ಬೆಂಗಳೂರು: ಸನ್ನಿ ಡಿಯೋಲ್ ಅಭಿನಯದ ಗದರ್ 2 (Gadar 2) ಬಾಕ್ಸ್ ಆಫೀಸ್‌ನಲ್ಲಿ (Gadar 2 box office ) ತನ್ನ ಓಟವನ್ನು ಮುಂದುರವರಿಸುತ್ತಲೇ ಇದೆ. ಭಾರತದಲ್ಲಿ ಮೊದಲ ವಾರದಲ್ಲಿ 284.63 ಕೋಟಿ ರೂ. ಗಳಿಕೆ ಕಂಡಿದೆ. ಚಿತ್ರದ ಎಂಟನೇ ದಿನ 19.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ಸಿನಿಮಾ ಇಲ್ಲಿಯವರೆಗೆ ಒಟ್ಟು 304.13 ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಯಶ್ ನಟನೆಯ ‘ಕೆಜಿಎಫ್ 2’ ಹಾಗೂ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ (Pathaan Movie) ಮಾಡಿದ್ದ ದಾಖಲೆಯನ್ನು ಉಡೀಸ್ ಮಾಡಿದೆ. ಆಗಸ್ಟ್ 19 ಹಾಗೂ ಆಗಸ್ಟ್ 20 ಚಿತ್ರಕ್ಕೆ ಮತ್ತಷ್ಟು ( successful weekend ) ಕಲೆಕ್ಷನ್ ಆಗಲಿದೆ.
ಚಿತ್ರದ ದೇಶೀಯ ಒಟ್ಟು ಎಂಟು ದಿನದ ಕಲೆಕ್ಷನ್ 335.9 ಕೋಟಿ ರೂ. ಆಗಿದೆ. ಅನಿಲ್ ಶರ್ಮಾ ನಿರ್ದೇಶನದ ಈ ಸಿನಿಮಾ ಆಗಸ್ಟ್ 11ರಂದು ಅಕ್ಷಯ್ ಕುಮಾರ್ ಅಭಿನಯದ OMG 2 ಮತ್ತು ರಣವೀರ್ ಸಿಂಗ್-ಆಲಿಯಾ ಭಟ್ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಎರಡೂ ಸಿನಿಮಾಗಳ ಸ್ಪರ್ಧೆಯ ನಡುವೆ ಚಿತ್ರ ಬಿಡುಗಡೆಯಾಯಿತು. ಈ ವಾರಾಂತ್ಯದಲ್ಲಿ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ಗದರ್ 2 ಮತ್ತೊಂದು ಯಶಸ್ವಿ ವಾರಾಂತ್ಯವನ್ನು ಆನಂದಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ; Gadar 2 Box Office: ಬಾಕ್ಸ್ ಆಫೀಸ್ ಧೂಳೆಬ್ಬಿಸ್ತಿದೆ ‘ಗದರ್-2ʼ; 300 ಕೋಟಿ ರೂ. ಸನಿಹ!
ಸಿನಿಮಾ ರಿಲೀಸ್ ಆದ ಎರಡನೇ ಶುಕ್ರವಾರ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿರುವುದು ‘ಗದರ್ 2’ ಚಿತ್ರದ ಹೆಮ್ಮೆ. ಈ ಮೊದಲು ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ (19 ಕೋಟಿ ರೂ), ‘ದಂಗಲ್’ (18 ಕೋಟಿ ರೂ), ‘ಪಿಕೆ’ (15 ಕೋಟಿ ರೂ), ‘ಕೆಜಿಎಫ್ 2’ (11.25 ಕೋಟಿ ರೂ) ಗಳಿಕೆ ಮಾಡಿತ್ತು. ಇದನ್ನು ‘ಗದರ್ 2’ ಹಿಂದಿಕ್ಕಿದೆ.
ಈ ಗದರ್ 2 ಸಿನಿಮಾ 2001ರಲ್ಲಿ ಬಿಡುಗಡೆಯಾದ ಗದರ್: ಏಕ್ ಪ್ರೇಮ್ ಕಥಾ ಸಿನಿಮಾದ ಸೀಕ್ವೆಲ್ ಆಗಿದೆ. 2001ರಲ್ಲಿ ಬಿಡುಗಡೆಯಾದಾಗ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಹಣ ಬಾಚಿಕೊಳ್ಳುವುದರೊಂದಿಗೆ ಸಿನಿಮಾ ದಾಖಲೆ ಬರೆದಿತ್ತು. ಇದೀಗ ಅದೇ ರೀತಿಯಲ್ಲಿ ಅದರ ಎರಡನೇ ಭಾಗ ಕೂಡ ಜನರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: Gadar 2 Box Office: ʼಜೈಲರ್ʼ ಗಳಿಕೆಯನ್ನು ಹಿಂದಿಕ್ಕಿದ ಗದರ್ 2; ಸ್ವಾತಂತ್ರ್ಯ ದಿನ ಅತಿ ಹೆಚ್ಚು ಕಲೆಕ್ಷನ್!
ಗದರ್ 2 ಸಿನಿಮಾದಲ್ಲಿ ಸನ್ನಿ ಡಿಯೋಲ್ (Sunny Deol film), ಅಮಿಷಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಅವರು ನಟಿಸಿದ್ದಾರೆ. 1971ರಲ್ಲಿ ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೆದ ಸಂದರ್ಭದಲ್ಲಿನ ಕಥೆ ಇದಾಗಿದೆ. ಇದರಲ್ಲಿ ಸನ್ನಿ ಅವರು ತಾರಾ ಸಿಂಗ್ ಪಾತ್ರದಲ್ಲಿ ನಟಿಸಿದ್ದರೆ, ಆಮಿಷಾ ಅವರು ತಾರಾ ಪತ್ನಿ ಸಕೀನಾ ಪಾತ್ರದಲ್ಲಿ ಹಾಗೆಯೇ ಉತ್ಕರ್ಷ್ ಅವರು ಅವರ ಪುತ್ರ ಚರಣ್ ಜೀತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ತರಣ್ ಜೀತ್ ಸಿಂಗ್ ಪಾಕಿಸ್ತಾನದಲ್ಲಿ ಪಾಕ್ ಸೇನೆಯ ಕೈಗೆ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲೆಂದು ತಾರಾ ಸಿಂಗ್ ಪಾಕಿಸ್ತಾನಕ್ಕೆ ತೆರಳುವ ಕಥೆ ಇದರಲ್ಲಿದೆ.