Site icon Vistara News

Gandhada Gudi | ಇದು ಯಾರ ತಪಸಿನ ಫಲವೋ, ಈ ಕಂಗಳು ಮಾಡಿದ ಪುಣ್ಯವೋ ಅಂದ್ರು ಫ್ಯಾನ್ಸ್‌!

Gandhada Gudi

ಬೆಂಗಳೂರು : ಪುನೀತ್‌ ರಾಜಕುಮಾರ್‌ ಅಭಿನಯದ ʻಗಂಧದ ಗುಡಿʼ (Gandhada Gudi) ಸಿನಿಮಾ ಅಕ್ಟೋಬರ್‌ 28ರಂದು ರಾಜ್ಯಾದ್ಯಂತ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ತೆರೆ ಮೇಲೆ ತಮ್ಮ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ.

ಸ್ಯಾಂಡಲ್‌ವುಡ್‌ ನಟ ರಿಷಿ ಟ್ವೀಟ್‌ನಲ್ಲಿ ʻʻಗಂಧದ ಗುಡಿ ಸಿನಿಮಾ ಒಂದು ಹೃದಯಸ್ಪರ್ಶಿ ಅನುಭವ. ಪುನೀತ್ ಸರ್ ಅವರು ತಮ್ಮ ಸಂತೋಷ ಮತ್ತು ಭಯವನ್ನು ಹಂಚಿಕೊಂಡಿರುವುದು ಅತ್ಯಮೂಲ್ಯವಾಗಿದೆ. ನಮ್ಮದೇ ಭೂಮಿಯನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತಿದ್ದೇನೆ. ವಿಶ್ವದರ್ಜೆಯ ಮಟ್ಟದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಿ ನಮಗೆ ನೀಡಿರುವುದು ಅದ್ಭುತ. ಇಡೀ ತಂಡಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Gandhada Gudi | 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ʻಗಂಧದ ಗುಡಿʼ ಸಿನಿಮಾ!

ʻʻಇದು ಯಾರ ತಪಸಿನ ಫಲವೋ.. ಈ ಕಂಗಳು ಮಾಡಿದ ಪುಣ್ಯವೋ..! ಕರ್ನಾಟಕದ ಭವ್ಯ ಪ್ರಕೃತಿಯನ್ನು ಅದ್ಭುತವಾಗಿ ಅನ್ವೇಷಣೆ ಮಾಡಿ, ಸರಳವಾಗಿ ತೆರೆಮೇಲೆ ತೋರಿಸಲಾಗಿದೆ” ಎಂದು ಅಪ್ಪು ಅಭಿಮಾನಿ ಶ್ರೇಯಸ್ ಪ್ರಕಾಶ್ ಎಂಬವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಂಠೀರವ ಸ್ಟುಡಿಯೊ ಬಳಿ ರಸ್ತೆಯುದ್ದಕ್ಕೂ ಪುನೀತ್‌ ರಾಜಕುಮಾರ್‌ ಅವರ 40ಕ್ಕೂ ಅಧಿಕ ಕಟೌಟ್‌ಗಳು ರಾರಾಜಿಸುತ್ತಿವೆ. ಒಂದೊಂದು ಕಟೌಟ್ 30 ಅಡಿ ಎತ್ತರವಿದ್ದು, ಎಲ್ಲ ಕಟೌಟ್‌ಗೆ ದೊಡ್ಡ ದೊಡ್ಡ ಹೂವಿನ ಹಾರ ಹಾಕಿ ಅಲಂಕರಿಸಲಾಗಿದೆ.

ಇದನ್ನೂ ಓದಿ | Gandhada Gudi 2022 | ಅಪ್ಪು ಕನಸಿನ ಚಿತ್ರಕ್ಕೆ ಕೌಂಟ್‌ಡೌನ್‌; ಹಬ್ಬದಂತೆ ಸಂಭ್ರಮಿಸುತ್ತಿರುವ ಅಭಿಮಾನಿ ದೇವರುಗಳು

Exit mobile version