Site icon Vistara News

Gandhada Gudi | ನಾಳೆ ʻಗಂಧದ ಗುಡಿʼ ಆರ್ಭಟ ಶುರು: ಹಲವು ಮಾಲ್‌ಗಳಲ್ಲಿ 50 ಪ್ರದರ್ಶನ!

100 Days Of Gandhada Gudi

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಟನೆಯ ʻಗಂಧದ ಗುಡಿʼ ಸಿನಿಮಾ (Gandhada Gudi) ವೀಕ್ಷಿಸಲು ಕನ್ನಡದ ಜನತೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಕ್ಟೋಬರ್ 25ರಂದು ಆನ್‌ಲೈನ್‌ ಮೂಲಕ ಗಂಧದ ಗುಡಿ ಪ್ರೀಮಿಯರ್ ಶೋ ಟಿಕೆಟ್‌ ಬುಕ್ಕಿಂಗ್ ಆರಂಭವಾಗಿತ್ತು. ಒಂದು ದಿನ ಕಳೆಯುವಷ್ಟರಲ್ಲೇ ಟಿಕೆಟ್ ಸೋಲ್ಡ್‌ ಔಟ್ ಆಗಿತ್ತು.

ಶುಕ್ರವಾರ (ಅಕ್ಟೋಬರ್‌ 28) ವಿಶ್ವಾದ್ಯಂತ ಸಿಂಗಲ್ ಸ್ಕ್ರೀನ್‌ಗಳಲ್ಲಿಯೂ ಪ್ರದರ್ಶನ ಶುರುವಾಗಲಿದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಗಂಧದ ಗುಡಿ ತೆರೆಗೆ ಬರುತ್ತಿದೆ. ಬೆಳಗ್ಗೆ 6 ಗಂಟೆಗೆ ಪ್ರಸನ್ನ ಥಿಯೇಟರ್, ಬೆಳಗ್ಗೆ 7 ಗಂಟೆಗೆ ವಿರೇಶ್ ಥಿಯೇಟರ್, 10 ಗಂಟೆಗೆ ಕೆಜಿ ರಸ್ತೆಯ ಪ್ರಮುಖ ಚಿತ್ರ ಮಂದಿರದಲ್ಲಿ ಬಿಡುಗಡೆಗೊಳ್ಳುತ್ತಿದೆ. ಒರಾಯನ್ ಮಾಲ್‌, ಜಿಟಿ ಮಾಲ್‌, ಪಿವಿಆರ್‌ಗಳಲ್ಲಿ ಒಟ್ಟು 50 ಶೋಗಳಿಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಕೆಆರ್‌ಜಿ ಸ್ಟುಡಿಯೋಸ್ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ | Puneeth Rajkumar | ಬೆನ್ನಿಗೆ ಅಪ್ಪು ಬಾವುಟ, ಗಂಧದ ಗುಡಿ ಪೋಸ್ಟರ್‌ ಕಟ್ಟಿಕೊಂಡು ದೇವಿರಮ್ಮ ಬೆಟ್ಟ ಹತ್ತಿದ ಅಭಿಮಾನಿ!

ರಾಜ್ಯದಲ್ಲಿ ವಿವಿಧೆಡೆ ಅಪ್ಪು ಕಟೌಟ್‌ಗಳು ಗಮನ ಸೆಳೆಯುತ್ತಿವೆ. ʻಗಂಧದ ಗುಡಿ’ ಚಿತ್ರವನ್ನು ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್‌ ರಾಜಕುಮಾರ್‌ ನಿರ್ಮಿಸಿದ್ದು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ | Puneeth Rajkumar | ಸಮುದ್ರದ ಆಳದಲ್ಲಿ ಪುನೀತ್‌ ʼಗಂಧದ ಗುಡಿʼಯ ಪ್ರಚಾರ!

Exit mobile version