Site icon Vistara News

Ambareesh Birthday: ಅಂಬರೀಶ್‌ ಸಿನಿಮಾಗಳ ಹಾಡಿನ ರೀಲ್ಸ್‌ನಲ್ಲಿ ಕಮಾಲ್ ಮಾಡಿದ ಅಭಿಷೇಕ್‌-ಅವಿವ ಬಿಡಪ ಜೋಡಿ

ambareesh birthday special reels

ನಟ ಅಂಬರೀಶ್–ಸುಮಲತಾ ಪುತ್ರ, ಯಂಗ್‌ ರೆಬೆಲ್ ಸ್ಟಾರ್‌ ಅಭಿಷೇಕ್ ಅಂಬರೀಶ್ ವಿವಾಹ (Abhishek Ambareesh Wedding) ಮುಹೂರ್ತ ಫಿಕ್ಸ್‌ ಆಗಿದೆ. ಜೂನ್ 5ರಂದು ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ.

ಇದೀಗ ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವ ಬಿಡಪ ಜೋಡಿ ಅಂಬರೀಶ್‌ ಅವರ ಜನುಮದಿನಕ್ಕೆ (Ambareesh Birthday) ಸ್ಪೆಶಲ್ ರೀಲ್ಸ್ ಹಂಚಿಕೊಂಡಿದೆ.

ಮಂಡ್ಯದ ಗಂಡು, ಒಲವಿನ ಉಡುಗೊರೆ ಹಾಡಿನ ರೀಲ್ಸ್‌ನಲ್ಲಿ ಕಮಾಲ್ ಮಾಡಿದೆ ಅಭಿಷೇಕ್‌-ಅವಿವ ಜೋಡಿ. ಹಾಡಿನಲ್ಲಿ ಅವಿವ ಬಿಡಪ ನಾಚಿ ನೀರಾಗಿದ್ದಾರೆ.

ಮಂಡ್ಯದ ಗಂಡು, ಹೇ ಜಲೀಲ ಹಾಡಿನಲ್ಲಿ ಅಪ್ಪನಂತೆ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಮಿಂಚಿದ್ದಾರೆ.

ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವ ಬಿಡಪ ಪ್ರೀತಿಸುತ್ತಿದ್ದರು. ಸದ್ಯ ಜೋಡಿ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Exit mobile version