Site icon Vistara News

Gadar 2 Movie : ಗದರ್‌ 2 ಸಿನಿಮಾಕ್ಕಾಗಿ ಸನ್ನಿ ಡಿಯೋಲ್‌ ಪಡೆದ ಸಂಭಾವನೆ ಇಷ್ಟೇನಾ!

Gadar 2 Movie sunny deol

ಮುಂಬೈ: ಸನ್ನಿ ಡಿಯೋಲ್‌ ನಟನೆಯ ಗದರ್‌ 2 ಸಿನಿಮಾ (Gadar 2 Movie) ಸದ್ಯ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಸಿನಿಮಾ. ನೂರಾರು ಕೋಟಿಗಳನ್ನು ಬಾಚಿಕೊಳ್ಳುತ್ತ ಸಿನಿಮಾ ತನ್ನ ಯಶಸ್ಸನ್ನು ಮುಂದುವರಿಸುತ್ತಿದೆ. ಈ ಬೆನ್ನಲ್ಲೇ ಸಿನಿಮಾಕ್ಕಾಗಿ ನಟ ಸನ್ನಿ ಡಿಯೋಲ್‌ ಎಷ್ಟು ಸಂಭಾವನೆ ಪಡೆದಿದ್ದರು ಎನ್ನುವ ವಿಚಾರ ಇದೀಗ ಹೊರಬಿದ್ದಿದೆ.

ಪೂರ್ತಿ ಗದರ್‌ 2 ಸಿನಿಮಾವನ್ನು 60 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಅದರಲ್ಲಿ ಎಂಟು ಕೋಟಿ ರೂ. ಅನ್ನು ಸನ್ನಿ ಡಿಯೋಲ್‌ ಅವರಿಗೆ ಸಂಭಾವನೆ ರೂಪದಲ್ಲಿ ನೀಡಲಾಗಿದೆ. ಅಂದ ಹಾಗೆ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಕೊಟ್ಟಿರುವುದು ಸನ್ನಿ ಡಿಯೋಲ್‌ ಅವರಿಗೇ ಆಗಿದೆ. ಹಲವಾರು ನಟರು ನೂರಾರು ಕೋಟಿಗಳನ್ನು ತಮ್ಮ ಸಂಭಾವನೆಯಾಗಿ ಪಡೆಯುತ್ತಿರುವ ಈ ಕಾಲದಲ್ಲಿ ಕೇವಲ ಎಂಟು ಕೋಟಿ ರೂ. ಸಂಭಾವನೆ ಪಡೆದು ಸನ್ನಿ ಅವರು ಸಿನಿಮಾ ಮಾಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಸನ್ನಿ ಡಿಯೋಲ್‌ ಹೊರತಾಗಿ ಬಹುತೇಕ ನಟರಿಗೆ ಪೂರ್ತಿ ಪ್ರಮಾಣದ ಹಣವನ್ನು ಸಿನಿಮಾ ಬಿಡುಗಡೆಗೆ ಮೊದಲು ಕೊಡಲಾಗಿರಲಿಲ್ಲವಂತೆ. ಸಿನಿಮಾದ ನಿರ್ದೇಶಕರಾದ ಅನಿಲ್‌ ಶರ್ಮಾ ಅವರ ಮಗನಾದ ಉತ್ಕರ್ಷ್‌ ಅವರೂ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರಿಗೂ ಕೂಡ ಟೋಕನ್‌ ಹಣವನ್ನು ಮಾತ್ರವೇ ಸಿನಿಮಾ ಬಿಡುಗಡೆಗೆ ಮೊದಲು ಕೊಡಲಾಗಿತ್ತು.

ಇನ್ನೂ ವಿಶೇಷವೆಂದರೆ ನಿರ್ದೇಶಕ ಅನಿಲ್‌ ಶರ್ಮಾ ಅವರೂ ಕೂಡ ಸಿನಿಮಾದ ವೆಚ್ಚದಿಂದ ತಮ್ಮ ಸಂಭಾವನೆಯನ್ನು ಪಡೆದುಕೊಂಡಿಲ್ಲವಂತೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವರು ಸಂಭಾವನೆಯನ್ನೂ ಕಡಿತ ಮಾಡಿಕೊಂಡಿದ್ದಾಗಿ ವರದಿ ಮಾಡಲಾಗಿದೆ.

ಇದನ್ನೂ ಓದಿ: Viral News : ಅಂತ್ಯಸಂಸ್ಕಾರ ಮಾಡಲಾಗಿದ್ದ ಮಗಳು ವಿಡಿಯೊ ಕಾಲ್‌ ಮಾಡಿದಳು! ಇದೊಂದು ವಿಚಿತ್ರ ಲವ್‌ ಸ್ಟೋರಿ
ಸನ್ನಿ ಡಿಯೋಲ್‌, ಅಮೀಶಾ ಪಟೇಲ್‌ ಮತ್ತು ಉತ್ಕರ್ಷ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಗದರ್‌ 2 ಸಿನಿಮಾ ಆಗಸ್ಟ್‌ 11ರಂದು ತೆರೆ ಕಂಡಿದೆ. ಸಿನಿಮಾ ಈಗಾಗಲೇ 400 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. ಈ ಸಿನಿಮಾ 2001ರಲ್ಲಿ ಬಿಡುಗಡೆಯಾದ ಗದರ್‌: ಏಕ್‌ ಪ್ರೇಮ್‌ ಕಥಾ ಸಿನಿಮಾದ ಸೀಕ್ವೆಲ್‌ ಆಗಿದೆ.

Exit mobile version