Site icon Vistara News

Actor Darshan: `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ಎಂದ ದರ್ಶನ್‌ಗೆ ಧಿಕ್ಕಾರ ಎಂದಿದೆ ಗೌಡತಿಯರ ಸೇನೆ!

Gaudati sene angry on anti-women Darshan statement

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಕನ್ನಡ ಚಿತ್ರರಂಗಕ್ಕೆ (Actor Darshan) ಪದಾರ್ಪಣೆ ಮಾಡಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಯಾವುದೇ ಮುಚ್ಚು ಮರೆಯಿಲ್ಲದೇ ಹಂಚಿಕೊಂಡರು. ಇಷ್ಟೆಲ್ಲ ಮಾತಾಡಿ ʻʻಕೊನೆಗೆ ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದಿದ್ದರುʼʼ ದರ್ಶನ್. ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆ ಈಗ ವಿವಾದ ಸೃಷ್ಟಿಯಾಗಿದೆ. ಗೌಡತಿಯರ ಸೇನೆಯಿಂದ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಜಯಶ್ರೀ , ರೇಣುಕಾ ನೇತೃತ್ವದಲ್ಲಿ ದೂರು ಸಲ್ಲಿಕೆಯಾಗಿದೆ.

`ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ಎಂದು ಜವಾಬ್ದಾರಿಯುತ ನಟ ಈ ರೀತಿ ಸಾರ್ವಜನಿಕವಾಗಿ ಬಳಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ʻʻದರ್ಶನ್‌ ಅವರು ಯುವಕರಿಗೆ ಮಾದರಿ ನಟ. ಸಾರ್ವಜನಿಕ ಸಭೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳು ಭಾವನೆಯಿಂದ ʻಒಬ್ಬಳು ಹೋಗುತ್ತಾಳೆ ಒಬ್ಬಳು ಬರುತ್ತಾಳೆʼ, ʻಅವಳ ಅಜ್ಜಿನ ಬಡಿಯʼ ಎಂದು ಉಡಾಫೆಯಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿ ಚು೦ಚನಗಿರಿ ಗುರುಗಳು, ಸಂಸದೆ ಸಮಲತಾ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಮಾಜಕ್ಕೆ ಮಾದರಿ ಆಗಬೇಕಿದ್ದ ನಟ ಸಾರ್ವಜನಿಕವಾಗಿ ಈ ರೀತಿ ಮಾತನಾಡಿದ್ದು, ಅಕ್ಷಮ್ಯ ಅಪರಾಧ. ಇದೀಗ ಆತ ಬಳಸಿದ ಪದಗಳು ಯಾವ ಭಾವನೆಯಿಂದ ಹೇಳಿದ್ದಾರೆ ಎಂದು ವಿವರಣೆ ಕೇಳಬೇಕಾಗಿ ವಿನಂತಿ ಎಂದು ಕೋರಿದ್ದಾರೆ.

ಇದನ್ನೂ ಓದಿ: Actor Darshan: 6.2 ಅಡಿ ಎತ್ತರದ ದರ್ಶನ್ ಚಾಕೊಲೇಟ್ ಪ್ರತಿಮೆ ಅನಾವರಣ: ಸ್ನೇಹಿತರ ಬಿಗ್‌ ಸರ್ಪ್ರೈಸ್​

ಈ ಹಿಂದೆಯೂ ಈ ನಟ ಹೆಂಡತಿಗೆ ಸಿಗರೇಟ್‌ನಿಂದ ಸುಟ್ಟು ಮಾನಸಿಕವಾಗಿ ಕಿರುಕುಳ ಕೊಟ್ಟು ಜೈಲು ಪಾಲಾಗಿದ್ದು ಗೊತ್ತೇ ಇದೆ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆಬಿಚ್ಚಿ ರೂಮಿನಲ್ಲಿ, ಕೂಡಿಹಾಕಿ ಎಂಬ ಹೇಳಿಕೆ ನೀಡಿ ಹೆಣ್ಣುಮಕ್ಕಳು ಮುಜುಗರ ಆಗುವಂತೆ ಮಾಡಿರುತ್ತಾರೆ. ಮಾದರಿ ನಾಯಕ ಯುವಜನತೆಗೆ ನೀಡುತ್ತಿರುವ ಸ೦ದೇಶ ಏನು? ಯುವ ಜನತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಹೆಣ್ಣುಮಕ್ಕಳ ಬಗೆಗಿನ ಅವರ ದೃಷ್ಟಿಕೋನ ಬದಲಾಗಬಹುದು. ದರ್ಶನ್‌ ಸಂಪೂರ್ಣ ಬದಲಾಗಬೇಕು. ಬದಲಾವಣೆ ಆಗದಿದ್ದರೆ ಹೆಣ್ಣುಮಕ್ಕಳನ್ನು ತೆರೆಯಮೇಲೆ ಗೌರವಿಸಿದಂತೆ ತೆರೆಯ ಹಿಂದೆಯೂ ಗೌರವಿಸಬೇಕು.

ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡಲು ಸಿದ್ಧರಿದ್ದೇವೆ. ಮುಂದೆ ಸಾರ್ವಜನಿಕವಾಗಿ ಈ ರೀತಿಯಲ್ಲಿ ಮಾತನಾಡದಂತ ಎಚ್ಚರಿಕೆ ನೀಡಬೇಕುʼʼ ಎಂದು ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

Exit mobile version