Site icon Vistara News

Rishab Shetty: ರಿಷಬ್‌ ಶೆಟ್ಟಿಗೆ ಗೇಮ್ ಚೇಂಜರ್ ಅವಾರ್ಡ್‌, ಕಾಂತಾರ ನಟನಿಂದ ಕನ್ನಡಿಗರಿಗೆ ಧನ್ಯವಾದ

Game Changer Of The Year award Recieved By Rishab shetty

ಬೆಂಗಳೂರು: ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಬಾಲಿವುಡ್ ಲೈಫ್ ಅವಾರ್ಡ್ಸ್‌ನ (BLAwards2023) (BLAwards) ದಕ್ಷಿಣ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಬೆನ್ನಲ್ಲೇ ಒಟಿಟಿ ಚೇಂಜ್ ಮೇಕರ್ಸ್​ ಕಾರ್ಯಕ್ರಮದಲ್ಲಿ ಗೇಮ್ ಚೇಂಜರ್ ಅವಾರ್ಡ್ ಪಡೆದಿದ್ದಾರೆ. ವೇದಿಕೆ ಮೇಲೆ ಅವಾರ್ಡ್ ಸ್ವೀಕರಿಸಿ ಮಾತಾಡಿದ ನಟ ರಿಷಬ್ ಶೆಟ್ಟಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಇದೀಗ ಪ್ರಶಸ್ತಿಯೊಂದಿಗೆ ಫೋಟೊಗಳನ್ನು ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

ʻಪ್ರೇಕ್ಷಕರು ನನ್ನ ಪಾಲಿಗೆ ಗೇಮ್ ಚೇಂಜರ್ʼ ಎಂದು ರಿಷಬ್ ಶೆಟ್ಟಿ ಹೇಳಿದರು. ಮೊದಲು ಕಾಂತಾರ ರಿಲೀಸ್ ಆಗಿದ್ದು ಕನ್ನಡದಲ್ಲಿ, ಕನ್ನಡಿಗರು ಸಿನಿಮಾ ಗೆಲ್ಲಿಸಿದ್ದಾರೆ ಎಂದು ರಿಷಬ್ ಹೇಳಿದ್ದಾರೆ. ಪ್ರಶಸ್ತಿ ಪಡೆದ ಫೋಟೊ ಹಾಗೂ ವಿಡಿಯೊಗಳನ್ನು ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʻʻಕನ್ನಡಿಗರ ಆಶೀರ್ವಾದ ಮತ್ತು ಬೆಂಬಲಕ್ಕೆ ನಾನು ಸದಾ ಚಿರಋಣಿʼʼ ಎಂದು ರಿಷಬ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rishab Shetty: ಬಾಲಿವುಡ್ ಲೈಫ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದ ರಿಷಬ್‌ ಶೆಟ್ಟಿ

ರಿಷಬ್‌ ಶೆಟ್ಟಿ ಪೋಸ್ಟ್‌

ಪ್ರಿಕ್ವೆಲ್‌ ಆಗಿ ಬರಲಿದೆ ಕಾಂತಾರ 2

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ.

Exit mobile version