ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ನಟಿಸಿರುವ ಗದರ್ 2 (Gadar 2 Box Office) 300 ಕೋಟಿ ರೂ. ಗಡಿ ದಾಟುವ ಹಂತದಲ್ಲಿದೆ. ಮೊದಲ ವಾರದ ಒಟ್ಟು ಸಂಗ್ರಹಣೆ 283.35 ಕೋಟಿ ರೂ. ಆಗಿತ್ತು. ಆರಂಭಿಕ ಅಂದಾಜಿನ ಪ್ರಕಾರ ಚಿತ್ರ ಆಗಸ್ಟ್ 17ರಂದು 22 ಕೋಟಿ ರೂ. ಸಂಗ್ರಹಿಸಿದೆ. ಆಗಸ್ಟ್ 11ರಂದು 40 ಕೋಟಿ ರೂ. ಆಗಸ್ಟ್ 15ರಂದು 55.5 ಕೋಟಿ ರೂ ಸಂಗ್ರಹಿಸಿ ದಾಖಲೆ ಮಾಡಿತ್ತು. ಕೇವಲ ಒಂದೇ ವಾರದಲ್ಲಿ ಒಟ್ಟು 283.35 ಕೋಟಿ ರೂ. ಗಳಿಸಿದ್ದು ಸಣ್ಣ ಮಾತಲ್ಲ ಎನ್ನುತ್ತಾರೆ ಟ್ರೇಡ್ ವಿಶ್ಲೇಷಕರು.
ಅನಿಲ್ ಶರ್ಮಾ ನಿರ್ದೇಶನದ ಈ ಸಿನಿಮಾ ಆಗಸ್ಟ್ 11ರಂದು ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್ (OMG2) ಸಿನಿಮಾ ಜತೆಗೆ ಪೈಪೋಟಿಗೆ ಇಳಿದಿತ್ತು. ಐದು ದಿನಗಳಲ್ಲಿ ಈ ಚಿತ್ರ ಬರೋಬ್ಬರಿ 229 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ‘ಗದರ್ 2’ ಹೊಸ ದಾಖಲೆ ಸೃಷ್ಟಿ ಮಾಡಿದೆ .ಶುಕ್ರವಾರ (ಆಗಸ್ಟ್ 11) ಈ ಸಿನಿಮಾ 40.10 ಕೋಟಿ ಬಾಚಿಕೊಂಡಿತು. ಶನಿವಾರ (ಆಗಸ್ಟ್ 12) 43.08 ಕೋಟಿ ರೂಪಾಯಿ, ಭಾನುವಾರ(ಆಗಸ್ಟ್ 13) 51.70 ಕೋಟಿ ರೂಪಾಯಿ, ಸೋಮವಾರ (ಆಗಸ್ಟ್ 14) 38.70 ಕೋಟಿ ರೂಪಾಯಿ ಗಳಿಸಿತು. ಆಗಸ್ಟ್ 15ರ ಪ್ರಯುಕ್ತ ಮಂಗಳವಾರ (ಆಗಸ್ಟ್ 15) ಈ ಚಿತ್ರ 55.40 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 229 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: Gadar 2 Box Office: ʼಜೈಲರ್ʼ ಗಳಿಕೆಯನ್ನು ಹಿಂದಿಕ್ಕಿದ ಗದರ್ 2; ಸ್ವಾತಂತ್ರ್ಯ ದಿನ ಅತಿ ಹೆಚ್ಚು ಕಲೆಕ್ಷನ್!
ಮೆಟ್ರೋ ನಗರಗಳಲ್ಲಿ ಬಹುತೇಕ ಎಲ್ಲಾ ಚಿತ್ರಮಂದಿರಗಳು ಹೌಸ್‌ಫುಲ್ ಆಗಿವೆ. ಈ ಗದರ್ 2 ಸಿನಿಮಾ 2001ರಲ್ಲಿ ಬಿಡುಗಡೆಯಾದ ಗದರ್: ಏಕ್ ಪ್ರೇಮ್ ಕಥಾ ಸಿನಿಮಾದ ಸೀಕ್ವೆಲ್ ಆಗಿದೆ. 2001ರಲ್ಲಿ ಬಿಡುಗಡೆಯಾದಾಗ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಹಣ ಬಾಚಿಕೊಳ್ಳುವುದರೊಂದಿಗೆ ಸಿನಿಮಾ ದಾಖಲೆ ಬರೆದಿತ್ತು. ಇದೀಗ ಅದೇ ರೀತಿಯಲ್ಲಿ ಅದರ ಎರಡನೇ ಭಾಗ ಕೂಡ ಜನರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: VISTARA TOP 10 NEWS : ಮತ್ತೆ ಆಪರೇಷನ್ ಕಂಪನ, ಮಹಿಳೆಯರ ಅಪಮಾನಕ್ಕೆ ಕೋರ್ಟ್ ಸಾಂತ್ವನ ಮತ್ತು ಇತರ ಸುದ್ದಿಗಳು
ಗದರ್ 2 ಸಿನಿಮಾದಲ್ಲಿ ಸನ್ನಿ ಡಿಯೋಲ್, ಅಮಿಷಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಅವರು ನಟಿಸಿದ್ದಾರೆ. 1971ರಲ್ಲಿ ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೆದ ಸಂದರ್ಭದಲ್ಲಿನ ಕಥೆ ಇದಾಗಿದೆ. ಇದರಲ್ಲಿ ಸನ್ನಿ ಅವರು ತಾರಾ ಸಿಂಗ್ ಪಾತ್ರದಲ್ಲಿ ನಟಿಸಿದ್ದರೆ, ಆಮಿಷಾ ಅವರು ತಾರಾ ಪತ್ನಿ ಸಕೀನಾ ಪಾತ್ರದಲ್ಲಿ ಹಾಗೆಯೇ ಉತ್ಕರ್ಷ್ ಅವರು ಅವರ ಪುತ್ರ ಚರಣ್ ಜೀತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ತರಣ್ ಜೀತ್ ಸಿಂಗ್ ಪಾಕಿಸ್ತಾನದಲ್ಲಿ ಪಾಕ್ ಸೇನೆಯ ಕೈಗೆ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲೆಂದು ತಾರಾ ಸಿಂಗ್ ಪಾಕಿಸ್ತಾನಕ್ಕೆ ತೆರಳುವ ಕಥೆ ಇದರಲ್ಲಿದೆ. ಈ ಸಿನಿಮಾದವನ್ನು ಅನಿಲ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ.