Site icon Vistara News

Gandhada Gudi | ಗಂಧದ ಗುಡಿಗೆ ಬರಲಿದ್ದಾರೆ 5 ಲಕ್ಷ ಅಪ್ಪು ಅಭಿಮಾನಿಗಳು!

Gandhada Gudi

ಬೆಂಗಳೂರು: ‘ಗಂಧದ ಗುಡಿ’ (Gandhada Gudi) ಟ್ರೈಲರ್ ಹೊಸ ಇತಿಹಾಸ ಬರೆದಿದ್ದು, 1 ಕೋಟಿ ವ್ಯೂಸ್ ಪಡೆಯುವ ಮೂಲಕ ಯುಟ್ಯೂಬ್​ನಲ್ಲಿ ಹವಾ ಎಬ್ಬಿಸಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿದ್ದು, ಅಕ್ಟೋಬರ್ 28ಕ್ಕೆ ದೇಶಾದ್ಯಂತ ಸಾವಿರಾರು ಥಿಯೇಟರ್​ಗಳಲ್ಲಿ ‘ಗಂಧದ ಗುಡಿ’ ರಿಲೀಸ್ ಆಗಲಿದೆ. ಹೀಗಾಗಿ ಡಾ.ರಾಜ್ ಕುಟುಂಬ ಸದಸ್ಯರು ಹಾಗೂ ‘ಗಂಧದ ಗುಡಿ’ ಸಿನಿಮಾ ತಂಡ ದೊಡ್ಡ ಮಟ್ಟದಲ್ಲಿ ಈ ಪ್ರಿ ರಿಲೀಸ್ ಇವೆಂಟ್ ಆಯೋಜಿಸಿದ್ದಾರೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ 5 ಲಕ್ಷ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ.

ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ‘ಪುನೀತ್ ಪರ್ವ’ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಆದರೆ ದಿಢೀರ್ 5 ಲಕ್ಷ ಅಭಿಮಾನಿಗಳು ಬೆಂಗಳೂರಿಗೆ ಬಂದರೆ ಟ್ರಾಫಿಕ್ ನಿರ್ವಹಣೆ ಕಷ್ಟ. ಹೀಗಾಗಿ ಸ್ವತಃ ಅಪ್ಪು ಅಭಿಮಾನಿಗಳೇ ನಿರ್ವಹಣೆ ಹೊಣೆ ಹೊತ್ತಿದ್ದು, ಪೊಲೀಸರಿಗೆ ಸಾಥ್ ನೀಡಿಲಿದ್ದಾರೆ. ಮತ್ತೊಂದು ಕಡೆ ಬೇರೆ ಬೇರೆ ಊರುಗಳಿಂದ ಬರುವ ಫ್ಯಾನ್ಸ್​ಗೆ ಊಟ, ವಸತಿಯ ವ್ಯವಸ್ಥೆ ಕಲ್ಪಿಸಲಿದ್ದಾರೆ. ‘ಗಂಧದ ಗುಡಿ’ ಸಿನಿಮಾ ಮಾತ್ರವಲ್ಲ, ಅದೊಂದು ಭಾವನೆ ಅಂತಿದ್ದಾರೆ ಅಭಿಮಾನಿಗಳು.

ಭಾವನಾತ್ಮಕ ‘ಟ್ವೀಟ್’
ಗಂಧದ ಗುಡಿ ಸಿನಿಮಾ ನಿರ್ದೇಶಕ ಅಮೋಘವರ್ಷ ಅವರಿಗೆ ಕಳೆದ ವರ್ಷ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ‘ವೈಲ್ಡ್ ಕರ್ನಾಟಕ’ ಅಮೋಘವರ್ಷ ಅವರಿಗೆ ಇಂತಹ ಗೌರವವನ್ನು ತಂದುಕೊಟ್ಟಿತ್ತು. ಆಗ ಅಂದರೆ ಅಕ್ಟೋಬರ್ 26, 2021ರಂದು ಸ್ವತಃ ಡಾ. ಪುನೀತ್ ರಾಜ್​ಕುಮಾರ್ ಟ್ವೀಟ್ ಮಾಡಿದ್ದರು. ಟ್ವೀಟ್ ಮೂಲಕ ‘ವೈಲ್ಡ್ ಕರ್ನಾಟಕ’ ತಂಡಕ್ಕೆ ಶುಭಕೋರಿದ್ದರು. ಅಪ್ಪು ವಿಧಿವಶರಾಗುವ 3 ದಿನ ಮೊದಲು ಮಾಡಿದ್ದ ಟ್ವೀಟ್ ಇದೀಗ ಅಭಿಮಾನಿಗಳ ಕಣ್ಣು ಒದ್ದೆ ಮಾಡುತ್ತಿದೆ. ಅಪ್ಪು ಟ್ವೀಟ್ ಮಾಡಿದ 3 ದಿನದಲ್ಲಿ ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿದ್ದರು. ಇದೇ ಅ.29ಕ್ಕೆ ಅಪ್ಪು ಅಗಲಿ 1 ವರ್ಷ ತುಂಬಲಿದ್ದು, ಇದೇ ಸಂದರ್ಭದಲ್ಲಿ ‘ಗಂಧದ ಗುಡಿ’ ಗರ್ಜನೆ ಶುರುವಾಗಲಿದೆ. ಹೀಗಾಗಿ ಕರ್ನಾಟಕ ರತ್ನ ಅಪ್ಪು ಮಾಡಿದ್ದ ಹಳೆಯ ಟ್ವೀಟ್ ನೋಡುತ್ತಾ ಕೋಟ್ಯಂತರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

‘ಅಮೋಘ’ ಜೋಡಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ‘ವೈಲ್ಡ್ ಕರ್ನಾಟಕ’ ನಿರ್ದೇಶಿಸಿದ್ದವರು ಅಮೋಘವರ್ಷ. ಇದೀಗ ‘ಗಂಧದ ಗುಡಿ’ ಮೂಲಕ ಅಮೋಘವರ್ಷ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ‘ಗಂಧದ ಗುಡಿ’ ಅಪ್ಪು ಹಾಗೂ ಅಮೋಘವರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದಿದೆ. ಅಷ್ಟಕ್ಕೂ ‘ಗಂಧದ ಗುಡಿ’ ಶೂಟಿಂಗ್ ಶುರುವಾದಗಲೇ ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ದುರದೃಷ್ಟವಶಾತ್ ‘ಗಂಧದ ಗುಡಿ’ ರಿಲೀಸ್​​ಗೆ ಮೊದಲೇ ಅಪ್ಪು ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದರು. ಇದಾದ ಬಳಿಕ ‘ಗಂಧದ ಗುಡಿ’ ರಿಲೀಸ್ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಗಳು ಇದೀಗ ನೂರುಪಟ್ಟು ಹೆಚ್ಚಾಗಿದ್ದು, ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ & ಕನ್ನಡ ಸಿನಿ ಕ್ಷೇತ್ರದ ದಿಗ್ಗಜ ಡಾ.ಪುನೀತ್ ರಾಜ್​​ಕುಮಾರ್ ಅಭಿನಯದ ಕೊನೇ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಗಂಧದ ಗುಡಿ ಅ.28ಕ್ಕೆ ಜಗತ್ತಿನಾದ್ಯಂತ ಸಾವಿರಾರು ಸ್ಕ್ರೀನ್​ನಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ‘ಪುನೀತ್ ಪರ್ವ’ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಲಾಗಿದೆ. ಈ ಮೂಲಕ ಅಪ್ಪು ಅಭಿನಯದ ಕೊನೆಯ ಸಿನಿಮಾ ಜಗತ್ತಿನಾದ್ಯಂತ ನಿರೀಕ್ಷೆ ಮೂಡಿಸಿದ್ದು, ಈಗಾಗಲೇ ಟ್ರೈಲರ್ ಹೊಸ ಇತಿಹಾಸವನ್ನೇ ಸೃಷ್ಟಿಮಾಡಿದೆ.

ಇದನ್ನೂ ಓದಿ: Vishal Shaktidhama Visit | ʻಶಕ್ತಿಧಾಮʼದಲ್ಲಿ ನಟ ವಿಶಾಲ್‌: ಅಪ್ಪು ನೆನೆದು ಭಾವುಕ

Exit mobile version