ಗದರ್ 2 (Gadar 2) ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಲೇ ಇದೆ. ಒಂದು ತಿಂಗಳೊಳಗೆ, ಸನ್ನಿ ಡಿಯೋಲ್ (Sunny Deol) ಮತ್ತು ಅಮೀಷಾ ಪಟೇಲ್ (Ameesha Patel) ಅಭಿನಯದ ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ರೂ 500 ಕೋಟಿ ರೂ. ಗಡಿ ದಾಟಿದೆ ಎಂದು ವರದಿಯಾಗಿದೆ. ಗದರ್ 2 ತನ್ನ 24ನೇ ದಿನದಲ್ಲಿ (ಭಾನುವಾರ, ಸೆಪ್ಟೆಂಬರ್ 3) ಭಾರತದಲ್ಲಿ ರೂ 8.50 ಕೋಟಿ ರೂ. ಗಳಿಸಿದೆ. ಚಿತ್ರದ ಒಟ್ಟು ಕಲೆಕ್ಷನ್ ಈಗ 501.87 ಕೋಟಿ ರೂ. ಆಗಿದೆ. ವರದಿಯ ಪ್ರಕಾರ, ಗದರ್ 2 ಸಿನಿಮಾ 500 ಕೋಟಿ ಗಳಿಸಿದ ಮೂರನೇ ಹಿಂದಿ (Shah Rukh Khan’s Pathaan) ಚಲನಚಿತ್ರವಾಗಿದೆ.
ವರದಿಯ ಪ್ರಕಾರ, ಗದರ್ 2 ಸಿನಿಮಾ 500 ಕೋಟಿ ರೂ. ಗಳಿಸಿದ ಮೂರನೇ ಹಿಂದಿ ಚಲನಚಿತ್ರವಾಗಿದೆ. ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಶಾರುಖ್ ಖಾನ್ ಅವರ ಪಠಾಣ್ ಉಳಿಸಿಕೊಂಡಿದೆ. ನಂತರ S S ರಾಜಮೌಳಿ ಅವರ ಬಾಹುಬಲಿ 2 ನಂತರದ ಸ್ಥಾನದಲ್ಲಿದೆ. ಪಠಾಣ್ 28 ದಿನಗಳಲ್ಲಿ 500 ಕೋಟಿ ರೂ. ಗಳಿಸಿದ್ದರೆ, ಬಾಹುಬಲಿ 2 ಸಿನಿಮಾ 34 ದಿನಗಳಲ್ಲಿ ಅದೇ ಮೊತ್ತವನ್ನು ಗಳಿಸಿದೆ.
ಕರಣ್ ಜೋಹರ್ ಮತ್ತು ದುಲ್ಕರ್ ಸಲ್ಮಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಗದರ್ 2 ಸಿನಿಮಾವನ್ನು ಶ್ಲಾಘಿಸಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಗದರ್ 2 ಸಕ್ಸೆಸ್ ಪಾರ್ಟಿ ನಡೆಯಿತು. ಶಾರುಖ್ ಖಾನ್, ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಸಾರಾ ಅಲಿ ಖಾನ್, ಧರ್ಮೇಂದ್ರ, ಕಾರ್ತಿಕ್ ಆರ್ಯ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ: Gadar 2 Movie : ಕೇವಲ 16 ದಿನದಲ್ಲಿ ಕೆಜಿಎಫ್ 2 ದಾಖಲೆ ಚಿಂದಿ ಮಾಡಿದ ಗದರ್ 2
ನಾನು ಸಂಖ್ಯೆಗಳನ್ನು ನಂಬುವುದಿಲ್ಲ!
