ಬೆಂಗಳೂರು: ಗದರ್ 2 (Gadar 2) ಬಿಡುಗಡೆಯಾದಾಗಿನಿಂದ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ವರದಿಗಳ ಪ್ರಕಾರ ಗದರ್ 2 ಸಿನಿಮಾ 400 ಕೋಟಿ ರೂ. ಗಡಿ ( Sunny Deol’s film) ದಾಟಿದೆ. ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರ ಆಗಸ್ಟ್ 22ರಂದು ಗಳಿಕೆಯಲ್ಲಿ ಸ್ವಲ್ಪ ಕುಸಿತವನ್ನು ಕಂಡಿದೆ ಎಂದು ವರದಿಯಾಗಿದೆ. ಆರಂಭಿಕ ಅಂದಾಜಿನ ಪ್ರಕಾರ, ಗದರ್ 2 (film gadar) ತನ್ನ 12ನೇ ದಿನಕ್ಕೆ ಭಾರತದಲ್ಲಿ 11.50 ಕೋಟಿ ರೂ. ನಿವ್ವಳ ಗಳಿಸಿದೆ.
ಚಿತ್ರದ ಒಂದು ವಾರದ ಕಲೆಕ್ಷನ್ 284.63 ಕೋಟಿ ರೂ. ಆಗಿದೆ. ಎರಡನೇ ಶುಕ್ರವಾರ (ಆಗಸ್ಟ್ 18) ₹20.5 ಕೋಟಿ ರೂ. ಗಳಿಸಿದೆ, ಎರಡನೇ ಶನಿವಾರ (ಆಗಸ್ಟ್ 19) ₹31.07 ಕೋಟಿ ರೂ., ಎರಡನೇ ಭಾನುವಾರ (ಆಗಸ್ಟ್ 20) 38.9 ಕೋಟಿ ರೂ. ಮತ್ತು ಎರಡನೇ ಸೋಮವಾರ (ಆಗಸ್ಟ್ 21) 13.50 ಕೋಟಿ ರೂ. ಗಳಿಸಿದೆ. ಆಗಸ್ಟ್ 11 ರಂದು ಬಿಡುಗಡೆಯಾದಾಗಿನಿಂದ, ಗದರ್ 2 ಒಟ್ಟೂ 400.10 ಕೋಟಿ ರೂ. ಗಳಿಸಿದೆ.
ಈ ಗದರ್ 2 ಸಿನಿಮಾ 2001ರಲ್ಲಿ ಬಿಡುಗಡೆಯಾದ ʼಗದರ್: ಏಕ್ ಪ್ರೇಮ್ ಕಥಾʼ ಸಿನಿಮಾದ ಸೀಕ್ವೆಲ್ ಆಗಿದೆ. 2001ರಲ್ಲಿ ಬಿಡುಗಡೆಯಾದಾಗ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಹಣ ಬಾಚಿಕೊಳ್ಳುವುದರೊಂದಿಗೆ ಈ ಸಿನಿಮಾ ದಾಖಲೆ ಬರೆದಿತ್ತು. ಇದೀಗ ಅದೇ ರೀತಿಯಲ್ಲಿ ಅದರ ಎರಡನೇ ಭಾಗ ಕೂಡ ಜನರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದೆ.
ಬಾರ್ಡರ್ 2 ಸಿನಿಮಾದಲ್ಲಿ ಸನ್ನಿ ಡಿಯೋಲ್
ಸನ್ನಿಯ ಗದರ್ 2 ಬ್ಲಾಕ್ ಬಸ್ಟರ್ ಆಗಿ ಆಗುತ್ತಿದೆ. ಪಿಂಕ್ವಿಲ್ಲಾ ಮಾಡಿರುವ ವರದಿಯ ಪ್ರಕಾರ ನಟ ಈಗ ʼಬಾರ್ಡರ್ 2ʼ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ ಎಂದು ಹೇಳಿದೆ. ಈ ಚಿತ್ರವನ್ನು 1997ರ ಮೂಲ ಚಿತ್ರವನ್ನು ನಿರ್ದೇಶಿಸಿದ ಜೆ ಪಿ ದತ್ತಾ ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ. ಸನ್ನಿ ಡಿಯೋಲ್ ಹೊರತುಪಡಿಸಿ ಮೂಲ ಪಾತ್ರವರ್ಗದ ಬೇರೆ ಯಾರ ಹೆಸರನ್ನೂ ಹೇಳಲಾಗಿಲ್ಲ. ಈ ಬಗ್ಗೆ ಕೆಲವು ವಾರಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.
ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರವು 2001 ರ ಬ್ಲಾಕ್ ಬಸ್ಟರ್ ಗದರ್: ಏಕ್ ಪ್ರೇಮ್ ಕಥಾ ಚಿತ್ರದ ಮುಂದುವರಿದ ಭಾಗವಾಗಿದೆ. ಗದರ್ 2 ಸಿನಿಮಾದಲ್ಲಿ ಸನ್ನಿ ಡಿಯೋಲ್ (Sunny Deol film), ಅಮಿಷಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಅವರು ನಟಿಸಿದ್ದಾರೆ. 1971ರಲ್ಲಿ ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೆದ ಸಂದರ್ಭದಲ್ಲಿನ ಕಥೆ ಇದಾಗಿದೆ.
ಇದರಲ್ಲಿ ಸನ್ನಿ ಅವರು ತಾರಾ ಸಿಂಗ್ ಪಾತ್ರದಲ್ಲಿ ನಟಿಸಿದ್ದರೆ, ಆಮಿಷಾ ಅವರು ತಾರಾ ಪತ್ನಿ ಸಕೀನಾ ಪಾತ್ರದಲ್ಲಿ ಹಾಗೆಯೇ ಉತ್ಕರ್ಷ್ ಅವರು ಅವರ ಪುತ್ರ ಚರಣ್ ಜೀತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ತರಣ್ ಜೀತ್ ಸಿಂಗ್ ಪಾಕಿಸ್ತಾನದಲ್ಲಿ ಪಾಕ್ ಸೇನೆಯ ಕೈಗೆ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲೆಂದು ತಾರಾ ಸಿಂಗ್ ಪಾಕಿಸ್ತಾನಕ್ಕೆ ತೆರಳುವ ಕಥೆ ಇದರಲ್ಲಿದೆ.