Site icon Vistara News

Gaalipata 2 | ಪ್ರೀಮಿಯರ್ ಶೋ ಟಿಕೆಟ್‌ ಸೋಲ್ಡ್‌ ಔಟ್; ಬಿಡುಗಡೆಗೆ ಮುನ್ನವೇ ಸಖತ್‌ ರೆಸ್ಪಾನ್ಸ್!

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೊಗರಾಜ್ ಭಟ್ ಕಾಂಬಿನೇಶನ್‌ನ ಗಾಳಿಪಟ-2 (Gaalipata-2) ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಬುಕ್ ಮೈ ಶೋದಲ್ಲಿ ಪ್ರೀಮಿಯರ್‌ ಶೋವಿನ ಎಲ್ಲ ಟಿಕೆಟ್‌ಗಳು ಸೌಲ್ಡ್‌ ಔಟ್‌ ಆಗಿವೆ.

ಸಿನಿಮಾ ರಿಲೀಸ್ ಆಗುವ ಒಂದು ದಿನ ಮೊದಲೇ ಗಾಳಿಪಟ-2ನ ಪ್ರೀಮಿಯರ್ ಶೋವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದ್ದು, ಸಿನಿಪ್ರೇಕ್ಷಕರು ಖುಷಿಗೊಂಡಿದ್ದಾರೆ.

ಈಗ ಬೆಂಗಳೂರಿನ ಹಲವೆಡೆ ಪ್ರೀಮಿಯರ್ ಶೋ ಸಹ ಹೌಸ್ ಫುಲ್ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಯುಎಸ್‌ಎನಲ್ಲೂ ಗಾಳಿಪಟ-2 ಥಿಯೇಟರ್ ಲಿಸ್ಟ್ ಖಚಿತಗೊಂಡಿದ್ದು, ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

ಇದನ್ನೂ ಓದಿ | Gaalipata 2 | ಗಮನ ಸೆಳೆಯುತ್ತಿದೆ ಗಣಿ-ದೂದ್‌ ಕಾಂಬಿನೇಷನ್‌; ಕಾಮಿಡಿ ಜತೆ ಎಮೋಷನ್‌ ಟಚ್!

ಯೋಗರಾಜ್‌ ಭಟ್‌ ಈ ಚಿತ್ರದ ನಿರ್ದೇಶನ ಮಾಡಿದ್ದು, ಸೂರಜ್‌ ಪ್ರೊಡಕ್ಷನ್‌ ಅಡಿ ನಿರ್ಮಾಣಗೊಂಡಿದೆ. ಕೆವಿಎನ್‌ ಪ್ರೊಡಕ್ಷನ್‌ ವಿತರಣೆ ಹಕ್ಕನ್ನು ಪಡೆದಿದೆ. ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ.

ಇದನ್ನೂ ಓದಿ | Kannada New Movies | ಒಂದೇ ದಿನ ಬಿಡುಗಡೆಗೆ ಸಜ್ಜಾದ ಗಾಳಿಪಟ-2, ರವಿ ಬೋಪಣ್ಣ: ನಿಮ್ಮ ಆಯ್ಕೆ?

Exit mobile version