Site icon Vistara News

Gandhadagudi on OTT: ಒಟಿಟಿಗೆ ಬರಲು ಸಜ್ಜಾಯ್ತು ಪುನೀತ್‌ ಗಂಧದ ಗುಡಿ

#image_title

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಗಂಧದ ಗುಡಿ ಡಾಕ್ಯುಫಿಲಂನಲ್ಲಿ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆರೆ ಕಂಡಿದ್ದ ಈ ಡಾಕ್ಯುಫಿಲಂ ಇದೀಗ ಒಟಿಟಿಗೆ (Gandhadagudi on OTT) ಬರಲು ಸಜ್ಜಾಗಿದೆ.

ಇದನ್ನೂ ಓದಿ: Puneeth Rajkumar: ಸಿಂಧನೂರಲ್ಲಿ ಪುನೀತ್‌ ಪುತ್ಥಳಿ ಗಲಾಟೆ; ತಡೆಯಲು ಹೋದ ಪಿಎಸ್‌ಐಗೆ ಹೊಡೆದರೇ ಅಭಿಷೇಕ್‌ ನಾಡಗೌಡ?
ಗಂಧದಗುಡಿ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವಾದ ಮಾರ್ಚ್‌ 17ರಂದೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಪಿಆರ್‌ಕೆ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಪುನೀತ್‌ ಅವರ ಪತ್ನಿ ಅಶ್ವಿನಿ ಪುನೀತ್‌ ಅವರು ಈ ಡಾಕ್ಯುಫಿಲಂ ಅನ್ನು ನಿರ್ಮಾಣ ಮಾಡಿದ್ದಾರೆ. ವೈಲ್ಡ್‌ ಕರ್ನಾಟಕ ಖ್ಯಾತಿಯ ಅಮೋಘವರ್ಷ ಇದರಲ್ಲಿದ್ದಾರೆ.‌

“ಗಂಧದಗುಡಿ ಅಪ್ಪು ಕನಸಿನ ಯೋಜನೆ. ಪರಿಸರ ರಕ್ಷಣೆಗಾಗಿ ಏನಾದರೂ ಮಾಡಬೇಕು ಎಂದು ಯಾವಾಗಲೂ ಅವರೆಂದುಕೊಳ್ಳುತ್ತಿದ್ದರು. ಈ ಸಿನಿಮಾವನ್ನು ಅಪ್ಪು ಅಭಿಮಾನಿಗಳು ಮೆಚ್ಚಿದ್ದಾರೆ. ಅಪ್ಪುವಿನ ಈ ಪಯಣವನ್ನು ಇಡೀ ವಿಶ್ವ ನೋಡಬೇಕೆಂಬ ಆಸೆ ನಮಗಿದೆ” ಎಂದು ಅಶ್ವಿನಿ ಪುನೀತ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ: Puneeth Rajkumar: ಪುನೀತ್‌ ಅಭಿನಯದ ಟಾಪ್ 10 ಚಿತ್ರಗಳಿವು
ಅಪ್ಪು ಮತ್ತು ಅಮೋಘವರ್ಷ ಕಾಡು-ಮೇಡು, ಬೆಟ್ಟ-ಗುಡ್ಡಗಳನ್ನು ಸುತ್ತುವುದನ್ನು ಈ ಡಾಕ್ಯುಫಿಲಂನಲ್ಲಿ ಕಾಣಬಹುದು. ಇದರಲ್ಲಿ ಅಪ್ಪು ತಮ್ಮ ಅನೇಕ ಆಪ್ತ ಸಂಗತಿಗಳನ್ನು ಅಮೋಘವರ್ಷ ಅವರ ಎದುರು ಬಿಚ್ಚಿಟ್ಟಿದ್ದಾರೆ. ಅಕ್ಟೋಬರ್‌ 28ರಂದು ಈ ಡಾಕ್ಯುಫಿಲಂ ರಾಜ್ಯದ 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

Exit mobile version