Site icon Vistara News

Gadar 2 OTT: ಅಕ್ಟೋಬರ್ 6 ರಿಂದ ಒಟಿಟಿಯಲ್ಲಿ ಗದರ್ 2 ; ಸ್ಟ್ರೀಮಿಂಗ್ ಎಲ್ಲಿ?

Gadar 2 OTT

ಬೆಂಗಳೂರು: ಗದರ್ 2 (Gadar 2) ಬಿಡುಗಡೆಯಾದಾಗಿನಿಂದಲೂ ಬಾಕ್ಸ್‌ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದು 500 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಸನ್ನಿ ಡಿಯೋಲ್ (Sunny Deol) ಮತ್ತು ಅಮೀಷಾ ಪಟೇಲ್ (Ameesha Patel) ಅಭಿನಯದ ಚಿತ್ರ ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಗದರ್ 2 ಅಕ್ಟೋಬರ್ 6 ರಿಂದ ಜೀ5ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ. ವರದಿಯ ಪ್ರಕಾರ, ಗದರ್ 2 ಸಿನಿಮಾ 500 ಕೋಟಿ ಗಳಿಸಿದ ಮೂರನೇ ಹಿಂದಿ (Shah Rukh Khan’s Pathaan) ಚಲನಚಿತ್ರವಾಗಿ ಹೊರಹೊಮ್ಮಿತ್ತು.

ಜೀ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರದಲ್ಲಿ ಅಮೀಶಾ ಪಟೇಲ್ ಸಕೀನಾ ಪಾತ್ರದಲ್ಲಿ ಮತ್ತು ಉತ್ಕರ್ಷ್ ಶರ್ಮಾ ಚರಂಜೀತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾರಾ ಸಿಂಗ್ ನಿಮ್ಮ ಹೃದಯಗಳನ್ನು ಗೆಲ್ಲಲು ಸಿದ್ಧರಾಗಿದ್ದಾರೆ! ಭಾರತದ ಅತಿದೊಡ್ಡ ಬ್ಲಾಕ್‌ಬಸ್ಟರ್ ಕೇವಲ 2 ದಿನಗಳಲ್ಲಿ ಜೀ5ನಲ್ಲಿ ಬರಲಿದೆ ಎಂದು ಜೀ 5 ಪೋಸ್ಟ್‌ ಹಂಚಿಕೊಂಡಿದೆ.

ಗದರ್ 2 ಆಗಸ್ಟ್ 11ರಂದು ತೆರೆಗೆ ಬಂದಿತು. ಚಿತ್ರದಲ್ಲಿ ಮನೀಶ್ ವಾಧ್ವಾ, ಗೌರವ್ ಚೋಪ್ರಾ ಮತ್ತು ಸಿಮ್ರತ್ ಕೌರ್ ಕೂಡ ನಟಿಸಿದ್ದಾರೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಗದರ್ 2 ಚಿತ್ರಮಂದಿರಗಳಲ್ಲಿ ತನ್ನ ಆರಂಭಿಕ ದಿನದಂದು 40 ಕೋಟಿ ರೂ. ಗಳಿಸಿತು.

ಇದನ್ನೂ ಓದಿ: Gadar 2: 24 ದಿನಗಳಲ್ಲಿ ಪಠಾಣ್‌, ಬಾಹುಬಲಿ 2 ದಾಖಲೆ ಮುರಿದ ಗದರ್ 2!

ಈ ಗದರ್‌ 2 ಸಿನಿಮಾ 2001ರಲ್ಲಿ ಬಿಡುಗಡೆಯಾದ ಗದರ್‌: ಏಕ್‌ ಪ್ರೇಮ್‌ ಕಥಾ ಸಿನಿಮಾದ ಸೀಕ್ವೆಲ್‌ ಆಗಿದೆ. 2001ರಲ್ಲಿ ಬಿಡುಗಡೆಯಾದಾಗ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಹಣ ಬಾಚಿಕೊಳ್ಳುವುದರೊಂದಿಗೆ ಸಿನಿಮಾ ದಾಖಲೆ ಬರೆದಿತ್ತು. ಇದೀಗ ಅದೇ ರೀತಿಯಲ್ಲಿ ಅದರ ಎರಡನೇ ಭಾಗ ಕೂಡ ಜನರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದೆ.

1971ರಲ್ಲಿ ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೆದ ಸಂದರ್ಭದಲ್ಲಿನ ಕಥೆ ಇದಾಗಿದೆ. ಇದರಲ್ಲಿ ಸನ್ನಿ ಅವರು ತಾರಾ ಸಿಂಗ್‌ ಪಾತ್ರದಲ್ಲಿ ನಟಿಸಿದ್ದರೆ, ಆಮಿಷಾ ಅವರು ತಾರಾ ಪತ್ನಿ ಸಕೀನಾ ಪಾತ್ರದಲ್ಲಿ ಹಾಗೆಯೇ ಉತ್ಕರ್ಷ್‌ ಅವರು ಅವರ ಪುತ್ರ ಚರಣ್‌ ಜೀತ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದಾರೆ. ತರಣ್‌ ಜೀತ್‌ ಸಿಂಗ್‌ ಪಾಕಿಸ್ತಾನದಲ್ಲಿ ಪಾಕ್‌ ಸೇನೆಯ ಕೈಗೆ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲೆಂದು ತಾರಾ ಸಿಂಗ್‌ ಪಾಕಿಸ್ತಾನಕ್ಕೆ ತೆರಳುವ ಕಥೆ ಇದರಲ್ಲಿದೆ. ಈ ಸಿನಿಮಾದವನ್ನು ಅನಿಲ್‌ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ.

Exit mobile version