ಬೆಂಗಳೂರು: ʻಗಜನಿʼ ಸಿನಿಮಾ ಖ್ಯಾತಿಯ ನಟಿ ಆಸಿನ್ (Ghajini Actress Asin) ವೈವಾಹಿಕ ಬದುಕಿನ ವಿಚಾರವಾಗಿ ಈಗ ಸುದ್ದಿಯಲ್ಲಿದ್ದಾರೆ. ಗಂಡನಿಂದ ನಟಿ ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ನಟಿ ಈ ಬಗ್ಗೆ ಸ್ಪಷನೆ ನೀಡಿದ್ದಾರೆ. ʻʻನನ್ನ 5 ನಿಮಿಷ ಈ ವಿಷಯಕ್ಕಾಗಿ ಹಾಳಾಯ್ತುʼʼಎಂದು ನಟಿ ಇನ್‌ಸ್ಟಾ ಸ್ಟೋರಿಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಮದುವೆ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವೇ ಇದ್ದ ಅವರು ಪತಿ ರಾಹುಲ್ ಶರ್ಮಾ ಅವರಿಗೆ ಆಸಿನ್ ಡಿವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದಕ್ಕೆ ಪೂರಕ ಎಂಬಂತೆ ಪತಿಯೊಂದಿಗಿನ ಫೋಟೊಗಳನ್ನು ನಟಿ ಡಿಲೀಟ್ ಮಾಡಿದ್ದರು. ಆದರೀಗ ನಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ʻʻಈ ಬೇಸಿಗೆ ರಜೆಯ ನಡುವೆ, ಇಬ್ಬರೂ ಒಟ್ಟಿಗೆ ಕುಳಿತು ಬ್ರೇಕ್‌ಫಾಸ್ಟ್ ಸವಿಯುತ್ತಿರುವಾಗ ಕೆಲವು ಆಧಾರರಹಿತ, ಕಾಲ್ಪನಿಕ ಸುದ್ದಿಯನ್ನು ಗಮನಿಸಿದೆ. ನಮ್ಮ ಮದುವೆಯ ಬಗ್ಗೆ ನಾವು ಮಾತನಾಡಿಕೊಳ್ಳುತ್ತಿರುವಾಗ, ನೀವು ನೋಡಿದರೆ ನಾವು ಬೇರ್ಪಟ್ಟಿದ್ದೇವೆ ಎಂದು ಹೇಳುತ್ತಿದ್ದೀರಿ. ಇದು ನಿಜವೇ? ಈ ರಜೆಯ ಮಜ ಅನುಭವಿಸುವ ಈ ಸಂದರ್ಭದಲ್ಲಿ ನನ್ನ 5 ನಿಮಿಷ ಸಮಯ ಇದಕ್ಕಾಗಿ ಹಾಳಾಯ್ತು” ಎಂದು ಇನ್‌ಸ್ಟಾ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Ghajini Actress Asin: ʻಗಜನಿʼ ಸಿನಿಮಾ ಖ್ಯಾತಿಯ ನಟಿ ಆಸಿನ್ ವೈವಾಹಿಕ ಬದುಕಿನಲ್ಲಿ ಬಿರುಕು!
ಆಸಿನ್ ಅವರು ಮೈಕ್ರೋಮ್ಯಾಕ್ಸ್ ಫೌಂಡರ್ ರಾಹುಲ್ ಶರ್ಮಾ ಅವರನ್ನು 2016ರಲ್ಲಿ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಆಗಿದ್ದರು. ದಂಪತಿಗೆ ಮಗಳಿದ್ದಾಳೆ. ಮದುವೆ ನಂತರ ಅವರು ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದರು. 2015ರಲ್ಲಿ ರಿಲೀಸ್ ಆಗಿದ್ದ ‘ಗಜನಿ’ ಚಿತ್ರದ ಆಮೀರ್ ಖಾನ್‌ಗೆ ಆಸಿನ್ ನಾಯಕಿಯಾಗಿದ್ದರು.
ಆಸಿನ್ 2001ರಲ್ಲಿ `ನರೇಂದ್ರನ್ ಮಕನ್ ಜಯಕಾಂತನ್ ವಕಾ’ ಚಿತ್ರದ ಮೂಲಕ ನಟಿಯಾಗಿ ಪದಾರ್ಪಣೆ ಮಾಡಿದ್ದರು. ಮಲಯಾಳಂ, ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದರು.