ಬೆಂಗಳೂರು: ಮಿಸ್ಸಿಂಗ್ ಕೇಸಿನ ಬೆನ್ನು ಹತ್ತುವ, ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ದೃಶ್ಯಗಳನ್ನು ಪೋಣಿಸಿದ ಮೈನವಿರೇಳಿಸುವ ಚಿತ್ರಣ: ಇದು ವಿಜಯ ದಶಮಿ (Vijayadashami) ಶುಭದಿನದಂದು ಬಿಡುಗಡೆಯಾದ ಗರುಡ ಪುರಾಣ (Garud purana Movie) ಚಿತ್ರದ ಟ್ರೈಲರ್ ವಿಶೇಷತೆ. ಈ ಟ್ರೈಕರ್ ಬಗ್ಗೆ ಸ್ಯಾಂಡಲ್‌ವುಡ್ ನಟರುಗಳು ಮೆಚ್ಚುಗೆಯನ್ನು ವ್ಯಕತಪಡಿಸಿದ್ದಾರೆ. ನೆನಪಿರಲಿ ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಸಿನಿಮಾ ಟ್ರೈಲರ್ ಬಗ್ಗೆ ಹೊಗಳಿದ್ದಾರೆ.
27 ಫ್ರೇಮ್ ಕ್ರಿಯೇಷನ್ಸ್ (27 Frame Creations) ಲಾಂಛನದಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಬಿ ನಾಗಬಾ (Manjunath B Nagaba) ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ ಗರುಡ ಪುರಾಣ ಚಿತ್ರದ ಟ್ರೇಲರ್‌ನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡಿದರು.ಚಿತ್ರದ ಟ್ರೇಲರ್ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ನವೆಂಬರ್ 3ರಂದು ಚಿತ್ರ ತೆರೆಗೆ ಬರಲಿದೆ. ಜನಪ್ರಿಯ ಕಾಂತಾರ ಸೇರಿದಂತೆ ಅನೇಕ ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯನಿರ್ವಹಿಸಿರುವ ಮಂಜುನಾಥ್ ಬಿ ನಾಗಬಾ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.
ಚಿತ್ರದ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ “ಗರುಡ ಪುರಾಣ” ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ ಎಂದು ಚಿತ್ರ ತಂಡ ಹೇಳಿದೆ. ಗರುಡ ಪುರಾಣ ಚಿತ್ರದ ನಾಯಕನಾಗಿ ಮಂಜುನಾಥ್ ಬಿ ನಾಗಬಾ ನಟಿಸಿದ್ದಾರೆ, ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. “ಭಜರಂಗಿ” ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: Garuda Purana Movie : ವಿಜಯದಶಮಿಗೆ ಬಂತು ಗರುಡ ಪುರಾಣ ಟ್ರೇಲರ್; ಇದು ಸಸ್ಪೆನ್ಸ್ ಥ್ರಿಲ್ಲರ್
ಪುನೀತ್ ಆರ್ಯ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ರಾಕೇಶ್ ಆಚಾರ್ಯ ಸಂಗೀತ ನೀಡಿದ್ದಾರೆ. ಸುನೀಲ್ ನರಸಿಂಹಮೂರ್ತಿ “ಗರುಡ ಪುರಾಣ” ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.
ಗರುಡ ಪುರಾಣ ಹೆಸರು ಯಾಕೆ? ಈ ಸಿನಿಮಾಕ್ಕೆ ಗರುಡ ಪುರಾಣ ಎಂದು ಯಾಕೆ ಹೆಸರಿಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ, ಮಂಜುನಾಥ್ ಬಿ. ನಾಗಬಾ ಅವರು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂಬ ಅಂಶ ಚಿತ್ರದಲ್ಲಿರುವುದರಿಂದ ಅದಕ್ಕೆ ಕನೆಕ್ಟ್ ಆಗಿ ಗರುಡ ಪುರಾಣ ಎಂದು ಹೆಸರು ಇಡಲಾಗಿದೆ.
ನಾಯಕಿ ದಿಶಾ ಶೆಟ್ಟಿ, ಭಜರಂಗಿ ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜ್ ಕುಮಾರ್, ಮಹೇಂದ್ರ ಗೌಡ ತಮ್ಮ ಪಾತ್ರಗಳ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಹಾಡುಗಳ ಬಗ್ಗೆ ಮತ್ತು ಸುನಿಲ್ ನರಸಿಂಹ ಮೂರ್ತಿ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು. ನವೆಂಬರ್ 3ಕ್ಕೆ ಸಿನಿಮಾ ತೆರೆ ಕಾಣಲಿದೆ.