ಶಾರುಖ್ ಖಾನ್ ಅವರ ಪಠಾಣ್ ಹಿಂದಿಕ್ಕುವ ನಿಮ್ಮ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಹಿಂದೊಮ್ಮೆ ಮಾಧ್ಯಮವೊಂದು ನಿರ್ದೇಶಕ ಅನಿಲ್ ಶರ್ಮಾ ಅವರಲ್ಲಿ ಕೇಳಿದಾಗ “ನಾನು ಸಂಖ್ಯೆಗಳನ್ನು ನಂಬುವುದಿಲ್ಲ, ಪಠಾಣ್ ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಕೆಜಿಎಫ್ (ಚಾಪ್ಟರ್ 2) ಸಹ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಈಗ, ಗದರ್ 2 ಕೂಡ ಪ್ರದರ್ಶನ ನೀಡುತ್ತಿದೆ. ಈಗ, ಅದು ಎಷ್ಟು ದೂರ ಹೋಗುತ್ತದೆ, ಸಾರ್ವಜನಿಕರು ಅದನ್ನು ಎಷ್ಟು ದೂರ ಕೊಂಡೊಯ್ಯುತ್ತಾರೆ ಎಂದು ನೋಡೋಣ. ನಾವು ಸಂಖ್ಯೆಗಳನ್ನು ಮಾತ್ರ ನೋಡುತ್ತಿಲ್ಲ, ನಾವು ಜನರ ಹೃದಯದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಜನರು ಅದನ್ನು ನೋಡುತ್ತಿದ್ದಾರೆ ಮತ್ತು ಪ್ರೀತಿಸುತ್ತಿದ್ದಾರೆ. ಅದು ನಮಗೆ ಸಾಕು. ಇಂದು ಹೊರಬಂದ (ಬಾಕ್ಸ್ ಆಫೀಸ್) ಸಂಖ್ಯೆಗಳು ನಿಜವಾದವು, ನಕಲಿ ಏನೂ ಇಲ್ಲʼʼ ಎಂದು ಹೇಳಿದ್ದರು.
ಇದನ್ನೂ ಓದಿ: Gadar 2 : 55 ಕೋಟಿ ಬ್ಯಾಂಕ್ ಸಾಲ ಬಾಕಿ ಉಳಿಸಿಕೊಂಡ ಗದರ್ 2 ನಟ ಸನ್ನಿ ಡಿಯೋಲ್ಗೆ ಆಸ್ತಿ ಹರಾಜು ನೋಟಿಸ್
ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರವು 2001ರ ಬ್ಲಾಕ್ ಬಸ್ಟರ್ ಗದರ್: ಏಕ್ ಪ್ರೇಮ್ ಕಥಾ ಚಿತ್ರದ ಮುಂದುವರಿದ ಭಾಗವಾಗಿದೆ. ಗದರ್ 2 ಸಿನಿಮಾದಲ್ಲಿ ಸನ್ನಿ ಡಿಯೋಲ್ (Sunny Deol film), ಅಮಿಷಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಅವರು ನಟಿಸಿದ್ದಾರೆ. 1971ರಲ್ಲಿ ಭಾರತ – ಪಾಕಿಸ್ತಾನ ನಡುವೆ ಯುದ್ಧ ನಡೆದ ಸಂದರ್ಭದಲ್ಲಿನ ಕಥೆ ಇದಾಗಿದೆ.
ಇದರಲ್ಲಿ ಸನ್ನಿ ಅವರು ತಾರಾ ಸಿಂಗ್ ಪಾತ್ರದಲ್ಲಿ ನಟಿಸಿದ್ದರೆ, ಆಮಿಷಾ ಅವರು ತಾರಾ ಪತ್ನಿ ಸಕೀನಾ ಪಾತ್ರದಲ್ಲಿ ಹಾಗೆಯೇ ಉತ್ಕರ್ಷ್ ಅವರು ಅವರ ಪುತ್ರ ಚರಣ್ ಜೀತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ತರಣ್ ಜೀತ್ ಸಿಂಗ್ ಪಾಕಿಸ್ತಾನದಲ್ಲಿ ಪಾಕ್ ಸೇನೆಯ ಕೈಗೆ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲೆಂದು ತಾರಾ ಸಿಂಗ್ ಪಾಕಿಸ್ತಾನಕ್ಕೆ ತೆರಳುವ ಕಥೆ ಇದರಲ್ಲಿದೆ.