ಬೆಂಗಳೂರು : ಹತ್ತು ವರ್ಷಗಳ ಬ್ರೇಕ್ ನಂತರ ಬಾಲಿವುಡ್ ನಟಿ ಜೆನಿಲಿಯಾ ದೇಶಮುಖ್ (Genelia Deshmukh) ಅವರು ಸಿನಿರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ವಿವಿಧ ಭಾಷೆಗಳ ಚಿತ್ರಗಳ ಮೂಲಕ ಚಿತ್ರೀಕರಣಕ್ಕೆ ಬರಲು ಸಜ್ಜಾಗಿದ್ದಾರೆ. ”ಮಿಸ್ಟರ್ ಮಮ್ಮಿ” ಮತ್ತು ”ಟ್ರಯಲ್ ಪೀರಿಯಡ್” ಎಂಬ ಎರಡು ಹಿಂದಿ ಚಿತ್ರಗಳಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಕಿರೀಟಿ (Kireeti Damaraju) ನಟನೆಯ ಕನ್ನಡ-ತೆಲುಗು ಭಾಷೆಯ ಹೆಸರಿಡದ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ಪತಿ ರಿತೇಶ್ ದೇಶ್‌ಮುಖ್ ನಿರ್ದೇಶಿಸಲಿರುವ ʻʻವೇದ್ʼʼ ಎಂಬ ಚೊಚ್ಚಲ ಮರಾಠಿ ಚಿತ್ರಕ್ಕಾಗಿ ಅವರು ಸಜ್ಜಾಗುತ್ತಿದ್ದಾರೆ.
ಒಂದು ದಶಕದ ನಂತರ ಕ್ಯಾಮರಾವನ್ನು ಎದುರಿಸಲು ತಾನು ಹೆಚ್ಚು ಹೆದರುತ್ತಿದ್ದೇನೆ ಎಂದು ಜೆನಿಲಿಯಾ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿ “ನಾನು ತುಂಬಾ ವರುಷಗಳ ನಂತರ ಕ್ಯಾಮೆರಾ ಮುಂದೆ ಬರಲು ಉತ್ಸುಕನಾಗಿದ್ದೇನೆ. ಮತ್ತು ನಟನೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಸಿನಿಮಾದ ಕಥೆ ಮತ್ತು ಸ್ಕ್ರಿಪ್ಟ್ ಅನ್ನು ಅರ್ಥೈಸಿಕೊಳ್ಳುವುದು ಹಾಗೂ ಅದನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ನಟನೆ ಮಾಡುವುದು ಮುಖ್ಯವಾಗುತ್ತದೆʼʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Sonam Kapoor | ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಸೋನಂ ಕಪೂರ್
ಜೆನಿಲಿಯಾ ಕಳೆದ ಕೆಲವು ವರ್ಷಗಳಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ 2012ರಲ್ಲಿ ತೆರೆ ಕಂಡ ʻʻತೇರೆ ನಾಲ್ ಲವ್ ಹೋ ಗಯಾʼʼ ಮತ್ತು ʻʻನಾ ಇಷ್ಟಂʼʼ ಎರಡೂ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಹೋಮ್‌ಮೇಕರ್ ಆಗಿದ್ದರು ರಿತೇಶ್!
ಕೆಲಸದಿಂದ ಬ್ರೇಕ್ ತೆಗೆದುಕೊಂಡಾಗ ನಟಿ ಹೆಚ್ಚಾಗಿ ತಮ್ಮ ಮಕ್ಕಳೊಂದಿಗೆ ರಿಯಾನ್ ಮತ್ತು ರಾಹಿಲ್‌ನೊಂದಿಗೆ ಕಳೆದಿದ್ದರು. ಕುಟುಂಬದ ಬಗ್ಗೆ ಮಾತನಾಡಿ ʻʻಔಟ್ ಡೋರ್ ಶೂಟಿಂಗ್ ಇದ್ದಾಗ ಕುಟುಂಬವನ್ನು ಬಿಟ್ಟು ಇರುವುದು ಅಷ್ಟು ಸುಲಭದ ಮಾತಲ್ಲ. ಆದರೆ ರಿತೇಶ್ ಅವರು ತಂದೆಯಾಗಿ ಆ ಕೆಲಸ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೇ ರಿತೇಶ್ ತುಂಬಾ ಸಪೋರ್ಟಿವ್. ನಮ್ಮ ಸಮಯಕ್ಕೆ ಅನುಗುಣವಾಗಿ ನಾವು ದಿನಚರಿಯನ್ನು ನಿಗದಿಪಡಿಸಿಕೊಳ್ಳುತ್ತೇವೆ. ನಾನು ಶೂಟಿಂಗ್‌ನಲ್ಲಿ ಇದ್ದಾಗ ರಿತೇಶ್ ಅವರು ಹೋಮ್‌ಮೇಕರ್ ಆಗುತ್ತಾರೆ. ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಒಮ್ಮೆ ನಾನು ದೆಹಲಿಯಲ್ಲಿದ್ದಾಗ ನನ್ನೊಂದಿಗೆ ನನ್ನ ಮನೆ ಇಲ್ಲ ಎಂದು ನನಗೆ ಅನಿಸದಂತೆ ಮಕ್ಕಳನ್ನು ನೋಡಿಕೊಂಡಿದ್ದರುʼʼಎಂದರು.
