Geetha Shivarajkumar: ಸರಳವಾಗಿ ಜನುಮದಿನವನ್ನು ಆಚರಿಸಿಕೊಂಡ ಗೀತಾ ಶಿವರಾಜ್‌ಕುಮಾರ್ Yashaswi Devadiga 2 ವರ್ಷಗಳು ago ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಸರಳವಾಗಿ ಜನುಮದಿನವನ್ನು ಆಚರಿಸಿಕೊಂಡರು. ನಿರ್ಮಾಪಕಿ, ರಾಜಕಾರಣಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಶಿವರಾಜ್‌ಕುಮಾರ್ ಹಾಗೂ ಅವರ ಆಪ್ತರು ಸಿಂಪಲ್ ಆಗಿ ಜನುಮದಿನವನ್ನು ಆಚರಿಸಿದ್ದಾರೆ. ಶಿವರಾಜ್‌ಕುಮಾರ್ ಅವರ ಜತೆ ಅವರ ಶೂಟಿಂಗ್ ಸ್ಪಾಟ್, ಪ್ರಮೋಷನ್ಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಗೀತಾ ಶಿವರಾಜ್‌ಕುಮಾರ್ ಹಿಂದಿಗಿಂತಲೂ ಹೆಚ್ಚಾಗಿ ಈಗ ಸಾರ್ವಜನಿಕವಾಗಿ ಬೆರೆಯುತ್ತಿದ್ದಾರೆ. ಇದನ್ನೂ ಓದಿ: Shivarajkumar: ಮತ್ತೆ ಬಂದ ʻಭೈರತಿ ರಣಗಲ್ʼ: ನರ್ತನ್ ಆ್ಯಕ್ಷನ್ ಕಟ್! ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ ‘ವೇದ’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಯಶಸ್ಸು ಕಂಡಿತು. ಮೊದಲ ನಿರ್ಮಾಣದಲ್ಲೇ ಅವರು ಗೆಲುವು ಕಂಡಿದ್ದಾರೆ. ಇತ್ತೀಚೆಗೆ ಅವರು ಕಾಂಗ್ರೆಸ್ ಸೇರಿದ್ದು, ಪಕ್ಷ ಅಧಿಕಾರಕ್ಕೆ ಬಂದಿದೆ.