Site icon Vistara News

Ghajini Actress Asin: ʻಗಜನಿʼ ಸಿನಿಮಾ ಖ್ಯಾತಿಯ ನಟಿ ಆಸಿನ್ ವೈವಾಹಿಕ ಬದುಕಿನಲ್ಲಿ ಬಿರುಕು!

Ghajini Actor Asin

ಗಜನಿ, ಲಂಡನ್ ಡ್ರೀಮ್ಸ್, ರೆಡಿ, ಹೌಸ್‌ಫುಲ್ 2 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಸಿನ್ (Ghajini Actress Asin) ವೈವಾಹಿಕ ಬದುಕಿನ ವಿಚಾರವಾಗಿ ಈಗ ಸುದ್ದಿಯಲ್ಲಿದ್ದಾರೆ. ಮದುವೆ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವೇ ಇದ್ದ ಅವರು ಈಗ ಫ್ಯಾನ್ಸ್​ಗೆ ಬೇಸರದ ಸುದ್ದಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಪತಿ ರಾಹುಲ್ ಶರ್ಮಾ ಅವರಿಗೆ ಆಸಿನ್ ಡಿವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿ ಇದೀಗ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪತಿಯೊಂದಿಗಿನ ಫೋಟೊಗಳನ್ನು ನಟಿ ಡಿಲಿಟ್‌ ಮಾಡಿದ್ದಾರೆ.

ರಾಹುಲ್ ಜತೆಗಿನ ಎಲ್ಲಾ ಫೋಟೊಗಳನ್ನು ನಟಿ ಡಿಲೀಟ್ ಮಾಡಿದ್ದು, ಇದೀಗ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಆಸಿನ್ ಅವರು ಮೈಕ್ರೋಮ್ಯಾಕ್ಸ್ ಫೌಂಡರ್ ರಾಹುಲ್ ಶರ್ಮಾ ಅವರನ್ನು 2016ರಲ್ಲಿ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಆಗಿದ್ದರು. ದಂಪತಿಗೆ ಮಗಳಿದ್ದಾಳೆ. ಮದುವೆ ನಂತರ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳಿದ್ದರು. 2015ರಲ್ಲಿ ರಿಲೀಸ್ ಆಗಿದ್ದ ‘ಗಜನಿ’ ಚಿತ್ರದ ಆಮೀರ್ ಖಾನ್‌ಗೆ ಅಸಿನ್ ನಾಯಕಿಯಾಗಿದ್ದರು.

ಇದನ್ನೂ ಓದಿ: Niharika Konidela: ನಿಹಾರಿಕಾ ದಾಂಪತ್ಯದಲ್ಲಿ ಬಿರುಕು ಪಕ್ಕಾ ಅಂದ್ರು ನೆಟ್ಟಿಗರು; ಫೋಟೊದಿಂದಾಗಿ ಹೆಚ್ಚಾಯ್ತು ಗಾಸಿಪ್‌!

ಆಸಿನ್ 2001ರಲ್ಲಿ `ನರೇಂದ್ರನ್ ಮಕನ್ ಜಯಕಾಂತನ್ ವಕಾ’ ಚಿತ್ರದ ಮೂಲಕ ನಟಿಯಾಗಿ ಪದಾರ್ಪಣೆ ಮಾಡಿದ್ದರು. ಮಲಯಾಳಂ, ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದರು. ಇದೀಗ ಆಸಿನ್- ರಾಹುಲ್ ನಡುವೆ ಮನಸ್ತಾಪ ತಲೆದೋರಿದೆ. ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ನಟಿ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

Exit mobile version