ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ʻಗಂಧದ ಗುಡಿʼ ಸಿನಿಮಾ (Gandhada Gudi) ಶುಕ್ರವಾರ (ಅ 28) ರಾಜ್ಯಾದ್ಯಂತ ತೆರೆಕಂಡಿದ್ದು, ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಅಪ್ಪು ಅಭಿಮಾನಿಗಳು ತೆರೆ ಮೇಲೆ ಪುನೀತ್ ಅವರನ್ನು ಕಂಡು ಕುಣಿದು ಕುಪ್ಪಳಿಸಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಈ ಸಿನಿಮಾ ಕುರಿತು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಮಾಧ್ಯಮದವರೊಂದಿಗೆ ಸುಧಾಮೂರ್ತಿ ಮಾತನಾಡಿ ʻʻಈ ಸಿನಿಮಾ ಕನ್ನಡದಲ್ಲಿ ಬಂದಿರುವುದು ನೋಡಿ ಗರ್ವ ಬಂತು. ಪುನೀತ್ ಪ್ರಯತ್ನ ಹೆಮ್ಮೆ ತರುವಂತದ್ದು. ಗಂಧದ ಗುಡಿ ಸಿನಿಮಾದಲ್ಲಿ ಯುವಕರು ನೋಡಿ ಕಲಿಯುವಂತದ್ದು ಸಾಕಷ್ಟು ಇದೆ. ಉತ್ತರ ಕರ್ನಾಟಕದ ಬಗ್ಗೆ ಸಿನಿಮಾದಲ್ಲಿ ತೋರಿಸಿದಾಗ ಭಾವುಕಳಾದೆʼʼ ಎಂದು ಹೇಳಿಕೆ ನೀಡಿದರು.
ʻಪುನೀತ ಪರ್ವʼ ಕಾರ್ಯಕ್ರಮದಲ್ಲಿಯೂ ಅಪ್ಪು ಬಗ್ಗೆ ಮಾತನಾಡಿದ್ದ ಸುಧಾಮೂರ್ತಿ, ಅವರ ಜತೆಗೆ ಕಳೆದ ನೆನಪುಗಳನ್ನು ಹಂಚಿಕೊಂಡಿದ್ದರು. “ಅಪ್ಪು ಬಾಲನಟನಾಗಿ ನನಗೆ ಹೆಚ್ಚು ಆಪ್ತ. ಕಾಣದಂತೆ ಮಾಯವಾದನು ಹಾಡು ಇಷ್ಟ. ಬೆಟ್ಟದ ಹೂ, ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ರಾಜಕುಮಾರ ಸಿನಿಮಾ ನೋಡಿದ್ದೇನೆ. ನಾನು ಅವರನ್ನು ಯಾವಾಗ ಭೇಟಿಯಾದರೂ ವಿನಮ್ರವಾಗಿ ಮಾತನಾಡುತ್ತಿದ್ದರು. ನಿಮ್ಮನ್ನು ಅಪ್ಪು, ಪುನೀತ್ ಎನ್ನುವುದಕ್ಕಿಂತ ಲೋಹಿತ್ ಎನ್ನುವುದೇ ನನಗೆ ಇಷ್ಟ ಎಂದು ಯಾವಾಗಲೂ ಹೇಳುತ್ತಿದ್ದೆ. ಇದನ್ನು ಕೇಳಿ ಅವರು ನಗುತ್ತಿದ್ದರು” ಎಂದು ಸುಧಾ ಮೂರ್ತಿ ಹೇಳಿದ್ದರು.
ಇದನ್ನೂ ಓದಿ | Gandhada Gudi | ಗಂಧದ ಗುಡಿಗೆ ಅದ್ಧೂರಿ ಸ್ವಾಗತ; ಸಾರೋಟಿಯಲ್ಲಿ ಮೆರವಣಿಗೆ ಮಾಡಿದ ಅಭಿಮಾನಿಗಳು