾಡಿದ್ದಾರೆ.