ವೃತ್ತಿ ಜೀವನ ಒಂದು ಸವಾಲು !
ತಾಯಿ ಆದವಳ ವೃತ್ತಿ ಜೀವನದ ಕುರಿತು ಮಾತನಾಡಿ ʻʻಮಕ್ಕಳು ಶಾಲೆಗೆ ಹೋಗುವ ವಯಸ್ಸಿನಲ್ಲಿ ತಮ್ಮ ತಾಯಿ ಕೆಲಸ ಮಾಡಬೇಕೆಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ಅದನ್ನು ಅವರಿಗೆ ತಿಳಿಸುವುದು ಬಹಳ ಮುಖ್ಯ. ಏಕೆಂದರೆ ಅವರು ನಮ್ಮನ್ನು ಗೌರವಿಸುತ್ತಾರೆ, ಪ್ರಶಂಸಿಸುತ್ತಾರೆ ಮತ್ತು ಕಲಿಯುತ್ತಾರೆ, ಇದು ಅತ್ಯಂತ ಮುಖ್ಯವಾದ ವಿಷಯವಾಗಿದೆʼʼ ಎಂದರು.
ತಮ್ಮ ಫಿಟ್‌ನೆಸ್ ಕುರಿತು ಮಾತನಾಡಿ ʻʻಈ ವರ್ಷದ ಜೂನ್ ತಿಂಗಳಲ್ಲಿ ಪ್ರಾರಂಭಿಸಿದ ಆರು ವಾರಗಳ ದೀರ್ಘ ಫಿಟ್‌ನೆಸ್ ಪ್ರಯಾಣ ನನ್ನದಾಗಿತ್ತು. ಜಿಮ್ ವರ್ಕೌಟ್ ವಿಭಿನ್ನವಾಗಿತ್ತು ಮತ್ತು ನನ್ನ ತರಬೇತುದಾರ ಇರಲಿಲ್ಲವಾದ್ದರಿಂದ ಮತ್ತೊಂದು ಲೊಕೇಶನ್‌ನಲ್ಲಿ ಚಿತ್ರೀಕರಣವನ್ನು ಪುನರಾರಂಭಿಸುವುದು ನಿಜವಾಗಿಯೂ ಕಠಿಣವಾಗಿತ್ತು. ರಾತ್ರಿ ಶೂಟಿಂಗ್ ಇದ್ದ ಕಾರಣ ದೇಹ ಕೂಡ ಸಪೋರ್ಟ್ ಮಾಡುತ್ತಿರಲಿಲ್ಲ. ಆರೋಗ್ಯವೂ ಹಾಳಾಗಿತ್ತು. ಆಹಾರವು ಕೂಡ ತುಂಬಾ ಅಚ್ಚುಕಟ್ಟಾಗಿರಬೇಕಿತ್ತು. ಅದನ್ನು ಅನುಸರಿಸುವುದು ಸ್ವಲ್ಪ ಸವಾಲಾಗಿತ್ತುʼʼ ಎಂದರು.
ಇದನ್ನೂ ಓದಿ | Mithilesh Chaturvedi | ಬಾಲಿವುಡ್ ಖ್ಯಾತ ನಟ ಮಿಥಿಲೇಶ್ ಚತುರ್ವೇದಿ ನಿಧನ